ಸ್ಟೇಟಸ್ ಕತೆಗಳು (ಭಾಗ ೧೦೦೪)- ನಾಯಿ ಪಾಠ

ಸ್ಟೇಟಸ್ ಕತೆಗಳು (ಭಾಗ ೧೦೦೪)- ನಾಯಿ ಪಾಠ

ಅಲ್ಲಿ ಬಲಗಡೆಗೆ ತಿರುಗಬೇಕು, ಒಂದಷ್ಟು ದೂರ ತಲುಪಿದ ನಂತರ ನಮ್ಮ ಮನೆ ಸಿಕ್ತದೆ. ಆ ಮನೆಯ ದಾರಿಗಿಂತ 10 ಹೆಜ್ಜೆ ಹಿಂದೆ ಒಂದು ಅರಳಿ ಮರ ಇದೆ. ಅಲ್ಲಿ ಯಾರು ಜನ ಹೆಚ್ಚಾಗಿ ಓಡಾಡೋದಿಲ್ಲ. ಆದರೆ ಅಲ್ಲೊಂದು ನಾಯಿ ಪ್ರತಿ ದಿನವೂ ಕುಳಿತು ಹೋಗುತ್ತಾ ಬರ್ತಾ ಇರೋರ್ನ ನೋಡ್ತಾ ಇರುತ್ತೆ. ಆ ಸ್ಥಳ ತುಂಬಾ ಪ್ರಶಸ್ತವಾದುದ್ದು. ಮಳೆನೂ ಹೆಚ್ಚಾಗಿ ಬೀಳುವುದಿಲ್ಲ, ಬಿಸಿಲು ಖಾರವಾಗಿರುವುದಿಲ್ಲ. ತಂಪಗಿನ ಆಯಕಟ್ಟಿನ ಜಾಗವನ್ನು ನಾಯಿ ಆರಿಸಿಕೊಂಡಿದೆ. ಆ ಸ್ಥಳವನ್ನು ಆಕ್ರಮಿಸಿಕೊಳ್ಳುವುದಕ್ಕಂತಲೇ ಒಂದಿಷ್ಟು ನಾಯಿಗಳು ಕಾಯ್ತಾ ಇರುತ್ತವೆ. ಹತ್ತಿರ ಬರೋದು ಬೊಗಳುವುದು ಆ ನಾಯಿಯನ್ನು ಉದ್ರೇಕಿಸಿ ಅಲ್ಲಿಂದ ಓಡುವಂತೆ ಮಾಡುವುದಕ್ಕೆ ಪ್ರಯತ್ನಿಸುತ್ತಾನೆ ಇರುತ್ತೆ. ಆದರೆ ಈ ನಾಯಿ ಒಂದು ಕ್ಷಣ ಉಳಿದ ನಾಯಿಗಳಿಗೆ ಪ್ರತಿಕ್ರಿಯೆಯನ್ನು ಕೊಡದೆ ಸುಮ್ಮನಾಗಿ ಬಿಟ್ಟಿದೆ. ನಾನು ಕೆಲವು ದಿನ ಗಮನಿಸಿ ಮತ್ತೆ ಯಾಕಿರಬಹುದು ಅಂತ ಅಂದುಕೊಂಡರೆ ಆ ನಾಯಿಗೆ ಗೊತ್ತಿದೆ, ಅನಗತ್ಯವಾಗಿ ಬೊಗಳಿ ತನ್ನ ದೇಹದ ಶಕ್ತಿ ಮತ್ತು ಸಮಯವನ್ನು ಯಾಕೆ ವ್ಯರ್ಥ ಮಾಡಿಕೊಳ್ಳಲಿ, ಬೊಗಳುವ ನಾಯಿಗಳು ಬೊಗಳಿ ಸುಸ್ತಾಗಿ ಹೊರಟು ಹೋಗುತ್ತವೆ. ನನಗೆ ಸ್ಥಳ ಬೇಕು ಮತ್ತೆ ನನ್ನ ಬದುಕಿನ ದಾರಿ ನನಗೆ ಗೊತ್ತಿದೆ. ಅವುಗಳನ್ನ ಬೆದರಿಸಿ ಓಡಿಸಿ ನನ್ನ ಸ್ಥಾಪನೆಯನ್ನು ಇಲ್ಲೇ ಮಾಡಿಕೊಳ್ಳಬೇಕು ಅಂತ ಏನೂ ಇಲ್ಲ. ಹಾಗಾಗಿ ನಾಯಿ ಮೌನವಾಗಿದೆ. ವಾದ ಮಾಡಿ ವಿಷಯವನ್ನು ವಿವರಿಸಿ ಅರ್ಥ ಮಾಡಿ ವ್ಯರ್ಥಲಾಪ ಮಾಡುವುದಕ್ಕಿಂತ ನಮ್ಮ ಕೆಲಸವನ್ನು ಮಾಡ್ತಾ ಹೋದ್ರೆ ಖಂಡಿತ ನಮಗೆ ಒಳ್ಳೇದಾಗುತ್ತದೆ... ನಾಯಿಯೂ ಪಾಠ ಕಲಿಸುತ್ತೆ..

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ