ಸೋತವಳ ಮಾತು

ಸೋತವಳ ಮಾತು

ಕವನ

ಸೋತಿರುವ ಮುಖದಲ್ಲಿ 

ಮಂದಹಾಸ ಮೂಡುವುದೆ

ಜಗದ ನಿಯಮಗಳರಿವು ತಿಳಿಯುವುದೇ ಹೇಳು

ಮದನ ಮೋರೆಯು ಇಲ್ಲ

ಸುಖದ ನನಸದು ವಿಷವೆ

ಕನಸ ಗೋಪುರದೊಳಗೆ  ಬಾಳುವೆಯೇ ಹೇಳು

 

ಹುಟ್ಟಿದಾಕ್ಷಣ ನಗುವು

ಸತ್ತಾಗ ಅಳುವೆಲ್ಲ

ಕಿತ್ತು ತಿನ್ನುವ ನೋವು ಹೃದಯದಲೇ ಹೇಳು

ಬಾಲ್ಯವನು ಕಳೆಯುತಲೆ

ಯೌವ್ವನದ ಮೋಹದಲಿ

ಮುದ್ದಾದ ಪ್ರಿಯತಮನ ಪಡೆಯುವೆನೇ ಹೇಳು

 

ತಿರುಗಾಟ ಹುಡುಕಾಟ

ನಡೆಯುತಿರೆ ಶನಿಕಾಟ

ಜೊತೆಗೆ ಇರುವರ ಕಾಟ ಬದುಕುವೆನೇ ಹೇಳು

ಶಿಖರ ದಾಟಿದ ಸಾಲ

ತನುಮನವ ಬಂಧಿಸಿರೆ

ಚಿತ್ತ ಶಾಂತಿಯು ಹೋಗೆ ಮೌನವಿದೆಯೇ ಹೇಳು

 

ಮಲಗಿಹೆನು ನಾನಿಲ್ಲಿ

ಹತ್ತಿರದಿ ಯಾರಿಲ್ಲ

ಸೊತ್ತುಗಳ ತಿನ್ನುತಿರೆ  ತನುವಿದೆಯೇ ಹೇಳು

ಹೀಗೆ ಜೀವನ ಸಾಗೆ

ಹುಣ್ಣಿಮೆಯ ಬೆಳಕಿಲ್ಲ

ಕತ್ತಲಲಿ ಹೊಂಬೆಳಕು ಸೋತಿಹುದೇ ಹೇಳು

-ಹಾ ಮ ಸತೀಶ ಬೆಂಗಳೂರು

ಚಿತ್ರ್