ಸೋಲದಿರು ಮನವೇ
ಕವನ
ಹಾರುವ ಹಕ್ಕಿಗೆ ರೆಕ್ಕೆಯು ಸೋಲದು
ಮಿನುಗುವ ಚುಕ್ಕಿಗೆ ಕಿರುನಗೆ ಸಾಯದು
ಹಕ್ಕಿಯಂತೆ ಹಾರುವೆ ನೀ ಚುಕ್ಕಿಯಂತೆ ಮಿನುಗುವೆ
ಏರು ಪೇರು ಏನೇ ಬರಲಿ ನೀ ಸೋಲದಿರು ಮನವೇ...
ಅರಳುವ ಹೂವಿಗೂ ತಪ್ಪದು ಮುದುಡುವ ಯಾತನೆ
ಮತ್ತೆ ಅರಳಲು ನಗುವುದು ಮರೆತೆಲ್ಲಾ ಯೋಚನೆ
ಆಳಾದರು,ಅರಸನಾದರೂ ತಪ್ಪದಲ್ಲ ನೋವು
ದುಡುಕಿ ನೀ ಸೋತು ಷರಣಾಗದಿರು ಪರಿಹಾರವಲ್ಲ ಸಾವು
ಹರಿಯುವ ನೀರಿಗೆ ಕಟ್ಟೆಯ ಕಟ್ಟಲು
ತಡೆಯುಂಟಾಯಿತೆಂದು ಬೇಸತ್ತು ಬತ್ತಿಹೋಗುವುದೇ?
ಇಂದು ಮುಳುಗಿದ ರವಿಯು ನಾಳೆ ಉದಯಿಸುತಿರಲು
ಬರವಸೆಯ ಬೆಳಕಿನಲ್ಲಿ ಬಾಳಲಾಗದೇ?
ಓ ಮನಸೇ..........
ಕಿವಿಗೊಡದಿರು ನೀ ಬೇಡದಿರುವ ಮಾತಿಗೆ
ಕಣ್ಣಾಗದಿರು ನೀ ನಿರುಪಯುಕ್ತ ಕಂಬನಿಗೆ
ಹೊತ್ತೊತ್ತಿಗೆ ಉತ್ತರಿಸುವ ನೀ ನೂರಾರು ಪುಟಗಳ ಹೊತ್ತಿಗೆ
ನೀ ಹೀಗೆ ಸೋಲುವುದು ಸರಿಯೇ ನಾ ನಿನ್ನನ್ನೇ ಅವಲಂಬಿಸಿರುವ ಹೊತ್ತಿಗೆ.....?
Comments
ಉ: ಸೋಲದಿರು ಮನವೇ