ಸ್ಟೇಟಸ್ ಕತೆಗಳು (ಭಾಗ ೧೦೦೬)- ಸೊಸೆ

ಸ್ಟೇಟಸ್ ಕತೆಗಳು (ಭಾಗ ೧೦೦೬)- ಸೊಸೆ

ಆ ಮನೆಯ ಹಿರಿಯ ತನ್ನ ಸೋಸೆಯನ್ನ ದೇವರಿಗಿಂತ ಹೆಚ್ಚಾಗಿ ಗಮನಿಸುತ್ತಾನೆ. ಅವಳ ಪ್ರತಿಯೊಂದು ಆಗು ಹೋಗಿನಲ್ಲಿ ಜೊತೆಯಾಗುತ್ತಾನೆ. ತನ್ನ ಮನೆಯವರಿಗಿಂತ ವಿಪರೀತವಾಗಿ ಹಚ್ಚಿಕೊಂಡಿದ್ದಾನೆ. ಅವಳ ಪ್ರತೀ ಹಜ್ಜೆಯನ್ನೂ ಜಾಗರೂಕವಾಗಿ ಗಮನಿಡುತ್ತಾನೆ.‌ ಸದಾ ಅವಳಿಗೆ ಬಂಗಾವಲಾಗಿ ನಿಂತಿದ್ದಾನೆ. ಅವನ ವರ್ತನೆ ಎಲ್ಲರಿಗೂ ವಿಪರೀತ ಅನ್ನಿಸೋಕೆ ಆರಂಭವಾಗಿ ಅವನನ್ನ ಒಂದು ದಿನ ಪ್ರಶ್ನೆ ಮಾಡಿದರು. ಅದಕ್ಕೆ ಹಿರಿಯ ನೀವ್ಯಾರದರೂ  ತುಂಬಾ ಜತನವಾಗಿ ಕಾಪಿಟ್ಟುಕೊಂಡಿರುವ ಮುತ್ತೊಂದನ್ನ ಯಾರಿಗಾದರೂ ಕೊಟ್ಟು ಬಿಡುತ್ತೀರಾ ಸಾದ್ಯವಿಲ್ಲ ತಾನೆ, ಹಾಗಾದರೆ ನಮ್ಮ ಮನೆಗೆ ಸೊಸೆಯಾಗಿ ಬಂದವಳು ಯಾರದೋ ಮನೆಯಲ್ಲಿ ಬೆಳಗಿದ ಮುತ್ತು ತಾನೆ, ಇನ್ನು ಮುಂದೆ ನಮ್ಮದೇ ಮನೆಯಲ್ಲಿ ಜೀವನ ಕಟ್ಟಿಕೊಳ್ಳುವವಳು ತಾನೆ . ಮುತ್ತಿಗಿಂತ ಮೌಲ್ಯಯುತವಾದ ಮಗಳನ್ನ ನಾನು ಗೌರವಿಸಿದರೆ ತಪ್ಪೇನು? ಉಳಿದ ಯಾರಲ್ಲೂ ಮಾತಿರಲಿಲ್ಲ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ