ಸೌತೆಕಾಯಿ ಸಿಹಿ ಗೊಜ್ಜು

ಸೌತೆಕಾಯಿ ಸಿಹಿ ಗೊಜ್ಜು

ಬೇಕಿರುವ ಸಾಮಗ್ರಿ

ಸಣ್ಣಗೆ ಹೆಚ್ಚಿದ ಸೌತೆಕಾಯಿ - ೩ ಕಪ್, ತೆಂಗಿನ ತುರಿ - ಅರ್ಧ ಕಪ್, ಹುರಿದ ಉದ್ದಿನ ಬೇಳೆ - ಅರ್ಧ ಚಮಚ, ಹುರಿದ ಕಡಲೆಬೇಳೆ - ೧ ಚಮಚ, ಹಸಿಮೆಣಸಿನ ಕಾಯಿ - ೪-೫, ಹುಣಸೆ ರಸ - ೨ ಚಮಚ, ಬೆಲ್ಲದ ಹುಡಿ - ೩ ಚಮಚ, ಕಡಲೆಕಾಯಿ ಬೀಜದ ಹುಡಿ - ೪ ಚಮಚ, ಎಣ್ಣೆ - ೪ ಚಮಚ, ಸಾಸಿವೆ - ೧ ಚಮಚ, ಇಂಗು - ಕಾಲು ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೪ ಚಮಚ

ತಯಾರಿಸುವ ವಿಧಾನ

ತೆಂಗಿನಕಾಯಿ ತುರಿ, ಹಸಿಮೆಣಸಿನ ಕಾಯಿ, ಉದ್ದಿನ ಬೇಳೆ, ಕಡಲೆಬೇಳೆಗಳನ್ನು ಸೇರಿಸಿ ರುಬ್ಬಿ, ಸೌತೇಕಾಯಿ ಹೋಳುಗಳಿಗೆ ಅರೆದ ಮಿಶ್ರಣ, ಹುಣಸೆ ರಸ, ಬೆಲ್ಲದ ಹುಡಿ, ಕೊತ್ತಂಬರಿ ಸೊಪ್ಪು, ಕಡಲೆಕಾಯಿ ಬೀಜದ ಹುಡಿಗಳನ್ನೆಲ್ಲಾ ಸೇರಿಸಿ ಚೆನ್ನಾಗಿ ಕಲಸಿ. ಈ ಮಿಶ್ರಣಕ್ಕೆ ಸಾಸಿವೆ, ಇಂಗಿನ ಒಗ್ಗರಣೆ ಹಾಕಿದರೆ ರುಚಿಯಾದ ಸೌತೆಕಾಯಿ ಸಿಹಿ ಗೊಜ್ಜು ರೆಡಿ.