ಸೌರ ಪ್ರಭಾವಲಯದ ಮೊದಲ ಕಕ್ಷೆಯ ಸುತ್ತ ತಿರುಗುವನ್ನು ಪೂರ್ಣಗೊಳಿಸಿದ ಆದಿತ್ಯ L-1!

"Let us get on with work - hard work. In India, there is no lack of human beings, capable, intelligent, and hard-working. We have to use these resources, this man power in India.” ಎಂದು 1948ರಲ್ಲಿ ನೆಹರು ಅವರು ಸ್ವತಂತ್ರಗೊಂಡು ವರ್ಷವೂ ಪೂರೈಸದ ನಮ್ಮ ದೇಶದ ಕುರಿತು ಚಿಂತಿಸಿದ್ದು ನಿಜಕ್ಕೂ ಅವರ ಮುಂದಾಲೋಚನೆ, ಮತ್ತು ಆಶಾವಾದಿತ್ವವನ್ನು ಎತ್ತಿ ತೋರಿಸುತ್ತದೆ.
ವಸಾಹತುಶಾಹಿ ಅಂತ್ಯಗೊಂಡು ಸ್ವಾತಂತ್ರದ ಹೊಸ್ತಿಲಿನಲ್ಲೇ ಬಾಹ್ಯಾಕಾಶದ ಕನಸುಗಳನ್ನು ಕಾಣುವುದು ಸುಲಭದ ವಿಷಯವಲ್ಲ. ಆದರೆ, ಅಂದು ಕಂಡ ಕನಸುಗಳ ಫಲಿತಾಂಶವೇ ಇಂದು ನಮ್ಮ ದೇಶ ಬಾಹ್ಯಾಕಾಶದ ಪರಿಶೋಧನೆಯಲ್ಲಿ ಅಮೇರಿಕಾ, ರಷ್ಯಾ, ಮತ್ತು ಚೀನಾ ದೇಶವನ್ನು ಹಿಂದಕ್ಕಿ ಮುನ್ನಡೆಯುತ್ತಿದೆ.
ಉದಾಹರಣೆಗೆ, ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ನಮ್ಮ ಚಂದ್ರಯಾನವು ಚಂದ್ರದ ದಕ್ಷಿಣದ ಧ್ರುವದಲ್ಲಿ ಸಫಲ ಭೂಸ್ಪರ್ಶಿಸಿ ಅಂತರೀಕ್ಷದ ಪರಿಶೋಧನೆಯ ಸ್ಪರ್ಧೆಯಲ್ಲಿ ಒಂದು ದಾಖಲೆಯನ್ನು ನಿರ್ಮಿಸಿತ್ತು- ಇದುವರೆಗೆ ಎಲ್ಲಾ ಕೃತಕ ಉಪಗ್ರಹಗಳು ಚಂದ್ರದ ಉತ್ತರದ ಧ್ರುವದಲ್ಲಿ ಇಳಿಯುತ್ತಿದ್ದರು. ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್ ನಂತರ, ಇಸ್ರೋ ಸೂರ್ಯನನ್ನು ಅನ್ವೇಷಿಸಲು ತನ್ನ ಮುಂದಿನ ಯೋಜನೆಗೆ ಸಿದ್ಧವಾಗಿತ್ತು. ಆದಿತ್ಯ L-1 ಅನ್ನು ಸೆಪ್ಟೆಂಬರ್ 2, 2023 ರಂದು ಪ್ರಾರಂಭಿಸುವುದರೊಂದಿಗೆ, ISRO ತನ್ನ ಇತಿಹಾಸದಲ್ಲಿ ಮತ್ತೊಂದು ವಿಜಯದ ಪತಾಕೆಯನ್ನು ಹಾರಿಸಲು ಮುಂದಾಗಿತ್ತು.
ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆ ಮಂಗಳವಾರ - ಭಾರತೀಯ ಕಾಲಮಾನದ ಪ್ರಕಾರ 'ಮಧ್ಯರಾತ್ರಿ' - ಸೂರ್ಯ-ಭೂಮಿಯ L-1 ಪಾಯಿಂಟ್ ಸುತ್ತ ತನ್ನ ಮೊದಲ ಕಕ್ಷೆಯನ್ನು ಪೂರ್ಣಗೊಳಿಸಿದೆ ಎಂದು ಇಸ್ರೋ ತಿಳಿಸಿದೆ. ISRO ಈ ವಾರದ ಮಂಗಳವಾರ ತನ್ನ Station-Keeping Manoeuvre ಸಫಲವಾಗಿ ನಡೆಸಿ ದ್ವಿತೀಯ ಕಕ್ಷೆಗೆ ತನ್ನ ತಡೆರಹಿತ ಮುನ್ನಡೆಯನ್ನು ಖಚಿತಪಡಿಸಿದೆ ಎಂದು ಹೇಳಿದೆ.
ISRO ಪ್ರಕಾರ: ಪ್ರಭಾವಲಯ ಕಕ್ಷೆಯಲ್ಲಿರುವ ಆದಿತ್ಯ-L1 ಬಾಹ್ಯಾಕಾಶ ನೌಕೆಯು L1 ಬಿಂದುವಿನ ಸುತ್ತ ಒಂದು ಸುತ್ತುತಿರುಗುವನ್ನು ಪೂರ್ಣಗೊಳಿಸಲು 178 ದಿನಗಳು ಬೇಕಾಯಿತು. ಕಕ್ಷೆಯಲ್ಲಿ ಅದರ ಪ್ರಯಾಣದ ಸಮಯದಲ್ಲಿ, ಆದಿತ್ಯ-L1 ಬಾಹ್ಯಾಕಾಶ ನೌಕೆಯು ವಿವಿಧ ವ್ಯಾಕುಲಗಳಿಗೆ ಎದುರಾಗಿ, ಉದ್ದೇಶಿತ ಕಕ್ಷೆಯಿಂದ ಪಥ ತಪ್ಪಿಸಬಹುದಿತ್ತು ಎಂದು ಇಸ್ರೋ ಮಾಧ್ಯಮಗಳಿಗೆ ತಿಳಿಸಿದೆ.
"ಆದಿತ್ಯ L-1, ಈ ಕಕ್ಷೆಯನ್ನು ತಲುಪಲು ಕ್ರಮವಾಗಿ ಫೆಬ್ರವರಿ 22 ಮತ್ತು ಜೂನ್ 7 ರಂದು ಎರಡು Station-keeping Manoeuvres ನಡೆಸಿತು. ಇಂದಿನ ಮೂರನೇ Station-Keeping Manoeuvre ನಂತರ L1 ಸುತ್ತಲಿನ ಎರಡನೇ ಕಕ್ಷೆಯ ಹಾದಿಯಲ್ಲಿ ತನ್ನ ಪ್ರಯಾಣವನ್ನು ಸುಗಮಗೊಳಿಸಿತು ಎಂದು ಇಸ್ರೋ ಹೇಳಿದೆ. ಸೂರ್ಯ-ಭೂಮಿ L1 Lagrangian Point ಸುತ್ತ ಆದಿತ್ಯ L1ನ ಪ್ರಯಾಣವು Modelling Complex Dynamicsಅನ್ನು ಒಳಗೊಂಡಿತ್ತು. ಇದು ಬಾಹ್ಯಾಕಾಶ ನೌಕೆಗೆ ಎದುರಾಗುವ ವಿವಿಧ ಅಡಚಣೆಗಳ ಸಮಗ್ರ ತಿಳುವಳಿಕೆಯನ್ನು, ಮತ್ತು ನೌಕೆಯ ಪಥವನ್ನು ನಿಖರವಾಗಿ ನಿರ್ಧರಿಸಲು ಸಹಾಯ ಮಾಡಿದೆ ಎಂದು ಸಂಸ್ಥೆ ಮಾಧ್ಯಮಗಳ ಮುಂದೆ ವಿವರಿಸಿದೆ.
ಸೂರ್ಯನನ್ನು ಅನ್ವೇಷಿಸುವ ಮೊದಲ ದೇಶ ಭಾರತ ಅಲ್ಲ. ಸೌರ ಚಟುವಟಿಕೆಗಳ ಅಧ್ಯಾಯನ ನಡೆಸಲು ಐರೋಪ್ಯ ದೇಶಗಳು 2000 ನಂತರ ಕೆಲವು ವಿಫಲ ಉಡಾವಣೆಗಳನ್ನು ಕೈಗೊಂಡು ನಿರಾಸೆ ಮೂಡಿಸಿದ್ದರು. ಸೌರ ಪ್ರಭಾವಲಯಕ್ಕೆ ಲಗ್ಗೆಯಿಡುವ ಕನಸನ್ನು ಹೊತ್ತು ಇಂದಿಗೂ ಕೇವಲ ಎಂಟು ಉಪಗ್ರಹಗಳನ್ನು ಕಳುಹಿಸಲಾಗಿದೆ. ಅವುಗಳಲ್ಲಿ ಸೊಹೊ ಮಾತ್ರ ಇಂದಿಗೂ ಕಾರ್ಯನಿರತವಾಗಿದೆ.
SOHO (Solar and Heliospheric Observatory) - ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಮತ್ತು ನಾಸಾ ಅದರ ಜಂಟಿ ಉದ್ದಿಷ್ಟಕಾರ್ಯವು, 1995 ಡಿಸಂಬರಿನಲ್ಲಿ ಕಳುಹಿಸಲಾಗಿತ್ತು; ಅದೂ ಇಂದಿಗೂ ಕಾರ್ಯಶೀಲವಿದ್ದರೂ, ಸೌರ ಪ್ರಭಾವಲದ ಮೂರನೇ ಕಕ್ಷಕ್ಕೆ ತಲುಪಲು ವಿಫಲವಾಗಿದೆ. ಉಳಿದ ಯತ್ನಗಳು ಸಫಲಗೊಳ್ಳುವಲ್ಲಿ ವಂಚಿತಗೊಂಡಿದೆ. ಅಂದು ನಮ್ಮ ನಾಯಕರ ಆಶಾವಾದಿತ್ವದಿಂದ ಮತ್ತು ಮುಂದಾಲೋಚನೆಯಿಂದ ಸ್ಥಾಪಿಸಲಾಗಿದ್ದ ಇಸ್ರೋ ಮತ್ತು ಅದರ ಅಂಗ ಸಂಸ್ಥೆಗಳಿಂದ, ಇಂದು ನಾವು ಬಾಹ್ಯಾಕಾಶದಲ್ಲೂ ನಮ್ಮ ಕೀರ್ತಿ ಪತಾಕೆ ಹಾರಿಸುವಲ್ಲಿ ಯಶಸ್ವಿಯಾಗುತ್ತಿದ್ದೇವೆ.
ತಿಂಗಳಿನ ಬೆಳದಿಂಗಳಿಗೆ ಆಕರ್ಷಿತಗೊಂಡು ಇಸ್ರೋ ಅವರು ಚಂದ್ರಯಾನವನ್ನು ಸಫಲಗೊಳಿಸಿದರು. ಈಗ ಆದಿತ್ಯವಿನ ಸಹಾಯದೊಂದಿಗೆ ಸೌರ ಮಂಡಲವನ್ನು ಲಗ್ಗೆಯಿಡುವ ಕೋಟ್ಯಂತರ ಭಾರತೀಯರ ಕನಸನ್ನು ನನಸುಗೊಳಿಸಲಿ ಎಂದು ನಮ್ಮ ಶುಭ ಹಾರೈಕೆ ಇದೆ.
(ಗ್ರಂಥಋಣ : Wikipedia)
-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.