ಸ್ಟೀವ್ ಜಾಬ್ಸ್ - ಸಾವಿನ ನಿಜವಾದ ಬಣ್ಣದ ಅರ್ಥ - ೩

ಸ್ಟೀವ್ ಜಾಬ್ಸ್ - ಸಾವಿನ ನಿಜವಾದ ಬಣ್ಣದ ಅರ್ಥ - ೩

ಬರಹ

ಸಾವಿನ ನಿಜವಾದ ಬಣ್ಣದ ಅರ್ಥ

ನನ್ನ ೧೭ನೆ ವಯಸ್ಸಿನಲ್ಲಿ, ಒಂದು ವಾಕ್ಯನ್ನು ಓದಿದೆ..."ನಾಳೆಯೇ ಕೊನೆಯೇ ಎಂಬಂತೆ ಬದುಕಿದರೆ, ಕೊನೆಗೆ ಒಂದು ದಿನ ಕಂಡಿತ ನೀವೇ ಸರಿಯಾಗುತ್ತಿರ"...ಇದು ನನ್ನ ಮೇಲೆ ಆಗಾಧವಾದ ಪರಿಣಾಮವನ್ನು ಬೀರಿತು, ಅವತ್ತಿನಿಂದ ೩೩ ವರುಷಗಳು ಬೆಳಿಗ್ಗೆ ಎದ್ದು ಕನ್ನಡಿ ಮುಂದೆ ನಿಂತು ಕೊಂಡು ಕೇಳಿ ಕೊಳ್ಳುತ್ತೇನೆ " ಇವತ್ತೇ ನನ್ನ ಕೊನೆಯಾದರೆ, ನಾನು ಏನು ಮಾಡ ಬೇಕು?ಇವತ್ತು ಏನು ಮಾಡಬೇಕು?....ಯಾವಾಗಲು ಉತ್ತರ "ಏನು ಇಲ್ಲ" ಎಂಬದು ಸರಣಿ ದಿನಗಳಲ್ಲಿ ನನ್ನ ಕಾಡುತ್ತಾ ಇತ್ತು. ನನಗೆ ಗೊತ್ತು ನಾನು ಏನಾದರು ಬದಲಾವಣೆ ತರಬೇಕೆಂದು.

ನಾನು ಇಂದೇ ಸಾಯುತ್ತೇನೆ ಎಂಬುದೇ ನನಗೆ ಒಂದು ವಿಷಯ ಅರ್ಥ ಮಾಡಿಕೊಂಡ ನಂತರ ಬೇರೆ ಬೇರೆ ನಿರ್ದಾರಗಳನ್ನು ತೆಗೆದು ಕೊಳ್ಳಲು ಸಹಾಯವಾಯಿತು . ಬಾಹ್ಯ ಆಸಕ್ತಿಗಳು(ಆಸೆ), ಸೋಲುತ್ತೇನೆ ಎಂಬ ಭಯ, ಕಿನ್ನತೆ...ಮುಂತಾದ ವಿಷಯಗಳು ಸಾವಿನ ಮುಂದೆ ನಶ್ವರ, ಬದುಕುವುದೊಂದೇ ಸತ್ಯ. ನಾನು ಸಾಯುತ್ತೇನೆ ಎಂಬ ವಿಷಯದಿಂದ ನಾನು ಏನು ಕಳೆದು ಕೊಂಡೆ ಎಂಬುದನ್ನು ತಡೆಯಲು ಅವಕಾಶವಾಯಿತು. ನೀನು ಆಗಲೇ ಬೆತ್ತಲೆ, ಅದ್ದರಿಂದ ನಿನ್ನ ಹೃದಯದಿಂದ ನಿರ್ದಾರ ತೆಗೆದುಕೊಳ್ಳದಿರಲು ಯಾವುದೇ ಕಾರಣವಿಲ್ಲ.

ಒಂದು ವರ್ಷದ ಹಿಂದೆ ನನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಯಿತು, ವೈದ್ಯರು ನನಗೆ ಇನ್ನು ೬ ತಿಂಗಳಿನಲ್ಲಿ ಸಾಯುತ್ತೇನೆ ಎಂದು ಹೇಳಿ.....ನಿಮ್ಮ ಮನಗೆ ಹೋಗಿ ನಿಮ್ಮ ಹೆಂಡತಿ ಮತ್ತು ಮಕ್ಕಳಿಗೆ ಇನ್ನು ೧೦ ವರ್ಷಗಳು ವರೆಗೆ ನಾನು ಬದುಕುವುದಿಲ್ಲ, ಕೇವಲ ೩ ರಿಂದ ೬ ತಿಂಗಳು ಅಂಥ ಹೇಳಿ, ನಿಮ್ಮ ಮುಖ್ಯವಾದ ಕೆಲಸಗಳನ್ನು ಮುಗಿಸಿಕೊಂಡು ಬಿಡಿ ಎಂದು ಹೇಳಿ ಕುಟುಂಬದ ಭಾವನೆಗಳಿಗೆ ತೊಂದರೆಯಾಗದಿರಲಿ ಎಂದು ವೈದ್ಯರು ನನ್ನನ್ನು ಸಾವಿನ ಸಾಲಲ್ಲಿ ನಿಲ್ಲಿಸಲು ತುದಿಗಾಲಲ್ಲಿ ನಿಂತ್ತಿದ್ದರು. ಸತ್ಯವೇನೆಂದರೆ "ಶುಭಂ" ಹೇಳಲಿ ಎಂದು.

ಸಾವು ಎನ್ನುವುದು ಒಂದು "ಬೌದ್ದಿಕವಾದ", ಯಾರು ಸಾಯುದಕ್ಕೆ ಇಷ್ಟಪಡುವುದಿಲ್ಲ, ಸ್ವರ್ಗಕ್ಕೆ ಸತ್ತು ಹೋಗಬೇಕೆಂದು ಯಾರು ಯೋಚಿಸುವುದಿಲ್ಲ. ಯಾರು ಕೂಡ ಸಾವಿನಿಂದ ತಪ್ಪಿಸಿಕೊಳ್ಳಲು ಸಾದ್ಯವಿಲ್ಲ, ಸತ್ಯಕ್ಕೆ ಕಾರಣವೇನೆಂದರೆ ಸಾವು ಎನ್ನುವುದು ಜೀವನದ ಅವಿಷ್ಕಾರವೇ ಸರಿ, ಇದು ಜೀವನದ ಬದಲಾವಣೆಯ ಮಾರ್ಗ, ನಮ್ಮಹಳೆ ಕೊಳೆಯನ್ನು ತೆಗೆದು ಹೊಸ ಜಿವನಕ್ಕೆ ಮಾರ್ಗವನ್ನು ನೀಡುತ್ತದೆ. ನಿಮಗೆ ನೀವು ಹೊಸಬರಂತೆ ಕಾಣಿಸಬಹುದು, ಕಾಲ ಹೋದಂತೆ ನೀವು ಕೂಡ ಹಳಬರೇ ಆಗುತ್ತಿರಿ. ಇದು ನಿಮಗೆ ನಾಟಕೀಯವೆನಿಸಿದರು, ಕಷ್ಟ ಕಠೋರ ಸತ್ಯ.

ನಿಮ್ಮ ಸಮಯ ಚಿಕ್ಕದು, ಬೇರೆಯವರ ಜೀವನದಲ್ಲಿ ಸಮಯವನ್ನು ಕಳೆಯಬೇಡಿ. ಬೇರೆಯವರ ಅಭಿಪ್ರಾಯದ ಉತ್ತರದಲ್ಲಿ ಬದುಕಬೇಡಿ, ಯಾಕೆಂದರೆ ಅದು ನಮ್ಮ ಚಿಂತನೆಗೆ ಶಾಪವಿದ್ದಂತೆ. ನಿನ್ನ ಅಂತರಾಳದ ಮಾತಿಗೆ ಬೆಲೆಯನ್ನು ಕಂಡುಕೋ, ಹೊರತು ಬೇರೆಯವರ ಮಾತಿನ ಶಬ್ದದಲ್ಲಿ ನಿನ್ನನ್ನು ನೀನು ಮರೆಯಬೇಡ. ಎಂದಿಗೂ ನಿನ್ನ ಹೃದಯ ಮತ್ತು ಅಂತರಾಳದ ಮಾತಿನಂತೆ ನಡೆದುಕೊಳ್ಳುವ ಧರ್ಯವನ್ನು ಬೆಳೆಸಿಕೊ, ಬೇರೆಯವರಿಗೆ ನೀನು ಏನಾಗಬಹುದೆಂದು ತಿಳಿದಿರುತ್ತದೆ, ಇನ್ನು ಬೇರೆ ವಿಷಯಗಳು ಎರಡನೆಯದು.

ಕೊನೆಯಾದಾಗಿ ನಿಮಗೆಲ್ಲ ಒಂದು ವಿಷಯವನ್ನು ಹೇಳಬೇಕು "stay hungry, stay foolish"...ಈ ವಾಕವನ್ನು ನನಗೆ ಅವಾಗ ಅವಾಗ ಹೇಳಿಕೊಳ್ಳುತ್ತಾ ಇರುತ್ತೇನೆ....ಈಗ ನಿಮಗೇ ಅದನ್ನೇ ನನ್ನ ಶುಭಾಶಯವೆಂದು ಹೇಳುತ್ತೇನೆ......"stay hungry, stay foolish"

ನನ್ನ ಈ ಮೂರೂ ಲೇಖನಗಳು stansford ವಿಶ್ವವಿದ್ಯಾನಿಲಯದ ಪದವಿ ಪುರಸ್ಕಾರ ಸಮಾರಂಭದಲ್ಲಿ ಸ್ಟೀವ್ ಜಾಬ್ಸ್ ನೀಡಿದ ಮುಖ್ಯ ಭಾಷಣದ ಕನ್ನಡೀಕರಣ.