ಸ್ಟೇಟಸ್ ಕತೆಗಳು (ಭಾಗ ೧೦೦೭)- ನೆನಪು

ಸ್ಟೇಟಸ್ ಕತೆಗಳು (ಭಾಗ ೧೦೦೭)- ನೆನಪು

ಹೋ ಮಾರಾಯಾ ನಿನ್ನ ಹತ್ರನೇ ಮಾರಾಯ...ಯಾವಾಗ ತಿರುಗಿ ನೋಡ್ತೀಯಾ... ಹೆಜ್ಜೆಗಳನ್ನ ಇಟ್ಟು ತುಂಬಾ ದೂರ ಬಂದಿದ್ದೀಯಾ ಪ್ರತೀ ಸಲನಾ ಒಂದಷ್ಟು ದೂರ ಬಂದ ಮೇಲೆ ತಿರುಗಿ ನೋಡಬೇಕು. ಹಾಗೇ ಸುಮ್ಮನೇ ಸಾಗೋದಲ್ಲ.ಅರ್ಥವಾಯಿತಾ..?. ಅದಕ್ಕೆ  ಒಂದು ದಿನ ನಿಗದಿ ಮಾಡು, ಒಮ್ಮೆ ನಿಂತು ಬಂದ ದಾರಿ ಸರಿ ಇದೆಯಾ? ಯೋಚಿಸಿದ ದಾರಿಯಲ್ಲೇ ಸಾಗಿದ್ದೀಯಾ?.. ತಪ್ಪಿದೆಯಾ?...ಹೆಚ್ಚು ಹೆಜ್ಜೆಗಳನ್ನ ಕ್ರಮಿಸುವುದ್ದಕ್ಕೆ ಆಗಿದೆಯಾ? ತಪ್ಪೇನು ? ಸರಿ ಏನು? ಜೊತೆಗೆ ನಿಂತವರಾರು?ತೊರೆದವರಾರು? ಇನ್ನೇನು ಮಾಡೋದ್ದಕ್ಕಿದೆ. ಸಾಗುವ ದಾರಿಯ ಪರಿಚಯ ಇದೆಯಾ? ನಿನ್ನ ಯೋಜನೆಯಂತೆ ಸಾಗುತ್ತಿದೆ ತಾನೆ? ಇದನ್ನೆಲ್ಲ ಕೇಳಿಕೊಳ್ಳಬೇಕು. ಆಮೇಲೆ ಮುಂದೆ ಸಾಗು. ಅದಕ್ಕೆ ಒಂದು ದಿನ ನಿಗದಿ ಮಾಡು. ಅದು ನಿನ್ನ ಹುಟ್ಟಿದ ದಿನ ಆದರೆ ತುಂಬಾ ಒಳ್ಳೆಯದು. ಆ ದಿನ ನೆನಪಿರುತ್ತೆ. ಹಾಗೆ ನಿಂತು ಸಾಗಿದಾಗ ಮಾತ್ರ ತುಂಬಾ ದೂರದವರೆಗೆ ಸಾಗಬಹುದು.... ಅರ್ಥವಾಯಿತು ತಾನೆ… ಚಿಕ್ಕಪ್ಪನ ಮಾತು ತುಂಬಾ ಖಾರವಾಗಿತ್ತು. ಬದುಕನ್ನು ಮತ್ತೊಮ್ಮೆ ಎಚ್ಚರಿಸುವಂತಿತ್ತು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ