ಸೋಲೆಂಬ ಗೆಲುವು
ದೀಪಾ ಹಿರೇಗುತ್ತಿ ಇವರು ಬರೆದ ವ್ಯಕ್ತಿತ್ವ ವಿಕಸನದ ಬರಹಗಳೇ 'ಸೋಲೆಂಬ ಗೆಲುವು' ಈ ಪುಸ್ತಕವನ್ನು ಪ್ರಕಾಶಿಸಿದವರು ವೀರಲೋಕ ಪ್ರಕಾಶನ ಇವರು. ಇದರ ಮಾಲಕರಾದ ವೀರಕಲೋಕ ಶ್ರೀನಿವಾಸ ಇವರು ತಮ್ಮ ಬೆನ್ನುಡಿಯಲ್ಲಿ ಈ ಪುಸ್ತಕ ಪ್ರಕಾಶನದ ಹೇಳಿಕೊಂಡದ್ದು ಹೀಗೆ..." "ನಿಮ್ಮ ನಾಲಿಗೆ ಬಯಸುವ ಚಾಕೋಲೆಟೊಂದು ಸಲೀಸಾಗಿ ನಿಮ್ಮನ್ನು ತಲುಪುವಂತೆ, ನಿಮ್ಮ ಬುದ್ಧಿ ಇಷ್ಟ ಪಡುವ ಪುಸ್ತಕವೊಂದು ನಿಮ್ಮ ಗೂಡಿಗೆ ತಲುಪಿಸಲು ಹರಸಾಹಸ ಪಡಬೇಕಾದ ಸ್ಥಿತಿ ಕನ್ನಡದಲ್ಲಿದೆ. ಅದನ್ನು ಮನಗಂಡು ನೀವು ಇರುವಲ್ಲೇ, ನೀವು ಇಷ್ಟ ಪಡುವ ಪುಸ್ತಕಗಳನ್ನು ನಿಮಗೆ ತಲುಪಿಸುವ ಜವಾಬ್ದಾರಿ ಇನ್ಮುಂದೆ 'ವೀರಲೋಕ ಬುಕ್ಸ್' ಹೊರಲಿದೆ. ನಿಶ್ಚಿಂತೆಯಿಂದ ಓದುವ ಸುಖ ನಿಮ್ಮದಾಗಲಿ.
ಯುವ ಜನತೆ ಪುಸ್ತಕ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ ಎನ್ನುವುದು ಎಷ್ಟು ಸತ್ಯವೋ, ಅವರನ್ನು ಓದಿಸಬೇಕಾದ ಜವಾಬ್ದಾರಿ ಕೂಡ ನಮ್ಮದು ಎನ್ನುವುದು ಅಷ್ಟೇ ಸತ್ಯ -ಅವರಿಗೆ ಓದಿನ ರುಚಿ ಹಚ್ಚಿ, ಪುಸ್ತಕಗಳ ಮಹತ್ವ ತಿಳಿಸುವ ಉದ್ದೇಶ ವೀರಲೋಕ ಬುಕ್ಸ್ ಹಿಂದಿದೆ. ಪ್ರಾಮಿಸ್, ನಾವು ರಾಜ್ಯದ ಕಟ್ಟಕಡೆಯ ಓದುಗನಿಗೆ ಪುಸ್ತಕ ತಲುಪಿಸುವ ಬಹುದೊಡ್ಡ ನೆಟ್ ವರ್ಕ್ ಹೊಂದಿದ್ದೇವೆ. ನಿಮ್ಮೂರು ಯಾವುದೇ ಇರಲಿ, ಅಲ್ಲಿಗೆ ಪುಸ್ತಕ ಮುಟ್ಟಿಸುತ್ತೇವೆ. ಈ ಕಾರ್ಯದಲ್ಲಿ ನಮ್ಮ ಬೆನ್ನ ಹಿಂದೆ ಈ ನಾಡಿನ ಅಸಂಖ್ಯಾತ ಲೇಖಕರ ಬಳಗವೇ ಇದೆ."