ಸ್ಟೇಟಸ್ ಕತೆಗಳು (ಭಾಗ ೧೦೧೯)- ಬೆಲೆ

ಸ್ಟೇಟಸ್ ಕತೆಗಳು (ಭಾಗ ೧೦೧೯)- ಬೆಲೆ

ದಿನವೂ ನಡೆಯುವ ದಾರಿ. ಹೋಗಿ ಬರುವ ದಾರಿಯಲ್ಲಿ ಅಷ್ಟೊಂದು ದೊಡ್ಡ ಬದಲಾವಣೆ ಅವರಿಗೆ ಕಾಣುತ್ತಾನೂ ಇರಲಿಲ್ಲ. ಪ್ರತಿದಿನ ಶಾಲೆಗೆ ಹೋಗುವ ದಾರಿ ಅಣ್ಣ ತಂಗಿ ಇಬ್ಬರ ಜೊತೆಯಾಗಿ ಊರಕೆರೆಯನ್ನ ದಾಟಿಕೊಂಡು ಶಾಲೆಗೆ ತಲುಪಬೇಕು. ಅವರಲ್ಲಿ ಹಲವು ಕನಸುಗಳಿದ್ದವು. ಇತ್ತೀಚಿಗೆ ಹಲವರು ಊರ ಕೆರೆಗೊಂದು ತಡೆಗೋಡೆಗಟ್ಟುವುದಕ್ಕೆ ಮನವಿ ಸಲ್ಲಿಸಿದ್ರು .ಸರಕಾರಕ್ಕೆ ಅದರಿಂದ ಯಾವುದೇ ರೀತಿಯ ಉಪಯೋಗ ಇರದ ಕಾರಣ ಆ ಮನವಿಯನ್ನು ಯಾರು ಪುರಸ್ಕರಿಸಲೇ ಇಲ್ಲ. ಮಳೆ ನೀರು ಕೆರೆ ತುಂಬಿ ನೆಲದಲ್ಲಿ ಹರಿಯುವುದಕ್ಕೆ ಪ್ರಾರಂಭವಾಗಿತ್ತು. ಪ್ರತಿದಿನ ನಡೆಯುತ್ತಿದ್ದ ಕಾಲುಗಳು ದಾರಿ ತಪ್ಪಿ ಗೊತ್ತಾಗದೆ ಕೆರೆಯಳಕ್ಕೆ ಜಾರಿಹೋದವು. ಜೋರು ಗುಡುಗು ಸಿಡಿಲಿನ ಮಧ್ಯೆ ಹಲವು ಕನಸುಗಳನ್ನ ಕಟ್ಟಿಕೊಂಡಿದ್ದ ಪುಟ್ಟ ಜೀವಗಳೆರಡು ಉಸಿರು ನಿಲ್ಲಿಸಿದ್ದವು. ಮನೆಯ ಕನಸುಗಳು ಅಲ್ಲೇ ಮುದುಡಿ ಹೋದವು. ಮನವಿ ಪತ್ರ ಇಂದಿಗೂ ಕೂಡ ಗ್ರಾಮ ಪಂಚಾಯಿತಿಯಲ್ಲಿ ಧೂಳು ಹಿಡಿಯುತ್ತಿದೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ