ಸ್ಟೇಟಸ್ ಕತೆಗಳು (ಭಾಗ ೧೦೧೨)- ಅಮ್ಮ

ಸ್ಟೇಟಸ್ ಕತೆಗಳು (ಭಾಗ ೧೦೧೨)- ಅಮ್ಮ

ಅವರು ಪ್ರತಿ ದಿನ ಸಂಜೆಯಾದರೆ ಸಾಕು ಮನೆಯಲ್ಲಿ ಹೊಸ ಕೆಲಸವನ್ನು ಶುರು ಮಾಡಿಕೊಳ್ಳುತ್ತಾರೆ. ಅವರ ಮನೆಯಲ್ಲಿರೋದು ಇಬ್ಬರೇ ಆದರೂ ಕೂಡ ಎಂಟು ಹತ್ತು ಮಂದಿಗೆ ಸಂಜೆ ಹೊತ್ತಿನ ವಿವಿಧ ಬಗೆಯ ತಿಂಡಿಗಳನ್ನು ತಯಾರು ಮಾಡುತ್ತಾರೆ. ಯಾವುದೋ ಒಂದು ಹೋಟೆಲ್ ನಡೆಸ್ತಾ ಇದ್ದಾರೆ ಅಂತ ಅಲ್ಲ, ಇದನ್ನ ಮಾರಾಟ ಮಾಡುವುದಕ್ಕೆ ಅಂತನೂ ಅಲ್ಲ. ಅವರ ಹಲವು ಕೆಲಸಗಳ ಬದಿಗೆ ಬಿಟ್ಟು  ತನ್ನದೇ ಮಗನ ವಯಸ್ಸಿನ ಇನ್ನೊಂದಷ್ಟು ಜನರಿಗೆ ಹೊಟ್ಟೆ ತುಂಬಾ ಏನಾದರೂ ತಿನ್ನೋದಕ್ಕೆ ಕೊಡಬೇಕು ಅಂತ ತಯಾರಿ ಮಾಡುತ್ತಾರೆ .ಅದು ತುಂಬಾ ಪ್ರೀತಿಯಿಂದ. ಒಂದು ದಿನವೂ ಲಾಭವನ್ನು ನಿರೀಕ್ಷಿಸಿದವರಲ್ಲ. ಮಗನ ಗೆಳೆಯರೆಲ್ಲ ಸೇರ್ಕೊಂಡು ನಾಟಕ ಮಾಡುತ್ತಿದ್ದಾರೆ, ಅವರ ಖುಷಿಗೆ ಅಮ್ಮನೂ ಕೈ ಜೋಡಿಸಿದ್ದಾರೆ. ಅವರಿಗೆ ಮಾಡೋದಿಕ್ಕೆ ಕೆಲಸ ಸಾವಿರ ಇದ್ದರೂ, ಅವರ ಆರೋಗ್ಯಕ್ಕೆ ತಪ್ಪಿದರೂ, ಮನಸ್ಸು ವಿಚಲಿತವಾದರೂ ಕೂಡ ಮಕ್ಕಳಿಗೆ ತಿನ್ನೋದಕ್ಕೆ ಒಂದು ದಿನವೂ ಕಡಿಮೆ ಮಾಡಿದವರಲ್ಲ. ಇವತ್ತು ಕೂಡ ಒಲೆಯ ಮುಂದೆ ಕುಳಿತು ಮಕ್ಕಳಿಗೆ ಏನು ಮಾಡಿ ಕೊಡ್ಲಿ ಅನ್ನೋದನ್ನ ಯೋಚಿಸ್ತಾ ತಯಾರಿ ಆರಂಭ ಮಾಡಿದ್ದಾರೆ. ಅವರ ಮಗ ಕೊಟ್ಟ ತಿಂಡಿ ತಿನ್ನುತ ಅವರಮ್ಮನ ಮುಖ ನೆನಪಾಯಿತು ಅಲ್ಲಿ ತಿಂಡಿ ತಿನ್ನುತ್ತಾ ಇರೋ ಹಲವರು ಅಮ್ಮನ  ಮುಖವನ್ನು ನೋಡಿಲ್ಲ.ಅಮ್ಮನೂ ಆ ಮಕ್ಕಳನ್ನ ನೋಡಿಲ್ಲ ಇದೆ ಅಲ್ವಾ ಇದಕ್ಕೆ ಅದ್ಭುತ...ತಾಯ ಹೃದಯ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ