ಸೋಲಿಗೆ ಹೆದರಬೇಡಿ, ಧೈರ್ಯ ಮಾತ್ರ ಬಿಡಬೇಡಿ
ಕವನ
ನೀನು ಕೊಟ್ಟಾಗ ಹೊಗಳಬೇಡ
ಜನರು ಕೊಟ್ಟಾಗ ಸ್ಮರಿಸದೆ ಇರಬೇಡ
ದೇವರು ಕೊಟ್ಟರೆ ನುಂಗಣಿ
ಆದರೆ ಜನರು ಕೊಟ್ಟರೆ ಅದು ಹಂಗಣೆ
ಉಪಕಾರ ಮಾಡುವುದನ್ನು ಕಲಿ
ಅಪಕಾರ ಯಾರಿಗೂ ಮಾಡಬೇಡ
ಜನರು ಕೊಟ್ಟರೆ ಹೊಗಳುತ್ತಾರೆ
ಬಿಟ್ಟರೆ ನಮ್ಮನ್ನು ತೆಗಳುತ್ತಾರೆ
ಮಾನವ ಜನ್ಮ ದೊಡ್ಡದು
ಚಿಂತನೆ ಮಾಡದಿದ್ದರೆ ಚಿಕ್ಕದು
ವಿವೇಚನೆ ಮಾಡಬೇಕು
ವಿಚಿತ್ರ ಹವ್ಯಾಸ ಬಿಡಬೇಕು
ಸರಳ ನಡತೆಯನ್ನು ಕಲಿಯಬೇಕು
ಸಜ್ಜನರ ಸಂಗ ಮಾಡಬೇಕು
ಸದ್ಧ ವಿಚಾರ ಶಕ್ತಿ ಹೆಚ್ಚಾಗಬೇಕು
ಹೆಜ್ಜೇನು ಸವಿದು ಬಾಳಬೇಕು
ಸೋಲಿಗೆ ಹೆದರಬೇಡಿ
ಧೈರ್ಯ ಮಾತ್ರ ಬಿಡಬೇಡಿ
ಕೈ ಬಿಟ್ಟವರ ಬಿಟ್ಟು ದೂರ ಸರಿದು ಬಿಡಿ
ಸಾಧನೆಯನ್ನು ಮಾಡಿ ತೋರಿಸಿ ಬಿಡಿ
ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಶಿಕ್ಷಕರು, ಸಾ ನರೇಗಲ್ಲ.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್