ಸೋಲಿಗೆ ಸವಾಲು

ಸೋಲಿಗೆ ಸವಾಲು

ಸೋಲಿಗೆ ಸವಾಲು.....

ನಾನು ನಿಮಗೆ ಒಬ್ಬನ ಜೀವನ ಕಥನ ಹೇಳುತ್ತೇನೆ.ಆತ ತನ್ನ 21ನೆ ವಯಸ್ಸಿನಲ್ಲಿ ವ್ಯಾಪಾರಕ್ಕೆ ಕೈ ಹಾಕಿದ,ಕೈ ಸುಟ್ಟುಕೊಂಡ.22ನೆ ವಯಸ್ಸಿನಲ್ಲಿ ಶಾಸನ ಸಭೆಗೆ ಸ್ಪರ್ಧಿಸಿ ಸೋತ.24ನೆ ವಯಸ್ಸಿನಲ್ಲಿ ಪುನಃ ವ್ಯಾಪಾರ ಮಾಡಿ ನಷ್ಟ ಅನುಭವಿಸಿದ.ತನ್ನ 26ನೆ ವಯಸ್ಸಿನಲ್ಲಿ ತನ್ನ ಪ್ರೇಯಸಿಯ ಅಕಾಲಿಕ ಮೃತ್ಯುವಿನಿಂದ ಜರ್ಝರಿತಗೊಂಡ.27ನೆ ವಯಸ್ಸಿನಲ್ಲಿ ನರವ್ಯಾಧಿಗೆ ತುತ್ತಾಗಿ ಹೋದ.34ನೆ ವಯಸ್ಸಿನಲ್ಲಿ ಮತ್ತೆ ಚುನಾವಣೆಗೆ ನಿಂತು ಸೋತ.45ನೆ ವಯಸ್ಸಿನಲ್ಲಿ ಸೆನೆಟ್ ಚುನಾವಣೆಯಲ್ಲಿಯೂ ಸೋಲುಂಟಾಯಿತು.47ನೆ ವಯಸ್ಸಿನಲ್ಲಿ ಉಪಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿ ದಯನೀಯವಾಗಿ ಪರಾಭವಗೊಂಡ.49ನೆ ವಯಸ್ಸಿನಲ್ಲಿ ಪುನಃ ಸೆನೆಟ್ ಚುನಾವಣೆಯಲ್ಲಿ ಸೋಲು.52ನೆ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷನಾಗಿ ಚುನಾಯಿತನಾದ.ಅತನ ಹೆಸರು ಅಬ್ರಹಾಂ ಲಿಂಕನ್.

ಒಮ್ಮೆ ಯೋಚಿಸಿ...!!ನಾವೇನಾದರು ಜೀವನದಲ್ಲಿ ಇಂತಹ ಸಾಲು ಸಾಲು ಸೋಲು ಅನುಬವಿಸಿದ್ದರೆ ಏನು ಮಾಡುತ್ತಿದ್ದೆವು.ವಾಸ್ತು ಜ್ಯೋತಿಷ್ಯದ ಮೊರೆ ಹೋಗುತ್ತಿದ್ದೆವು,ಇಲ್ಲಾ ಆತ್ಮಹತ್ಯೆ ಮಾಡಿಕೊಂಡು ಯಾವುದೋ ಸ್ಮಶಾನಕ್ಕೆ ಗೋರಿಯಾಗಿರುತ್ತಿದ್ದೆವು.ಅಥವಾ ಮಾನಸಿಕ ಸ್ಥಿಮಿತ ಕಳಕೊಂಡು ಯಾವುದಾದರು ಆಸ್ಪತ್ರೆಯಲ್ಲಿ ಖಾಯಂ ರೋಗಿಯಾಗಿ ಬಿಡುತ್ತಿದ್ದೆವು.ಮಿತ್ರರೆ...ಸೋಲು ಜೀವನದ ಭಾಗ.ಅದನ್ನು ಸವಾಲಾಗಿ ಸ್ವೀಕರಿಸೋಣ...

-@ಯೆಸ್ಕೆ

Comments

Submitted by ಗಣೇಶ Thu, 12/11/2014 - 00:23

21ನೆ ವಯಸ್ಸಿನಲ್ಲಿ ವ್ಯಾಪಾರಕ್ಕೆ ಕೈ ಹಾಕಿದ,ಕೈ ಸುಟ್ಟುಕೊಂಡ...
ಆಗಲೇ ವಾಸ್ತು ಜ್ಯೋತಿಷ್ಯದ ಮೊರೆ ಹೋಗುತ್ತಿದ್ದರೆ...ಈ ತೊಂದರೆಗಳೆಲ್ಲಾ ಬರದೇ ೫೨ ವಯಸ್ಸಿಗೆ ಮೊದಲೇ ಅಮೆರಿಕಾದ ಅಧ್ಯಕ್ಷನಾಗುತ್ತಿದ್ದ.:)
-ಅಂ.ಭಂ.ಸ್ವಾಮಿ