ಸ್ಟೇಟಸ್ ಕತೆಗಳು (ಭಾಗ ೧೦೩೭)- ಯಾರು?

ಸ್ಟೇಟಸ್ ಕತೆಗಳು (ಭಾಗ ೧೦೩೭)- ಯಾರು?

ಅಲ್ಲಿ ಮೇಲೆ ಕುಳಿತವ ನಗುತ್ತಿದ್ದಾನೆ. ನಮಗೆ ಯಾರಿಗೂ ಅದು ಗೊತ್ತಾಗ್ತಾ ಇಲ್ಲ. ಆತ ನಮಗೆ ಒಂದಷ್ಟು ಪರೀಕ್ಷೆಯನ್ನು ಒಡ್ಡಿದ್ದಾನೆ. ಆ ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾದರೆ ಬದುಕಿನ ಇನ್ನೊಂದಷ್ಟು ಹೊಸ ರೀತಿಗಳನ್ನು ನೀಡುವುದಕ್ಕೆ ಆತ ಯೋಚಿಸಿದ್ದಾನೆ. ಆದರೆ ನಾವು ಹಾಗೆ ವರ್ತಿಸುತ್ತಿಲ್ಲ. ಎತ್ತರದ ಗುಡ್ಡದ ಮಣ್ಣು ರಸ್ತೆಯ ಮೇಲೆ ಬಿದ್ದು ತಾನಿರುವ ಲಾರಿಯ ಒಳಗೆ ನಾನು ಉಸಿರು ಕಟ್ಟಿಕೊಳ್ಳುತ್ತೇನೆ ಅಂತ ಆ ಡ್ರೈವರಿಗೂ ಅನ್ಸಿರ್ಲಿಲ್ಲ. ಆತ ತನ್ನ ದೈನಂದಿನ ಕೆಲಸಕ್ಕೆ ಅದೇ ದಾರಿಯಲ್ಲಿ ಪಯಣ ಬೆಳೆಸಿದ್ದ. ಕ್ಷಣದಲ್ಲಿ ಮಣ್ಣು ಬಂದು ಇಡೀ ರಸ್ತೆಗೆ ತುಂಬೆಲ್ಲ ತುಂಬಿ ಕೊಂಡಾಗ ಕಣ್ಣು ಕಾಣಿಸದಷ್ಟು ಕತ್ತಲೆ ಏನು ಸರಿಯಾಗಿ ಕಾಣಿಸುತ್ತಿಲ್ಲ .ತನ್ನ ರಕ್ಷಣೆಗೆ ಯಾರಾದರೂ ಬರುವರು ಎಂಬ ನಿರೀಕ್ಷೆಯಲ್ಲಿ ಇನ್ನು ಉಸಿರನ್ನ ಬಿಗಿ ಹಿಡಿದು ಆತ ಒಳಗೆ ಕುಳಿತಿದ್ದಾನೆ. ಆದರೆ ಅವನನ್ನ ರಕ್ಷಿಸುವುದಕ್ಕೆ ತೆರಳಬೇಕಾದ ನಾವು ಕಾಲವಿಳಂಬ ಮಾಡ್ತಾ ಇದ್ದೇವೆ. ಯಾಕೆಂದರೆ ಆತ ಪರಿಚಿತನಲ್ಲ, ಆತನ ಬಳಿ ಬೇಕಾದಷ್ಟು ಹಣವಿಲ್ಲ, ಆತ ರಾಜಕಾರಣಿಯಲ್ಲ, ಸಿನಿಮಾ ನಟನೂ ಅಲ್ಲ, ಹಾಗಾಗಿ ನಾವು ಗಮನಿಸುತ್ತಿಲ್ಲ. ದೊಡ್ಡವರಿಗೆ ಸಿಗುವ ಮರ್ಯಾದೆ ಸಣ್ಣವರಿಗೆ ಸಿಗದೇ ಇರುವುದು ವಿಪರ್ಯಾಸ. ಅದಕ್ಕೆ ಭಗವಂತ ಮೇಲೆ ಕುಳಿತು ನಗುತ್ತಿದ್ದಾನೆ ಪರೀಕ್ಷೆ ಕೊಟ್ಟರು ಸರಿಯಾಗಿ ಎದುರಿಸದ ನಮ್ಮನ್ನ ಕಂಡು ಇನ್ನೊಂದಷ್ಟು ಕಠಿಣ ಶಿಕ್ಷೆಗಳನ್ನು ನೀಡುವುದಕ್ಕೆ ಕಾಯ್ತಾ ಇದ್ದಾನೆ ಬದಲಾಗಬೇಕಾಗಿರೋದು ಯಾರು?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ