ಸ್ಟೇಟಸ್ ಕತೆಗಳು (ಭಾಗ ೧೦೨೦)- ಸಮಯ

ಸ್ಟೇಟಸ್ ಕತೆಗಳು (ಭಾಗ ೧೦೨೦)- ಸಮಯ

ನನಗೆ ಆಗಾಗ ತುಂಬಾ ಬೇಜಾರಾಗುತ್ತೆ? ಅದನ್ನು ತಡೆಯೋಕ್ಕಾಗೋದಿಲ್ಲ. ನನಗೆ ಯಾಕೆ ಮತ್ತೆ ಮತ್ತೆ ಬೇಜಾರಾಗುತ್ತೆ ಅಂತ ಮನಸ್ಸಿನೊಳಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾನೆ ಇರುತ್ತವೆ. ಅದನ್ನ ಎಲ್ಲರ ಬಳಿ ಹೇಳುತ್ತಾ ಹೋಗ್ತೇನೆ. ಒಬ್ಬೊಬ್ಬರು ಒಂದೊಂದು ರೀತಿಯ ಕಾರಣಗಳನ್ನು ಕೊಡುತ್ತಾರೆ. ಆದರೆ ಅವತ್ತು ನನ್ನ ಪರಿಚಯಿಸಿದವರು ಕೊಟ್ಟ ಉತ್ತರ ಯಾಕೋ ತುಂಬಾ ಹತ್ತಿರ ಅಂತ ಅನ್ನಿಸ್ತು. "ನಾವು ನಮ್ಮ ಮನಸ್ಸಿನಲ್ಲಿ ಒಂದು ಕಲ್ಪನೆಯ ಗೂಡನ್ನು ಕಟ್ಟಿಕೊಂಡಿರುತ್ತೇವೆ. ನಮಗೆ ಹೀಗಾಗಬೇಕು, ಹೀಗಿರಬೇಕು, ಇಂಥದ್ದು ಸಿಗಬೇಕು ಹೀಗೆ ನಡಿಬೇಕು ಅಂತ ಕೆಲವೊಂದು ಸಲ ಹಾಗೆ ನಡೆಯುವುದಿಲ್ಲ. ನನ್ನ ಜೀವನದಲ್ಲಿ ಏನು ಆಗ್ತಾ ಇಲ್ವಲ್ಲ ಅಂತಾನೂ  ಮನಸ್ಸು ಮಾತನಾಡುತ್ತೆ. ಇದು ಸರಿಯಾಗಬೇಕು ಅಂತ ಅಂದ್ರೆ ನಾವು ನಮ್ಮ ಮನಸ್ಸನ್ನು ಸರಿ ದಾರಿಯಲ್ಲಿ ಕರೆದುಕೊಂಡು ಹೋಗಬೇಕು .ಕೆಲವೊಂದು ಸಲ ಸಮಯ ಸಂದರ್ಭಗಳಿಗೋಸ್ಕರ ನಾವು ಅಂದುಕೊಂಡ ಹಾಗೆ ಆಗುವುದಿಲ್ಲ. ಒಂದಿಷ್ಟು ಬದಲಾವಣೆಗಳಾಗುತ್ತವೆ. ನನ್ನ ಮನಸ್ಸಿನಲ್ಲಿ ಅಂದುಕೊಂಡದ್ದು ಮಾತ್ರ ಸತ್ಯ ಅದೇ ನನಗೆ ಸಿಗಬೇಕು ಅಂತ ಅಂದುಕೊಂಡರೆ ಕೆಲವೊಂದು ಅದ್ಭುತವಾದದ್ದನ್ನ ನಾವು ಕಳೆದುಕೊಳ್ಳಬಹುದು. ಹಾಗಾಗಿ ಆ ಕ್ಷಣಕ್ಕೆ ವಸ್ತು ಸ್ಥಿತಿಗೆ ನಮಗೆ ಯಾವುದು ಒಪ್ಪಿಗೆ ಆಗುತ್ತೋ ಅದನ್ನ ನಮ್ಮದು ಅಂತ ತಿಳಿದುಕೊಳ್ಳಬೇಕು. ನಮಗೆ ನೀಡಬೇಕಾದ್ದು ಯಾವುದೋ ಒಂದು ರೂಪದಲ್ಲಿ ಖಂಡಿತವಾಗಿಯೂ ನಮ್ಮನ್ನು ತಲುಪುತ್ತದೆ. ಇದು ನಿಜಾ ಅಂತ ಅನ್ನಿಸಿತು ಹಾಗೇ ಬದುಕಿದ್ದೇನೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ