ಸ್ಟೇಟಸ್ ಕತೆಗಳು (ಭಾಗ ೧೦೪೧)- ಬೇಡಿಕೆ

ಸ್ಟೇಟಸ್ ಕತೆಗಳು (ಭಾಗ ೧೦೪೧)- ಬೇಡಿಕೆ

ನೀನೇನು ಮಾಡುತ್ತಿದ್ದೀಯಾ? ನಿನ್ನಿಂದ ಸಾಧ್ಯ ಇದ್ರೂ ಕೂಡ ಸುಮ್ಮನಾಗಿ ಉಳಿದ್ಬಿಟ್ಟಿರೋದು ಯಾಕೆ? ನೀನು ಯಾವತ್ತೂ ನಿನ್ನನ್ನ ಪ್ರಶ್ನೆ ಮಾಡಿಕೊಳ್ಳಲೇ ಇಲ್ಲ? ಪ್ರಯತ್ನನೂ ಪಟ್ಟಿಲ್ಲ? ನಿನಗೆ ನಿನ್ನ ಕಣ್ಣ ಮುಂದೆ ಹಲವು ವಿಚಾರಗಳು  ನಡಿತಾ ಇರೋದು ತಪ್ಪು ಅಂತ ಗೊತ್ತಿದೆ! ಕೆಲವೊಂದು ವಿಷಯಗಳು ನಿನ್ನ ಅನುಭವಕ್ಕೆ ಬಂದಾಗ ಸಮಾಜಕ್ಕೆ ಇದರಿಂದ ಒಳ್ಳೆಯದಾಗಲ್ಲ ಅಂತ ಅರಿವಾಗಿದೆ. ಆದರೆ ಅದನ್ನ ಬೇರೆ ಯಾರಾದರೂ ಪ್ರಶ್ನಿಸಲಿ ನಾನ್ಯಾಕೆ ಮಾತಾಡಬೇಕು ಅಂತ ಸುಮ್ಮನೆ ಕುಳಿತಿದ್ದೀಯಾ? ನಿನ್ನ ಹಾಗೆ ಎಲ್ಲರೂ ಯೋಚಿಸ್ತಾ ಇದ್ದಾರೆ !ನಾನು ನಿನ್ನನ್ನು ಈ ಭೂಮಿಗೆ ಕಳಿಸಿರೋದು ನಿನ್ನ ಕೈಯಿಂದ ಒಂದಷ್ಟು ಒಳ್ಳೆ ಕೆಲಸಗಳು ನಡೆಯಲಿ ಅಂತ. ಸಾಧ್ಯ ಇದೆ ಆದರೂ ಮೌನವಾಗಿರೋದು ಯಾಕೆ? ಅವರಿಗಿಂತ ನೀನೆ ತಪ್ಪಿತಸ್ಥ ಅಂತ ನನಗೆ ಅನ್ನಿಸ್ತಾ ಇದೆ. ಸಾಧ್ಯವಾದ ಕಡೆ ಧ್ವನಿ ಎತ್ತು. ನೀನೀಗ ಎಲ್ಲ ತಪ್ಪುಗಳನ್ನು ಗುರುತಿಸ್ತಾ ಸರಿಯಾಗುವುದರ ಕಡೆಗೆ ಒಂದಷ್ಟು ದಾರಿ ನೋಡಿದರೆ ಈ ಭೂಮಿಯಲ್ಲಿ ನಿನಗೊಂದು ಜನ್ಮ ನೀಡಿದಕ್ಕೂ ಸಾರ್ಥಕ. ಇಲ್ಲವಾದರೆ ..... ಅಂತಂದು ಕಣ್ಣ ಮುಂದೆ ಕುಳಿತಿದ್ದ ಭಗವಂತ ಮಾಯವಾದ. ತಕ್ಷಣ ಎಚ್ಚರ ಆಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ