ಸೋತು ಗೆದ್ದೆ
ಕವನ
ಸೋತಿದ್ದೆ ನಾನು
ನಿನ್ನ ಕಣ್ಣ
ಕಿರಣಗಳ ಹಿಡಿದಿಡಲು
ಸಣ್ಣಗೆ ಕೊರೆವ
ಈ ಹಸಿ ಚಳಿಯಲ್ಲಿ
ವದ್ದೆಯಾಗುವ
ನಿನ್ನ
ನೆನಪ ಕಣ್ಣಿಗೊತ್ತಿಕೊಳಲು
ಉಸಿರ ಬಿಸಿಗೆ
ಉರಿದು ಬೂದಿಯಾದ
ಗುಲಾಬಿ ದಳಗಳ
ಜೀವಂತವಾಗಿಸುವ ಯತ್ನದಲ್ಲಿ ಸೋತಿದ್ದೆ
ಹಾರುವ
ಮನಸ ಹಿಡಿದಿಟ್ಟು
ಕಳ್ಳಿ ಹಳ್ಳದ
ಹುದುಲಲ್ಲಿ ಹುದುಗಿಕೊಳಲು
ನಿನ್ನ
ಹೊರತು ಹಗಲುಗಳ
ಕಳೆವ ಇರುಳುಗಳ
ತಳ್ಳುವ
ಕ್ಷಣಗಳ ನುಂಗುವ
ಮರೆವ ಹೊರ ತೆಗೆವ
ಕಾಯಕದಲಿ ಸೋತಿದ್ದೆ
ಈಗ
-
ಗೆದ್ದಿದ್ದೇನೆ
ಎಲರಾಗಿ
ನಿನ್ನ ಮುಂಗುರುಳ
ನೇವರಿಸಿ
ಕಣ್ಣ ಹನಿಗಳಿಗೆ
ಬಾಯಾರಿದ ಭುವಿಯಾಗಿ...
ಚಿತ್ರ್