ಸ್ಟೇಟಸ್ ಕತೆಗಳು (ಭಾಗ ೧೦೩೫)- ಸಮಸ್ಯೆ

ಸ್ಟೇಟಸ್ ಕತೆಗಳು (ಭಾಗ ೧೦೩೫)- ಸಮಸ್ಯೆ

ಆ ರಸ್ತೆಯಲ್ಲಿ ಹಾಗೆ ಮುಂದೆ ದಾಟುತ್ತಾ ಇದ್ದೆ. ನಾನೇನು ಅಷ್ಟು ತುರ್ತು ಕೆಲಸದ ಕಡೆಗೆ ಹೋಗುವನಲ್ಲ. ಜನ ಒಂದಷ್ಟು ಗುಂಪು ಸೇರಿದ್ದರು ಯಾಕೆ ಸೇರಿದ್ದಾರೆ ಅಂತ ಗೊತ್ತಿರಲಿಲ್ಲ. ಆ ಕಾರಣಕ್ಕೆ ಒಂದು ಕಡೆ ಬೈಕು ನಿಲ್ಲಿಸಿ ಸೇರಿದ ಕಾರಣವನ್ನ ತಿಳಿದು ತಿಳಿದುಕೊಳ್ಳೋಕೆ ಅಕ್ಕಪಕ್ಕದವರಲ್ಲಿ ವಿಚಾರಿಸದೆ ಅವರಿಗೂ ಕೂಡ ಕಾರಣ ಗೊತ್ತಿಲ್ಲ. ಅವರು ಕುತೂಹಲಕ್ಕೆ ಅಲ್ಲಿ ನಿಂತಿದ್ರು. ಮಾತುಕತೆ ಜೋರಾಗ್ತಾ ಇತ್ತು ಯಾರು ಯಾರಿಗೂ ಜೋರು ಮಾತಿನಲ್ಲಿ ಸ್ವರ ಏರಿಸಿ ಮಾತನಾಡುತ್ತಿದ್ದರು. ಪೊಲೀಸ್ ಜೀಪಿನ ಕೆಂಪು ಬಲ್ಬು ತಿರುಗುತ್ತಾನೆ ಇತ್ತು. ಆ ಜಗಳ ನಿಲ್ಲುವ ಯಾವ ಲಕ್ಷಣವೂ ಕಾಣ್ತಾ ಇಲ್ಲ. ನೋಡು ನೋಡುತ್ತಿದ್ದಂತೆ ಆ ರಸ್ತೆಯಲ್ಲಿ ವಾಹನ ಹೋಗುವುದಕ್ಕೆ ಸಮಸ್ಯೆ ಉಂಟಾಗಿ ವಾಹನಗಳು ರಸ್ತೆ ಬದಲಿಸಿ ಹೋಗುವುದಕ್ಕೆ ಆರಂಭವಾದವು. ಯಾಕೋ ವಿಷಯ ಇನ್ನೊಂದಷ್ಟು ದೊಡ್ಡ ಮಟ್ಟಕ್ಕೆ ಹೋಗ್ತಾ ಇದೆ ಅನ್ನುವಷ್ಟರಲ್ಲಿ ಜೋರಾದ ಗುಡುಗಿನೊಂದಿಗೆ ಮಳೆ ಹನಿಯೋದಕ್ಕೆ ಪ್ರಾರಂಭವಾಯಿತು. ಕೆಲವೇ ಕ್ಷಣಗಳಲ್ಲಿ ಅಲ್ಲಿ ಎರಡು ಬೈಕು ಮತ್ತು ನಾಲ್ಕು ಜನರನ್ನು ಬಿಟ್ರೆ ಬೇರೆ ಯಾರು ಇಲ್ಲ. ಆ ಬೈಕಿ ಆ ಬೈಕಿನಲ್ಲಿದ್ದ ನಾಲ್ಕು ಜನರಿಗೂ ಅವರವರ ಮನೆಗೆ ತೆರಳುವ ಅವಶ್ಯಕತೆ ಇತ್ತು. ಹಾಗಾಗಿ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಅವರ ಮನೆ ಕಡೆಗೆ ನಡೆದೇಬಿಟ್ರು. ಸಮಸ್ಯೆ ಪರಿಹಾರವಾಗಿತ್ತು. ಇಕ್ಕಟ್ಟಿನ ಸಮಸ್ಯೆ ಪರಿಹಾರವಾಗುವುದಕ್ಕೆ ಮಳೆಯ ಬರಬೇಕಾಯಿತು. ನಾನು ಆ ಮಳೆ ಕಾರಣಕ್ಕೆ ಸ್ಥಳವನ್ನು ಖಾಲಿ ಮಾಡಿಬಿಟ್ಟೆ. ಹೀಗೆ ಅಲ್ವಾ ಸಮಸ್ಯೆಗಳಿಗೆ ಪರಿಹಾರ ಇದ್ದರೂ ಕೂಡ ಅದನ್ನ ಬೆಳೆಸುವುದಕ್ಕೆ ಸುತ್ತ ಮುತ್ತ ಜನ ಸೇರಿಸಿ ಅದಕ್ಕಿಂತಿಷ್ಟು ತುಪ್ಪ ಸುರಿತಾರೆ. ಅದನ್ನ ಪರಿಹರಿಸಿಕೊಂಡು ಸಾಗಬೇಕಾಗಿರೋದು ನಮ್ಮ ಕರ್ತವ್ಯ. ಸಮಸ್ಯೆ ಇದ್ದವನೇ ಪರಿಹಾರವನ್ನು ಹುಡುಕಬೇಕೇ ಹೊರತು ಸುತ್ತಮುತ್ತಲಿನವರಿಂದ ಅದಕ್ಕೆ ಪ್ರಚೋದನೆ ಸಿಗುತ್ತೆ ಹೊರತು ಪರಿಹಾರ ಸಿಗುವುದಕ್ಕೆ ಸಾಧ್ಯವಿಲ್ಲ .ಆ ಒಂದು ಘಟನೆ ನನಗೆ ಅರ್ಥ ಮಾಡಿಸಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ