ಸ್ಟೇಟಸ್ ಕತೆಗಳು (ಭಾಗ ೧೦೪೩)- ಚಹಾ ಮಾತು
ಆತ ಚಲಿಸುತ್ತಲೇ ಇದ್ದಾನೆ ಎಲ್ಲಿಯೂ ನಿಲ್ಲುತ್ತಿಲ್ಲ. ನಿಂತರೆ ಮುಂದಿನ ಜೀವನ ಹೇಗೆ? ಕೆಲವೊಮ್ಮೆ ನೀರು, ಆಮೇಲೆ ಚಹಾ ಮತ್ತೊಮ್ಮೆ ಇಡ್ಲಿ, ಹೀಗೆ ನಿರಂತರವಾಗಿ ರೈಲಿನಲ್ಲಿ ಚಲಿಸುತ್ತಾನೆ ಇರುತ್ತಾನೆ. ಅಲ್ಲಿ ವಿಶ್ರಾಂತಿ ಇದೆ. ಆದರೆ ಆತ ತೆಗೆದುಕೊಳ್ಳುವುದಿಲ್ಲ. ಒಂದಷ್ಟು ಹೆಚ್ಚು ಹಣ ಸಿಕ್ಕಿದರೆ ಬದುಕು ಬದಲಾದೀತು ಅನ್ನೋದು ಆತನ ಯೋಚನೆ. ಬೇರೆ ಬೇರೆ ಕೆಲಸ ಮಾಡಿದವ ಆದರೆ ಸಂಪಾದನೆ ಹೆಚ್ಚಿರಲಿಲ್ಲ. ಆದರೆ ಇದರಲ್ಲಿ ಹೆಚ್ಚು ದುಡಿಮೆ, ಹೆಚ್ಚು ಸಂಪಾದನೆ ಸಿಗುತ್ತದೆ. ಆತನಿಗೆ ತನ್ನ ಬದುಕಿನ ಬಗ್ಗೆ ಬೇಸರವಿಲ್ಲ, ನೋವಿಲ್ಲ, ಮನೆಯ ಸ್ಥಿತಿಯ ಬಗ್ಗೆ ಕನಿಕರದ ಮಾತನಾಡುತ್ತಿಲ್ಲ. ನನ್ನ ಜೀವನ ನಾನೇ ರೂಪಿಸುತ್ತೇನೆ ಸರ್, ಜೀವನ ಖಂಡಿತಾ ಬದಲಾಗುತ್ತೆ. ಮೊದಲಿಂದ ಇಷ್ಟು ಬದಲಾಗಿದ್ದೇನೆ ಇನ್ನಷ್ಟು ಬದಲಾಗೋದಿಲ್ವಾ ಸರ್.. ಬರ್ತೇನೆ... ಅವನು ಕೊಟ್ಟ ಬಿಸಿ ಚಹಾ ಕುಡಿದು ನನ್ನ ಆಲೋಚನೆ ಬಗ್ಗೆ ನಾನೇ ಅಸಹ್ಯಗೊಂಡೆ. ಬಿಸಿ ಚಹಾ, ಒಳ್ಳೆಯ ಮಾತು ಮೈಯೊಳಗೆ ಮನಸ್ಸೊಳಗೆ ಇಳಿದು ಒಂದಷ್ಟು ಉತ್ಸಾಹ ಕೊಟ್ಟಿತು
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ