ಸ್ಟೇಟಸ್ ಕತೆಗಳು (ಭಾಗ ೧೦೧೫)- ಪ್ರಶ್ನೆ

ಸ್ಟೇಟಸ್ ಕತೆಗಳು (ಭಾಗ ೧೦೧೫)- ಪ್ರಶ್ನೆ

ಬೆಳಗ್ಗೆ ಮುಂಜಾನೆ 3:00ಗೆ ಎದ್ದು ಧ್ಯಾನ ಮಾಡಿ ದೇವರಿಗೊಂದು ದೀಪ ಹಚ್ಚಿ ಯೋಗಾಸನ ಮಾಡ್ತಾನಲ್ಲ ಆ ಯೂಟ್ಯೂಬ್ ವಿಡಿಯೋ ನೋಡಬೇಕು ಇಷ್ಟು ಅದ್ಭುತವಾಗಿ ಮಾಡುತ್ತಾನೆ. ತುಂಬಾ ಸಪೂರ ಇದ್ದ ವ್ಯಕ್ತಿ ಪ್ರತಿದಿನ ಕಷ್ಟಪಟ್ಟು ದೇಹ ದಂಡಿಸಿ ಬೆವರು ಸುರಿಸಿ ಈಗ ಕಟ್ಟು ಮಸ್ತಾದ ದೇಹವನ್ನು ಹೊಂದಿರು ವಿಡಿಯೋನೋ ನೀವು ನೋಡಬೇಕು. ಏನೂ ಕೆಲಸ ಇಲ್ಲದೆ ಸುಮ್ಮನೆ ಕುಳಿತಿದ್ದ ವ್ಯಕ್ತಿ ಸ್ಟಾಕ್ ಮಾರ್ಕೆಟ್ನಲ್ಲಿ ಪ್ರತಿದಿನವೂ ಕಷ್ಟ ಪಟ್ಟ ಕಾರಣ ಈಗ ಹಣ ಸಂಪಾದಿಸಿದ್ದಾನೆ. ಒಂದಷ್ಟು ಹೊಸ ಹೊಸ ವಿದ್ಯೆಯನ್ನು ಕಲಿತವನೊಬ್ಬ ಎಲ್ಲರಿಗಿಂತ ಹೆಚ್ಚು ಹೆಸರ ಸಂಪಾದಿಸಿದ್ದಾನೆ. ಇದೆಲ್ಲಾ ವಿಡಿಯೋಗಳನ್ನು ನೀವು ನೋಡಬೇಕು ಎಷ್ಟು ಅದ್ಭುತವಾಗಿದೆ ಅಂತಂದ್ರೆ ನಾವು ಅವುಗಳನ್ನು ಅನುಸರಿಸಿ ಅದ್ಭುತ ವ್ಯಕ್ತಿಗಳಾಗಬೇಕು ಅಂತ ಅನ್ಸುತ್ತೆ ಇದನ್ನ ಪ್ರತಿದಿನ ನೀನು ನೋಡ್ತಿಯಲ್ಲ ನೋಡಿದ ಮೇಲೆ ಅದರಲ್ಲಿ ಒಂದನ್ನು ಅನುಸರಿಸದೇ ಹೋದರೆ ನೋಡಿದ್ದಕ್ಕೆ ಏನು ಪ್ರಯೋಜನ ನಿನ್ನ ಸಮಯ ವ್ಯರ್ಥವಾಗಿದೆ ಬಿಟ್ಟರೆ ನೀನು ಅದರಲ್ಲಿ ಒಂದು ಅಂಶವನ್ನು ಅಳವಡಿಸಿಕೊಂಡಿಲ್ಲ. ಎಲ್ಲರ ಮುಂದೆ ಬಾಯಿ ಮಾತಲ್ಲಿ ದೊಡ್ಡ ದೊಡ್ಡ ವಿಚಾರವನ್ನು ಹೇಳುತ್ತೀವಿ ಅಳವಡಿಸಿಕೊಳ್ಳುವುದು ಕಾಣುತ್ತಿಲ್ಲ ಈ ಆದಾಗ ನೀನು ಹೇಗೆ ಹೊಸತನ ಸಾಧಿಸುವುದಕ್ಕೆ ಸಾಧ್ಯ. ನೀನು ಹೇಗೆ ಅದ್ಭುತವಾಗಿ ಕಾಣಿಸುವುದಕ್ಕೆ ಸಾಧ್ಯ? ನಿನ್ನತ್ರ ಸಾಧ್ಯತೆಗಳಿದ್ದರೂ ಕೂಡ ಬೇರೆಯವರ ಸಾಧನೆಗಳನ್ನು ಕಂಡು ಎಷ್ಟು ಕಷ್ಟಪಟ್ಟಿದ್ದಾರೆ ಅಂತ ಅಂದುಕೊಳ್ಳುವುದೇ ಬಿಟ್ಟು ಅಂತ ಅಂದುಕೊಳ್ಳುವುದನ್ನೆ ರೂಡಿಸಿಕೊಂಡಿದ್ದೀಯ ನೀನು ಯಾವಾಗ ಬದಲಾಗ್ತೀಯ ನಿನಗೆ ಎಷ್ಟೇ ಸಲ ಹೇಳಿದರೂ ಆ ಕ್ಷಣಕ್ಕೆ ನಾನಿದನ್ನ ಮಾಡಬೇಕು ಅಂತ ಯೋಚನೆ ಮಾಡಿ ಹಾಗೆ ನಿದ್ದೆ ಜಾರದವ ಮರುದಿನ ಬೆಳಗ್ಗೆನಿಂದ ನಿನ್ನ ಪ್ರತಿ ದಿನದ ದಿನಾಚರಣೆ ಆರಂಭವಾಗುತ್ತದೆ ವಿನಹ ಬದಲಾಗುವುದಿಲ್ಲ ನಿನ್ನನ್ನು ನಂಬಿಕೊಂಡುತ್ತಿದೆ ನೀನು ಯಾವಾಗ ಬದಲಾಗುತ್ತಿಯೋ ನನ್ನೊಳಗೆ ಕುಳಿತ ನನ್ನ ನನ್ನನ್ನ ತಿವಿದು ತಿವಿದು ಪ್ರಶ್ನೆ ಕೇಳುತ್ತಿದ್ದರು ಸಹ ನಾನವರಿಗೆ ತಿರುಗಿ ಉತ್ತರ ಕೊಡುತ್ತಿಲ್ಲ ಯಾಕೆ ಎನ್ನುವ ಚಿಂತೆ ನನ್ನೊಳಗೆ ಕಾಡುತ್ತಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ