ಸ್ಟೇಟಸ್ ಕತೆಗಳು (ಭಾಗ ೧೦೧೬)- ನಿರ್ದೇಶನ

ಸ್ಟೇಟಸ್ ಕತೆಗಳು (ಭಾಗ ೧೦೧೬)- ನಿರ್ದೇಶನ

ನೀನು ಅದ್ಭುತವಾಗಿ ನಿರ್ದೇಶನ ಮಾಡ್ತೀಯಾ, ಉತ್ತಮ ಚಿತ್ರಕಥೆ ಬರಿತಿಯ, ಸಂಭಾಷಣೆ ಬರಿತಿಯಾ, ನಟನೆಯನ್ನು ಮಾಡುತ್ತೀಯಾ. ಇವುಗಳೆಲ್ಲವನ್ನ ಸೇರಿಸಿಕೊಂಡು ಕಿರು ಚಿತ್ರಗಳನ್ನು ದೊಡ್ಡ ಚಿತ್ರಗಳನ್ನು ನಿರ್ದೇಶಿಸಿದರೆ  ಹೆಸರು ಸಂಪಾದಿಸಬಹುದು. ಕಿಸೆಗೊಂದಿಷ್ಟು ಹಣವನ್ನು ಸಂಪಾದಿಸಬಹುದು. ಆದರೆ ನಿನ್ನ ಚಿತ್ರಕಥೆ, ನಿರ್ದೇಶನ, ಅಭಿನಯ ಇದು ಇನ್ನೊಬ್ಬರ ಜೀವನವನ್ನ ಅಡಿಮೇಲು ಮಾಡುವಂತಿರಬಾರದು. ನೀನಲ್ಲಿ ನಡೆಸುವ ಸಂಭಾಷಣೆ ನೀನು ರೂಪಿಸಿದ ಚಿತ್ರಕಥೆಗಳು ನೀನು ಊಹಿಸಿಕೊಂಡಂತಹ ಕಾಲ್ಪನಿಕ ಕಥೆಗಳು ಇವೆಲ್ಲವೂ ಕೂಡ ನಿನ್ನೆದುರು ನಿಂತ ವ್ಯಕ್ತಿಯ ಜೀವನದ ದಾರಿಯನ್ನ ಅಲ್ಲೋಲ ಮಾಡಿಬಿಡಬಹುದು. ಹಾಗಾಗಿ ಅವರವರ ಜೀವನದ ಚಿತ್ರಕಥೆಗಳನ್ನು ಅವರವರೇ ಬರೆದಿಟ್ಟುಕೊಂಡಿರುತ್ತಾರೆ, ನಿಮ್ಮ ಜೀವನದ ಚಿತ್ರವನ್ನು ಅದ್ಭುತವಾಗಿ ನಿರ್ದೇಶನದ ಜವಾಬ್ದಾರಿ ನಿಮ್ಮದು, ಅದು ಬಿಟ್ಟು ಇನ್ನೊಬ್ಬರ ಜೀವನದಲ್ಲಿ ಸಂಭಾಷಣೆ ಸಂಕಲನ ಚಿತ್ರಕಥೆ ನಿರ್ದೇಶನಗಳನ್ನು ಮಾಡ ಹೊರಟರೆ ನಿಮ್ಮ ಜೀವನವನ್ನು ಇನ್ಯಾರಾದರೂ ನಿರ್ದೇಶನ ಮಾಡಬಹುದು. ಎಚ್ಚರವಾಗಿರು.... ದೂರದೂರಿಗೆ ಕೆಲಸಕ್ಕೆ‌ ಹೊರಟುವಾಗ ಅಪ್ಪ‌ಹೇಳಿದ ಮಾತನ್ನ ನೆನಪಿನ‌ ಬುತ್ತಿಯಲ್ಲಿ ಗಟ್ಟಿಯಾಗಿ ಇಟ್ಟುಕೊಂಡೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ