ಸ್ಟೇಟಸ್ ಕತೆಗಳು (ಭಾಗ ೧೦೧೦)- ತೃಪ್ತಿ

ಸ್ಟೇಟಸ್ ಕತೆಗಳು (ಭಾಗ ೧೦೧೦)- ತೃಪ್ತಿ

ತೃಪ್ತಿಯಾಗ ಬೇಡವೋ ಅದು ನಿನ್ನನ್ನು ಇನ್ನೊಂದಷ್ಟು ಎತ್ತರಕ್ಕೆ ಹೋಗುವುದನ್ನ ತಡೆಹಿಡಿಯುತ್ತೆ. ಅಮ್ಮ ಏನಮ್ಮ ನೀನು ಕೆಲವೊಂದು ವಿಷಯಕ್ಕೆ ತೃಪ್ತಿ ಪಡಬೇಕೂ ಅಂತೀಯಾ? ಈಗ ಕೇಳಿದರೆ ತೃಪ್ತಿ ಪಡಬೇಡ ಅಂತೀಯಾ? ನಿನ್ನ ಮಾತು ಅರ್ಥನೇ ಆಗ್ತಾ ಇಲ್ಲ?

"ನೋಡು ಮಗು ಕೆಲವೊಂದು ವಿಚಾರದಲ್ಲಿ ತೃಪ್ತಿಯಾಗಬೇಕು. ನೀನು ಊಟ ಮಾಡುತ್ತಿರುವಾಗ ನಿನ್ನ ತಟ್ಟೆಯಲ್ಲಿ ಬಡಿಸಿಕೊಂಡ ವಸ್ತುಗಳನ್ನು ಕಂಡು ನೀನು ತೃಪ್ತಿ ಪಡಬೇಕು. ಆದರೆ ನಿನಗೆ ಸಿಕ್ಕ ಅವಕಾಶಗಳಿಗೆ ನೀನು ಮಾಡುತ್ತಿರುವ ಕೆಲಸಗಳಿಗೆ ನಿನ್ನ ಯೋಚನೆಗಳಿಗೆ ನಿನ್ನ ಸಾಮರ್ಥ್ಯಗಳ ಬಗ್ಗೆ ನಿನಗೆ ಯಾವತ್ತೂ ತೃಪ್ತಿಯಾಗಬಾರದು. ಇನ್ನೇನು ಹೊಸತನ ಮಾಡಬೇಕು ಅನ್ನುವ ಹಂಬಲ ಇರಬೇಕು. ಹುಮ್ಮಸ್ಸಿರಬೇಕು, ಹಾಗಾದರೆ ಮಾತ್ರ ನೀನು ಇನ್ನೊಂದಷ್ಟು ಎತ್ತರವನ್ನು ತಲುಪ್ತೀಯಾ? ತೃಪ್ತಿ ಪಟ್ಟಾಗ ಅಲ್ಲೇ ಉಳಿದುಕೊಂಡು ಬಿಡ್ತೀಯ. ಮುಂದೆ ಸಾಗುವುದೇ ಇಲ್ಲ. ನೀನು ಇನ್ನೊಂದಷ್ಟು ಹುಮ್ಮಸ್ಸಿನಿಂದ ಮಾಡುತ್ತಿರುವ ಕೆಲಸವನ್ನ ಇನ್ನೊಂದು ಹೆಜ್ಜೆ ಮುಂದುವರೆಸಿದರೆ ನಿನ್ನನ್ನು ನಂಬಿಕೊಂಡವರಿಗೂ ಇನ್ನೊಂದಷ್ಟು ಧೈರ್ಯ ಸಿಗುತ್ತದೆ. ಅವುಗಳ ಕಡೆಗೆ ಮನಸ್ಸಿಟ್ಟು ಹೆಜ್ಜೆ ಹಾಕಬೇಕು. ಅದಕ್ಕೆ ಹೇಳಿದ್ದು ಎಲ್ಲವಕ್ಕೂ ತೃಪ್ತಿಯಾಗಬೇಡ ಅಂತ. ಮುಂದುವರಿಯುತ್ತಾ ಹೋದ ಹಾಗೆ ನೀನೊಬ್ಬ ಅದ್ಭುತ ಕಲಾಕಾರನಾಗ್ತೀಯಾ ?ಅದಕ್ಕಾಗಿ ತೃಪ್ತಿ ಹೊಂದಬೇಡ. ಪ್ರತಿಯೊಂದರಲ್ಲಿ ಹೊಸತನವನ್ನು ಹೊಸ ವಿಚಾರವನ್ನು ಕಾಣುತ್ತಾ ಮುಂದುವರಿಯುತಾ ಹೋಗು. ಅಮ್ಮ ಹೇಳಿದ್ದು ಅರ್ಥ ಆಯ್ತು. ಈಗ ತೃಪ್ತಿ ಯಾವುದಕ್ಕೆ ಹೊಂದಬೇಕು ಹೊಂದಬಾರದು ಅನ್ನುವ ಯೋಚನೆಯನ್ನೇ ಮನಸಲ್ಲಿಟ್ಟುಕೊಂಡು ಸಾಗ್ತಾ ಇದ್ದೇನೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ