ಸ್ಟೇಟಸ್ ಕತೆಗಳು (ಭಾಗ ೧೦೩೯)- ನನ್ನ ಬೈಕ್
ನನಗೊಂದು ಸಣ್ಣ ಸಮಸ್ಯೆ ಆದರೆ ಸಾಕು ಅದಕ್ಕೆ ಪರಿಹಾರಕ್ಕೆ ಅಂತ ಯಾರದಾದರೂ ಬಳಿ ಓಡಾಡ್ತೇನೆ, ನಿಂತು ಪರಿಹಾರ ಯೋಚಿಸುತ್ತಾನೆ ಇರಲಿಲ್ಲ. ಅವತ್ತು ಮನೆಯಿಂದ ಕಾಲೇಜಿಗೆ ಹೊರಡುವಾಗ ನನ್ನ ಬೈಕು ಸ್ಟಾರ್ಟ್ ಆಗಲೇ ಇಲ್ಲ. ಸೆಲ್ಫ್ ಎಷ್ಟೇ ಸಲ ಪ್ರಯತ್ನ ಪಟ್ಟರು ಕಷ್ಟ ಪಟ್ಟು ಇನ್ನೊಂದೆರಡು ಬಾರಿ ಪ್ರಯತ್ನಿಸಿ ಕಿಕ್ ಹೊಡೆದು ಗಾಡಿಯನ್ನು ಚಲಾಯಿಸ್ತಾ ಕಾಲೇಜಿಗೆ ತೆರಳದೆ. ಅವತ್ತೇ ಸಂಜೆ ಗ್ಯಾರೇಜ್ ಅವರ ಬಳಿ ತೆರಳಿ ಇದಕ್ಕೊಂದು ಪರಿಹಾರ ಕೊಡಿ ಅಂತ ಕೇಳಿದಾಗ ಅವತ್ತು ಗ್ಯಾರೇಜ್ ಸ್ವಲ್ಪ ಬಿಡುವಿಲ್ಲದ ಕಾರಣ ನಾಳೆ ಬನ್ನಿ ಅಂತ ಅಂದ್ರು ಮತ್ತೆ ಮನೆಗೆ ತೆರಳಿ ಇನ್ನೊಂದಷ್ಟು ರೀತಿಯಲ್ಲಿ ಪ್ರಯತ್ನವನ್ನು ಆರಂಭಿಸಿದೆ. ಏನೂ ಫಲ ಸಿಗದ ಕಾರಣ ಮರುದಿನ ಬೆಳಗ್ಗೆ ಮತ್ತೆ ಪ್ರಯತ್ನಿಸಿದಾಗ ಗಾಡಿ ಸ್ಟಾರ್ಟ್ ಆಗಿ ಕಾಲೇಜಿನ ಕಡೆಗೆ ತೆರಳುವಂತಾಯ್ತು. ಸಮಸ್ಯೆ ಪರಿಹಾರ ಆಯ್ತು ಮತ್ತೆ ಗ್ಯಾರೇಜ್ ಕಡೆ ಹೋಗುವ ಪ್ರಮೇಯವು ಬರಲಿಲ್ಲ. ಸಮಸ್ಯೆಗೆ ಪರಿಹಾರ ತನ್ನಲ್ಲೇ ಇತ್ತು, ನಾನು ಹುಡುಕುವ ಪ್ರಯತ್ನ ಮಾಡಿರ್ಲಿಲ್ಲ. ಕೆಲವೊಂದು ಸಲ ಸಮಸ್ಯೆಗೆ ಪರಿಹಾರ ನಮ್ಮಲ್ಲೇ ಇರುತ್ತೆ ನಾವದನ್ನ ಇನ್ನೊಂದು ಕಡೆ ಹುಡುಕುತ್ತಾ ಇರುತ್ತೇವೆ. ನನ್ನ ಬೈಕು ನನಗೆ ಆಗಾಗ ಈ ತರಹದ ಬೇರೆ ಬೇರೆ ರೀತಿಯ ಬದುಕಿನ ಪಾಠಗಳನ್ನು ಹೇಳಿಕೊಡುತ್ತಾನೆ ಇರುತ್ತೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ