ಸೌಭಾಗ್ಯ ಸಂಪತ್ತು
ಕವನ
ಪರಶಿವನು ಪರಶಿವೆಗೆ ಪೇಳಿದ ಕಥೆಯು
ವರಮಹಾಲಕ್ಷ್ಮೀ ಮಹಾ ವ್ರತವು/
ಸೌಭಾಗ್ಯ ಸಂಪತ್ತು ಧನಧಾನ್ಯವು
ನಿಶ್ಚಿತ ಪುಣ್ಯಫಲ ಅನುಗಾಲವು//
ಶ್ರಾವಣ ಮಾಸದಲಿ ಕೈಗೊಂಬ ಪೂಜೆಯು
ಶುಕ್ಲಪಕ್ಷದ ಶುಕ್ರವಾರದ ಶುಭದಿನವು/
ಮಧುರ ಭಾಷಿಣಿ ಚಾರುಮತಿ ಮಹಾ ಸಾಧ್ವಿಯು
ನಿರ್ಮಲ ಮನಸ್ಸು ಹೊಂದಿದ ಪುನೀತೆಯು//
ಸ್ವಪ್ನದಲಿ ಮಹಾಲಕ್ಷ್ಮೀ ದೇವಿ ಕಾಣಿಸಲು
ವ್ರತವನಾಚರಿಸು ಶ್ರೇಯಸ್ಸೆಂದು ಹರಸಿದಳು/
ಬಂಧು ಬಾಂಧವರೆಲ್ಲ ಒಂದಾಗಿ ಸೇರಿದರು
ಕಲ್ಪೋಕ್ತ ಪೂಜೆಯನು ಶ್ರದ್ಧೆಯಲಿ ಮಾಡಿದರು//
ನವಗ್ರಂಥಿಗಳ ಪವಿತ್ರ ದಾರವನು ಪೂಜಿಸಿ
ನೀಲಾಂಜನ ದೀಪ ಧೂಪದಾರತಿ ಬೆಳಗಿಸಿ
ಕಡಲೆಬೇಳೆ ಹಯಗ್ರೀವ ಹೂರಣವ ಅರ್ಪಿಸಿ
ಶ್ರದ್ಧಾ ಭಕ್ತಿಯಲಿ ಮಹಾಲಕ್ಷ್ಮಿಯನು ಪೂಜಿಸಿ
ಕುಂಡಿನ ಪಟ್ಟಣವು ದಿನದಿನವು ನಳನಳಿಸಲು
ಜನರೆಲ್ಲ ಸಂಪನ್ನ ಭಾಗ್ಯವಂತರಾಗಲು /
ವರಮಹಾಲಕ್ಷ್ಮೀಯ ಕೃಪಾಕಟಾಕ್ಷ ದೊರೆಯಲು
ಬೇಡುತಲಿ ಹಾಡುತಲಿ
ಸುಖದಲ್ಲಿ ಬದುಕ ಸವೆಸಿದರು//
-ರತ್ನಾ ಕೆ.ಭಟ್ ,ತಲಂಜೇರಿ ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್