ಸೌರವ್ ಗಂಗೂಲಿ ‍- ದಿ ಲೀಡರ್

ಸೌರವ್ ಗಂಗೂಲಿ ‍- ದಿ ಲೀಡರ್

"ಗೆಲುನಿನಲ್ಲಿ ಹಿಂದಿದ್ದು, ಸೋಲಿನಲ್ಲಿ ಮುಂಬಂದು, ಗುಂಪನ್ನು ಗುರಿ ಮುಟ್ಟಿಸುವ ವ್ಯಕ್ತಿಯೇ ನಿಜವಾದ ನಾಯಕ" ಸಂದರ್ಶನ ಒಂದರಲ್ಲಿ ಡಾ।। ಅಬ್ದುಲ್ ಕಲಾಂ ಹೇಳಿದ ಮಾತಿದು. ಅದಕ್ಕೂ ಮೊದಲು ಈ ಮಾತಿಗೆ ಪೂರಕವಾಗಿ, ತಮ್ಮ ನಿಜ ಜೀವನದಲ್ಲಿ ಜರುಗಿದ ಘಟನೆಯನ್ನು ಕೇಳುಗರ ಮುಂದೆ ಬಿಚ್ಚಿಟ್ಟರು. ಇಂದಿನ ನಾಯಕರಿಗೆಲ್ಲ ತಲುಪಲೇ ಬೇಕಾದ ಸಂದೇಶ.

ಸುಮಾರು ೩೫ ವರ್ಷಗಳ ಹಿಂದಿನ ಮಾತು. ರೋಹಿಣಿ ಉಪಗ್ರಹ ಉಡಾವಣೆಯ ಮೊದಲ ಪ್ರಯತ್ನ. ತಮ್ಮೆಲ್ಲಾ ವಿಜ್ಞಾನಿಗಳೊಟ್ಟಿಗೆ ಕಲಾಂ ಉಡಾವಣೆಗೆ ಸಜ್ಜಾಗಿದ್ದರು. ಆಗ ಕಂಪ್ಯೂಟರ್ ತೋರಿದ ತಾಂತ್ರಿಕ ದೋಷದ ಬಗ್ಗೆ ಗಮನ ಹರಿಸದೆ, ವಿಜ್ಞಾನಿಗಳ ಸಲಹೆಯ ಮೇರೆಗೆ ಉಪಗ್ರಹವನ್ನು ಉಡಾಹಿಸಾಲಾಯಿತು. ಬಹು ನಿರೀಕ್ಷೆಯ, ದೇಶ-ವಿದೇಶಗಳ  ಕೋಟ್ಯಾಂತರ  ಜನರ ಕುತೂಹಲ ಕೆರಳಿಸಿದ್ದ ಉಪಗ್ರಹ ಉಡಾವಣ ವಾಹನ (SLV-3) ಬಂಗಾಲ ಕೊಲ್ಲಿಯಲ್ಲಿ ಅಂತ್ಯ ಕಂಡಿತು! ಕೆಲವೇ ನಿಮಿಷಗಳಲ್ಲೇ ಇದ್ದ ಪತ್ರಿಕಾಗೋಷ್ಠಿಯಲ್ಲಿ ಏನೇಳಬೇಕೆಂದು ಕಲಾಂ ಯೋಚಿಸುತ್ತಿರುವಾಗಲೆ, ಅಂದಿನ ಇಸ್ರೋ ಅಧ್ಯಕ್ಷ ಪ್ರೊ.ಸತೀಶ್ ಧವನ್ ಅವರು ಮುಂದೆಬಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ "ನನ್ನ ತಂಡ ಬಹಳ ಶ್ರಮಪಟ್ಟುಈ ಯೋಜನೆಗೆ ಶ್ರಮಿಸಿದೆ.ಇನ್ನೂ ತಾಂತ್ರಿಕ ಸಂಪತ್ತು ನಮಗೆ ಬೇಕಿತ್ತು. ಅದ್ಯಕ್ಷನಾದ ನಾನು ಇದರ ಸಂಪೂರ್ಣ ಹೊಣೆ ಒರುತ್ತೇನೆ. ನಮಗೆ ಇನ್ನು೧ ವರ್ಷದ ಕಾಲವದಿ ಬೇಕು. ರೋಹಿಣಿ ಉಪಗ್ರಹವನ್ನು ಅಂತರಿಕ್ಷಕ್ಕೆ ಹಾರಿಸಿಯೇ ತೋರುತ್ತೇವೆ ಅಂದರು. ಕಲಾಂ ಮೇಲಿದ್ದ ಭರವಸೆ ಮುಂದಿನ ವರ್ಷ ೧೯೮೦ ರ ಜುಲೈ ೧೮ರಂದು ಅದನ್ನು ಪೂರ್ಣಗೊಳಿಸಿತು. ರೋಹಿಣಿ ಉಪಗ್ರಹ ಅಂತರಿಕ್ಷ ತಲುಪಿತು.ಪುನಃ ಮತ್ತೊಮ್ಮೆ ಅದೇ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿತ್ತು. ಅದೇ ಸತೀಶ್ ಧವನ್ ಕಲಾಂರನ್ನು ಕರೆದು "ಇಂದು ನೀವು ಹೋಗಿ ಪತ್ರಿಕಾಗೋಷ್ಠಿಯಲ್ಲಿ ಹಾಜರಾಗಿ”  ಅಂದರಂತೆ..."ಆ ದಿನ ನಾನು ಜೀವನದ ಬಹು ಮುಖ್ಯ ಪಾಠವನ್ನು ಕಲಿತೆ. ಕಷ್ಟ ಕಾಲದಲ್ಲಿ ಹೆಗಲೊಡ್ಡಿ, ಗುರಿ ಮುಟ್ಟಿದ ನಂತರ, ಹಿಂದೆ ನಿಂತು ಪ್ರೋತ್ಸಾಯಿಸುವ ವ್ಯಕ್ತಿಯೇ, ನಿಜವಾದ ನಾಯಕ" ದಶಕಗಳ ಹಿಂದಿನ ಈ ಮಾತನ್ನು ಹೇಳುವ ಮಾಜಿ ರಾಷ್ಟ್ರಪತಿಗಳ ಮುಖದಲ್ಲಿ ಆ ನಾಯಕನ ಮೇಲಿದ್ದ ಹೆಮ್ಮ ಕಾಣುತಿತ್ತು.....ಇದು ಭಾರತ ಕಂಡ ಅತ್ಯುತ್ತಮ ರಾಷ್ಟ್ರಪತಿಗಳ ಅನುಭವದ ಮಾತಾದರೆ, ದೈನಂದಿನ ಚಟುವಟಿಕೆಗಳಲ್ಲಿ ನಿರತರಾಗಿರುವ ಜನಸಾಮಾನ್ಯರಿಗೆ ಇಂತಹ ಬಹಳಷ್ಟು ಜನರು ಸ್ಪೂರ್ತಿ.

ಭಾರತದದಲ್ಲಿ ಎಲ್ಲಾ ಧರ್ಮಗಳಿಗಿಂತ  ಭಿನ್ನ ಹಾಗು ಅಷ್ಟೇ ಏಕತೆಯ ಧರ್ಮವೆಂದರೆ, ಕ್ರಿಕೆಟ್. ಇಲ್ಲಿ ಹಿಂದೂ, ಮುಸಲ್ಮಾನ, ಕ್ರೈಸ್ಥನೆನ್ನುವ ಭೇಧ-ಭಾವವಿಲ್ಲ. ಇಲ್ಲಿ ಎಲ್ಲರೂ ಒಂದೇ. ಇಂತಹ ಧರ್ಮದಲ್ಲಿ ಸೌರವ್ ಗಂಗೂಲಿ ಎನ್ನುವ ಹೆಸರನ್ನು ಕೇಳಿರದವರೇ ಇಲ್ಲ ಅನ್ನಬಹುದು. 'ಬೆಂಗಾಲ್ ಟೈಗರ್', 'ಮಹಾರಾಜ ಆಫ್ ದಿ ಕ್ರಿಕೆಟ್', 'ಗಾಡ್ ಆಫ್ ದಿ ಆಫ್ಸೈಡ್', 'ಕಮ್ಬ್ಯಾಕ್ ಕಿಂಗ್', ‘ದಿ ವಾರಿಯರ್ ಪ್ರಿನ್ಸ್’ ಹೀಗೆ ಹಲವು ಬಿರುದುಗಳು. ಇವೆಲ್ಲಾಕಿಂತ ಮಿಗಿಲಾಗಿ, ಜಗತ್ತು ಈತನನ್ನು ನೋಡುವುದು ಒಬ್ಬ ಶ್ರೇಷ್ಠ ನಾಯಕನಾಗಿ. ಅವನತಿ ಕಾಣುತಿದ್ದ ತಂಡವನ್ನು ಉತ್ತುಂಗಕ್ಕೆ ಎತ್ತಿ ನಿಲ್ಲಿಸಿದ 'ದಿ ಗ್ರೇಟ್ ಲೀಡರ್' ಆಗಿ.

ಅಂದು ಕ್ರಿಕೆಟ್ ಇತಿಹಾಸದಲ್ಲೇ ದಂತಕತೆಗಳಾಗಿದ್ದ, ಭಾರತಿಯ ಕ್ರಿಕೆಟಿಗರು ಕೆಲ ತಿಂಗಳುಗಳಲ್ಲೇ 'ಫಿಕ್ಸಿಂಗ್ ಮಾಫಿಯದಲ್ಲಿ'  ಹೇಳ-ಹೆಸರಿಲ್ಲದೆ ಮರೆಯಾದರು. ಮಾಫಿಯಾ,ಭಾರತದ ಹೆಮ್ಮೆಯ ಕೋಚನ್ನು ಸಹ ಬಿಡಲಿಲ್ಲ. ಜಗತ್ತಿನ್ನ ಶ್ರೇಷ್ಠ ಆಟಗಾರನೂ ಸಹ ಅಂದು ತಂಡವನ್ನು ಮುನ್ನೇಡಸಲಾಗಲಿಲ್ಲ. ಇತ್ತ ಕಡೆ ಹೊಸ ಮುಖಗಳ ಕಳಪೆ ಪ್ರದರ್ಶನ. ಸಾಲು ಸಾಲು ಸರಣಿ ಸೋಲು. ಸೋತು ಸುಣ್ಣವಾಗಿ ಬಿದ್ದಿದ್ದ ತಂಡವನ್ನು ಮುನ್ನೆಡೆಸುವ ಒಬ್ಬ ಸಮರ್ಥ ನಾಯಕ ಹಾಗು ಪ್ರತಿಭಾನ್ವಿತ ಆಟಗಾರರು ಭಾರತ ತಂಡಕ್ಕೆ ಬೇಕಾಗಿತ್ತು.ಚಿಗುರು ಮೀಸೆಯ ೨೮ರ ಹರೆಯದ  ಗಂಗೂಲಿಗೆ ಅಂದು ದೊರೆತ್ತಿದ್ದು ಅನುಮಾನ ಅವಮಾನ ಹಾಗು ಟೀಕೆಯ ಸಮಯ. ಉತ್ತಮ ಪ್ರದರ್ಶನ ನೀಡಿಯೂ ಹಲವು ಬಾರಿ ಮಾದ್ಯಮ, ಅಭಿಮಾನಿಗಳು ಇದು  'ಫಿಕ್ಸಿಂಗ್‍‍-ಮ್ಯಾಚ್' ಅನ್ನುವ ದಿನಗಳು. ಅನುಭವಿ ಆಟಗಾರರು ಕೇವಲ ಕೆಲವರು.ಇಂಡಿಯನ್ ಕ್ರಿಕೆಟ್ನ ಅತಿ ವಿರಳ ಹಾಗು ಕಠಿಣ ಸಮಯವದು. ಇಂದಿನ ಜಿಂಬಾಂಬೆ, ಕೀನ್ಯ, ವೆಸ್ಟ್ಇಂಡೀಸ್ಗಳೂ ಸಹ ಅಂದಿನ ಮಣಿಸಾಲಾಗದಂತಹ ಭಲಿಷ್ಟ ತಂಡಗಳು. ಇನ್ನೂ ಆಸ್ಟ್ರೇಲಿಯ, ದಕ್ಷಿಣ-ಆಫ್ರಿಕ ತಂಡಗಳಂತೂ ಯಶಸ್ಸಿನ ಉತ್ತುಂಗದಲ್ಲಿದ್ದ ದಿನಗಳವು. ಟೆಸ್ಟ್ ರಾಂಕಿಂಗ್ನಲ್ಲಿ ಭಾರತ ಅಂದು ಎಂಟನೆ ಸ್ಥಾನಕ್ಕೆ ಕುಸಿದಿತ್ತು. ಸವಾಲುಗಳ ಮಹಾ ಸರೋವರವನ್ನೇ ಮುಂದಿಟ್ಟು ಗಂಗೂಲಿ ಅಂದು ತಂಡವನ್ನು ಕಟ್ಟಿದ.

"ಪ್ರತಿಬೆಯನ್ನು ಪ್ರೋತ್ಸಾಹಿಸುವುದಕಿಂತ ಹೆಚ್ಚಾಗಿ, ಗುರುತಿಸುವುದು ನಾಯಕನ ಮುಖ್ಯ ಲಕ್ಷಣ"  ಎಂಬ ಮಾತಿನಂತೆ ಗಂಗೂಲಿ ಪ್ರತಿಬಾನ್ವಿತ ಹೊಸ ಹುಡುಗರ ತಂಡವನ್ನು ಕಟ್ಟಲು ಮುಂದಾದ.ಆಗ ಬಂದವರೇ ಮುಂದಿನ ಭಾರತ ತಂಡ ಕಂಡ ದಂತಕಥೆಗಳು! ಹರ್ಬಜನ್ ಸಿಂಗ್, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ಜಹಿರ್ ಖಾನ್, ಮೊಹಮದ್ ಕೈಫ್ ಹಾಗು ಇನ್ನು ಹಲವರು. ಅಂದು ಸೆಹ್ವಾಗ್ಗೆ "ನೀನು ನಿನ್ನ ನ್ಯಾಚುರಲ್ ಆಟವನ್ನು ಆಡು, ನೀನು ನಂತರದ ೨೦ ಮ್ಯಾಚ್ಗಳು ಡಕ್ ಔಟ್ ಆದರೂ ನಿನ್ನ ಟೀಂನಿಂದ ತೆಗೆಯುವುದಿಲ್ಲ" ಅನ್ನುತ ಸೆಹ್ವಾಗ್ನನ್ನು ಓಪನಿಂಗ್ ಬ್ಯಾಟ್ಸಮನ್ ಆಗಿ ಕಳಿಸದೆ ಇದ್ದರೆ,ಆತನಲ್ಲಿ ಆ ಧೈರ್ಯ ಹಾಗು ವಿಶ್ವಾಸವನ್ನು ತುಂಬದೆ ಹೋಗಿದ್ದರೆ, ಇಂದು ಸೆಹ್ವಾಗ್ ಅನ್ನುವ ಪ್ರಪಂಚದ ಅಗ್ರಮಾನ್ಯ ಸ್ಪೋಟಕ ಬ್ಯಾಟ್ಸಮನ್ ನಮಗೆ ಸಿಗುತ್ತಿದ್ದನೋ ಇಲ್ಲವೋ, ಹೇಳಲಾಗದು. ಟೀಮ್ನ ಅರ್ದಕಿಂತ ಹೆಚ್ಚು ಜನ ಹೊಸ, ಎಳೆಯ ಮುಖಗಳೇ ಆದರೂ, ಆ ತಂಡ ಮುಂದಿನ ಐದು ವರುಷ ಬೆಳೆದ ಪರಿಯಂತು ಜಗತ್ತೆ ಇತ್ತ ಕಡೆ ತಿರುಗುವಂತೆ ಮಾಡಿತು. ಫಿಕ್ಸಿಂಗ್ ಮಾಫಿಯಾದ ಕಹಿ ನೆನಪುಗಳು ಕಣ್ಮರೆಯಾದವು. ಈತನ ಆ ಗಡಸು ನಾಯಕತ್ವದಲ್ಲಿ ಯಾರೊಬ್ಬ ಬುಕ್ಕಿಯೂ ತಂಡದ ಒಬ್ಬನೇ ಆಟಗಾರನನ್ನು ಸಂಪರ್ಕಿಸಲು ಧೈರ್ಯ ಮಾಡಲಿಲ್ಲ. ಗೆಲುವೊಂದೇ ಮಂತ್ರವಾಗಿಸಿ ಗಂಗೂಲಿ ತಂಡವನ್ನು ಮುನ್ನೆಡಿಸಿದ...ಆಗಂತ ಬರಿ ಹೊಸ ಮುಖಗಳಿಂದಲೇ ತಂಡವನ್ನು ಗೆಲ್ಲಿಸಿದ ಅಂದರೆ ತಪ್ಪಾಗುವುದು. ದ್ರಾವಿಡ್, ಸಚಿನ್, ಕುಂಬ್ಳೆ, ಶ್ರೀನಾಥ್, ಹಾಗೂ ಲಕ್ಷ್ಮಣ್ ಇವರಲ್ಲಿ ಯಾರೊಬ್ಬರು ತಂಡದಲ್ಲಿ ಇಲ್ಲವಾದರೂ ಈತ ಒಪ್ಪುತಿರಲಿಲ್ಲ. ಆಯ್ಕೆಗಾರರ ವಿರುದ್ದವೇ ತಿರುಗಿ ನಿಲ್ಲುತ್ತಿದ್ದ. ತಂಡದ ಗೆಲುವಿಗೆ ಇವರ 'ಅನುಭವ' ಅದೆಷ್ಟು ಮುಖ್ಯ ಅನ್ನುವುದ ಇವನೇ ಬಲ್ಲ. 

"ಮನೆಯಲ್ಲಿ ಹುಲಿ, ಮನೆಯೊರಗೆ ಇಲಿ" ಎಂಬುವ ಮಾತು ಗಂಗೂಲಿಯ ನಾಯಕತ್ವದ ಸಮಯದಲ್ಲಿ ಅಕ್ಷರ ಸಹ ಸುಳ್ಳಾಗಿತ್ತು. ''ವಿದೇಶಿ ನೆಲದಲ್ಲಿ ಮ್ಯಾಚ್ಗಳನ್ನು ಹೇಗೆ ಗೆಲ್ಲುವುದು ಅನ್ನುವುದನ್ನ ಹೇಳಿಕೊಟ್ಟವರು ಸೌರವ್ ಗಂಗೂಲಿ'' ಅನ್ನುವ ‘ಬಜ್ಜಿ’ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ. ಅದು ಆಸ್ಟ್ರೆಲಿಯನ್ನರ 'Sledging'  ಆಗಲಿ, ಆಂಗ್ಲರ ಸೊಕ್ಕಗಲಿ, ಅಥವಾ ಪಾಕಿಸ್ಥಾನದ ಸಿಟ್ಟಾಗಲಿ, ಅದಕ್ಕೆ ತಕ್ಕ ಉತ್ತರವನ್ನು ಅಲ್ಲೇ, ಅದೇ ಸಮಯದಲ್ಲೇ, ಅದೇ ರೀತಿ ಕೊಡುತ್ತಿದ್ದ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವುದು ಹೇಗೆ ಎನ್ನುವುದ ತೋರಿಸಿದ್ದ. ವಿದೇಶಿ ನೆಲದಲ್ಲಿ ಭಾರತದ ವಿಜಯಪತಾಕೆಯನ್ನು ಹಾರಿಸಿದ್ದ. ಅದಕ್ಕೆ ಅಂಕಿ ಅಂಶಗಳ ಸಭೂತು ಬಹಳಾನೇ ಇವೆ. ಟೆಸ್ಟ್ ರಾಂಕಿಂಗ್ನಲ್ಲಿ ಭಾರತವನ್ನು ಎಂಟನೆ ಸ್ಥಾನದಿಂದ ಎರಡನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದ! ದಶಕಗಳಲ್ಲಿ ಭಾರತ ವಿದೇಶಿ ನೆಲದಲ್ಲ್ಲಿಮಾಡದ ಸಾದನೆಯನ್ನು ಈತ ಈ ಐದು ವರ್ಷದಲ್ಲಿ ಮಾಡಿ ತೋರಿಸಿದ್ದ.

"Never Ever give up"  ಅನ್ನುವುದು ಗಂಗೂಲಿಗೆ ಹೇಳಿ ಮಾಡಿಸಿದ ಮಾತು ಹಾಗು ನಾಯಕನಾದವನ ಮೊದಲ ಗುಣ. ೧೯೯೨ ರಲ್ಲೇ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಈತ, ಅಂದಿನ ಅಹಂ ಹೆಚ್ಚಿದ್ದ ಭಾರತ ತಂಡದಲ್ಲಿ ಗೇಲಿಗೆ ಗುರಿಯಾಗಿ ತಂಡದಿಂದ ಹೊರಗುಳಿಯುತ್ತಾನೆ. ಆದರೆ ದೃತಿಗೆಡುವುದಿಲ್ಲ. ಅದೇ ಪರಿಶ್ರಮದಿಂದ ಆಡಿ, ಗೆದ್ದೇ ಗೆಲ್ಲುತೇನೆ ಅನ್ನುವ ಛಲದಿಂದ  ೧೯೯೬ ಇಂಗ್ಲೆಂಡ್ ಪ್ರವಾಸಕ್ಕೆ ಮತ್ತೊಮ್ಮೆ ತಂಡಕ್ಕೆ ಆಯ್ಕೆಯಾಗುತ್ತಾನೆ. ನಂತರ ನಡೆದಿದ್ದು ಇತಿಹಾಸ! ಫಾಸ್ಟೆಸ್ಟ್ ೭೦೦೦,೮೦೦೦ ಹಾಗೂ ೯೦೦೦ ರನ್, ಏಕದಿನ ಪಂದ್ಯದ ಅತ್ಯುತಮ ಜತೆಯಾಟ, ವಿಶ್ವಕಪ್ ನಲ್ಲಿ ಸಾಧನೆ, ಬೌಲಿಂಗ್ ನಲ್ಲಿ ಸಾಧನೆ ಹೀಗೆ ಹಲವಾರು. ಅಂದು ತಂಡದಿಂದ ಹೊರಗುಳಿದು, ನಂತರದ ಐದು ವರ್ಷ ಒಂದು ಅವಕಾಶವೂ ದೊರೆತಿದ್ದ ಈತ, ಮುಂದಿನ ಕೆಲವೇ ವರ್ಷಗಳಲ್ಲಿ ಇಷ್ಟೆಲ್ಲಾ ಸಾಧನೆಗಳೊಟ್ಟಿಗೆ ಅದೇ ತಂಡವನ್ನು ಕಟ್ಟಿ, ಮುನ್ನೆಡೆಸಿ ಗೆಲುವನ್ನು ಕೊಡಿಸಿದ್ದ ರೀತಿ ಭಾರತೀಯರ ರೋಮುಗಳು ಎದ್ದು ನಿಲ್ಲುವಂತೆ ಮಾಡಿದವು…..ಹಿತ್ತಾಳೆ ಕಿವಿಯ ನಮ್ಮ ಆಯ್ಕೆದಾರರು ಅಂದು ಪರಕೀಯನೊಬ್ಬನ ಮಾತಿಗೆ ಕಿವಿಗೊಟ್ಟು ಗಂಗೂಲಿಯನ್ನು ತಂಡದಿಂದ ಹೊರಗಟ್ಟಿದರು. ಕಳಪೆ ಪ್ರದರ್ಶನದ ಹೊರತಾಗಿಯೂ ತಂಡದಿಂದ ಹೊರಗಿರದ ಅನೇಕರು ಅದ್ಯಾಕೋ ಇಂದು ನಾಯಕನನ್ನೇ ಹೊರಗಟ್ಟಿದಾಗ ಮಂಕಾದರು. ದೃತಿಗೆಡದ ಗಂಗೂಲಿ ಅಂದು ಕೈ ಕಟ್ಟಿ ಕೂರಲಿಲ್ಲ!  ಹೋರಾಟವೇ ಗುಣವಾಗಿಸಿಕೊಂಡಿದ್ದ ಈತ, ಕೇವಲ ಒಂದೇ ವರ್ಷದಲ್ಲಿ ಟೀಂಗೆ "ಕಮ್ ಬ್ಯಾಕ್" ಮಾಡುತ್ತಾನೆ. ಫೀಲ್ಡ್ ಅಲ್ಲಿ ಶೊನ್ಯ ಸಾಧನೆ ಮಾಡಿ, AC ಕೋಣೆಯಲ್ಲಿ ಕೂತು ಕೂಗುತ್ತಿದ್ದ ಅನೇಕ ಮಂದಿಯ ಬಾಯನ್ನು ಮುಚ್ಚುತ್ತಾನೆ. ಅದೇ ಹುರುಪು, ಮತ್ತದೆ ಛಲ. ಭಾರತದ ಪರ ಏಕದಿನ ಹಾಗು ಟೆಸ್ಟ್ನ ೨೦೦೭ರ ಅತಿ ಹೆಚ್ಚು ರನ್ ಕಲೆ ಹಾಕುತ್ತಾನೆ ಹಾಗೂ ಈಗಿನ ಬಹಳಷ್ಟು ಮಂದಿಗೆ ಸ್ಪೂರ್ತಿಯಾಗುತ್ತಾನೆ "ದಿ ಕಮ್ ಬ್ಯಾಕ್ ಕಿಂಗ್"…..

ಆಡಲು ಇನ್ನೂ ಇಚ್ಛೆ, ತಂಡವನ್ನು ಮತ್ತೊಮ್ಮೆ ಮುನ್ನೆಡೆಸುವ ಹಂಬಲ, ಆದರೆ ಮತ್ತದೆ ಆಯ್ಕೆಗಾರರ ಕೊಂಕು ನೋಟ. ಅದ್ಯಾಕೋ ಈತನಲ್ಲಿ ಇದ್ದ ನಾಯಕತ್ವ, ಆಟದ ಕೌಶಲ್ಯ ಅವರಿಗೆ ಕಾಣದೆ ಹೊಯಿತು. ತಾನು ಬೆಳೆಸಿ ಪೋಷಿಸಿದ ತಂಡಕ್ಕೆ ಇನ್ನೂ ಹೊಸ ಮುಖಗಳು ಬಂದು ಬೆಳೆಯಬೇಕೆಂದು, ಅಂದು ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ. ಭಾರತ ಕಂಡ ಹೋರಾಟಗಾರನಗಿ, ಛಲವಾದಿಯಾಗಿ, ಎಲ್ಲಕಿಂತ ಮಿಗಿಲಾಗಿ ಒಬ್ಬ ನಿಷ್ಕಳಂಕ ನಾಯಕನಾಗಿ ಇತಿಹಾಸ ಸೇರಿದ. 'ದೃಡ-ಸಂಕಲ್ಪ','ಆಕ್ರಮಣಶೀಲತೆ','ಜಾಣ್ಮೆ','ದೈರ್ಯ' ಹೀಗೆ ಎಲ್ಲವನ್ನೂ ಒಟ್ಟಿಗೆ ತೋರಿದ ಈ ನಾಯಕ ನಿವೃತ್ತಿ ಹೊಂದಿ ೬ ವರ್ಷಗಳೇ ಆದರೂ,ಇಂದೂ ಸಹ ಅದೇ "ದಾದಾ"ನಾಗಿ ಎಲ್ಲಾ ಅಭಿಮಾನಿಗಳಲ್ಲಿ ಚಿರಪರಿಚಿತ......
 

 

Comments

Submitted by Sujith Kumar Sun, 09/28/2014 - 20:51

In reply to by ಕೀರ್ತಿರಾಜ್ ಮಧ್ವ

ಪ್ರತಿಕ್ರಿಯೆಗೆ ಧನ್ಯವಾದ ಕೀರ್ತಿರಾಜ್ರವರೆ.... ಕಲಿವ ಮತ್ತು ಒಪ್ಪುವ ಮನಸ್ಸಿದ್ದರೆ ಸಾಕು, ನಿಜ ಜೀವನದಲ್ಲಿ ಇಂತಹ ಹಲವರು ಮಾದರಿಯಾಗುತ್ತಾರೆ...