ಸ್ಟೇಟಸ್ ಕತೆಗಳು (ಭಾಗ ೧೦೨೫)- ಮೌನ
ಆ ಮಗುವಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಇಷ್ಟು ಹೊತ್ತಿನವರೆಗೆ ಅಮ್ಮ ತುಂಬಾ ಕಷ್ಟಪಟ್ಟರು. ಎಲ್ಲರ ಬಳಿ ಹೋಗಿ ಕೈಯೊಡ್ಡಿ ಬೇಡಿದರೂ ಯಾರೂ ಏನೂ ನೀಡ್ತಾ ಇಲ್ಲ. ಅಮ್ಮನಿಗೆ ಮಾಡುವುದಕ್ಕೆ ಇದೇ ಕೆಲಸ ಅಂತಲ್ಲ. ಆದರೆ ಇದ್ದ ಕೆಲಸದ ಕಡೆಗಳಿಂದ ಏನು ಪ್ರತಿಫಲ ಸಿಗದೇ ಇದ್ದಾಗ ಅಮ್ಮ ಈ ದಾರಿಯನ್ನ ಆಯ್ದುಕೊಂಡಿದ್ದರು. ಅಮ್ಮ ಕೈಯ್ಯೊಡ್ಡಿದರು ಕೂಡ ಏನು ಸಿಗದೇ ಇದ್ದಾಗ ಅಲ್ಲೇ ಇದ್ದ ನೀರು ಕುಡಿದು ಗೋಡೆಗೆ ಒರಗಿ ನೋವಿನಿಂದ ಕುಳಿತುಬಿಟ್ರು. ಇವೆಲ್ಲವನ್ನ ಗಮನಿಸ್ತಾ ಇದ್ದ ಪುಟ್ಟ ಮಗು ಇಷ್ಟರವರೆಗೂ ಸುಮ್ಮನಿದ್ದದ್ದು ಕಣ್ಣೀರಿಡುತ್ತಾ ಎಲ್ಲರ ಮುಂದೆ ಕೈಯೊಡ್ಡುವುದ್ದಕ್ಕೆ ಪ್ರಾರಂಭ ಮಾಡಿತು. ಆ ಮಗುವಿಗೆ ಮಾತು ತಿಳಿಯುತ್ತಿಲ್ಲ ಆದರೆ ಅಮ್ಮನ ನೋವನ್ನ ಕಡಿಮೆ ಮಾಡಬೇಕು ಅನ್ನೋ ಕಾರಣಕ್ಕೆ ಓಡಾಡ್ತಾನೆ ಇದೆ. ಆ ಮಗುವಿನ ಮುಖ ನೋಡಿ ಒಂದಷ್ಟು ಜನ ಏನೋ ನೀಡಿದರು ಅದನ್ನ ಸಂಭ್ರಮದಿಂದ ಓಡೋಡಿ ಬಂದು ಅಮ್ಮನ ಕೈಗೆ ನೀಡಿದಾಗ ಅಮ್ಮನಿಗೆ ಅದನ್ನು ಕಂಡ ಸಂಭ್ರಮಿಸಬೇಕೋ ದುಃಖಿಸಬೇಕೋ ಒಂದೂ ಅರಿಯದೆ ಹಾಗೆ ಮತ್ತೆ ಕಣ್ಣೀರಿಡುತ್ತಾನೆ ಮೌನವಾದಳು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ