ಸ್ಟೇಟಸ್ ಕತೆಗಳು (ಭಾಗ ೧೦೪೫) - ಕೋಪ

ಅಲ್ಲ ತಪ್ಪುಗಳನ್ನು ನನ್ನ ಮೇಲೆ ಯಾಕೆ ಹಾಕ್ತಾ ಇದ್ದೀಯಾ? ಮುನಿದ ಪ್ರಕೃತಿ, ಪ್ರಕೃತಿ ವಿಕೋಪ. ಹೀಗೆ ದೊಡ್ಡ ದೊಡ್ಡ ಪದಗಳನ್ನು ಸೇರಿಸಿ ಪ್ರಕೃತಿಯಿಂದಾಗಿ ಮನುಷ್ಯ ಸಾವನ್ನಪ್ಪುತ್ತಿದ್ದಾನೆ ಎನ್ನುವ ದೊಡ್ಡ ಮಾತುಗಳನ್ನ ಅಲ್ಲಿ ಅಲ್ಲಿ ಹೇಳ್ತಾ ಇದ್ದೀಯಾ? ಬರಿತಾ ಇದ್ದೀಯಾ? ಆದರೆ ನಿನ್ನ ಕೈಯಲ್ಲಿ ಅಂಟಿರುವ ಕೊಳೆಯನ್ನ ನೀನು ಒಂದು ದಿನವಾದರೂ ನೋಡಿದ್ದೀಯಾ? ಸ್ವಚಂದವಾಗಿ ಬೆಳಿತಾ ಇದ್ದದನ್ನ ಅಭಿವೃದ್ಧಿ ಅನ್ನುವ ಹೆಸರಿನಲ್ಲಿ ನಿನ್ನ ಕಿಸೆ ತುಂಬಿಸಿಕೊಳ್ಳುವುದಕ್ಕೆ ಮಾಡಿರುವ ಅನಾಚಾರಗಳು ಎಷ್ಟು? ಅದ್ಯಾವುದು ನಿನಗೆ ಈಗ ನೆನಪಾಗ್ತಿಲ್ಲ. ಅಥವಾ ಈಗ ಕುಳಿತುಕೊಂಡು ಹೀಗಾಗಬಾರದಿತ್ತು ಹಾಗಬಾರದಿತ್ತು ನಾವು ತೊಂದರೆ ಮಾಡಿದ್ದೇವೆ ಮುಂದೆ ಇದನ್ನು ತಿದ್ದಿಕೊಳ್ಳಬೇಕು ಅಂತ ದೊಡ್ಡ ದೊಡ್ಡ ಮಾತುಗಳನ್ನು ಕೂಡ ಆಡ್ತೀಯಾ ಆದರೆ ನೀನು ಬದಲಾಗುವವನಲ್ಲ. ಇದಕ್ಕಿಂತ ಹಿಂದೆಯೂ ಹಲವಾರು ಬಾರಿ ಇದೇ ರೀತಿ ಪ್ರಕೃತಿ ಮುನಿದಿದೆ ಅಂದ್ರೆ ನಾನು ಮುನಿದಿದ್ದೇನೆ .ಇಲ್ಲ ನೀನು ಯಾವುದೇ ರೀತಿ ಬದಲಾಗಿಲ್ಲ. ನೀನು ಆ ಕ್ಷಣದಲ್ಲಿ ಹೇಗೆ ಬೇಕೋ ಹಾಗೆ ವರ್ತಿಸುವವ. ಅದಕ್ಕೆ ನಿನಗೆ ಮನುಷ್ಯ ಅಂತ ಹೆಸರು. ನಿನಗೆ ಲಾಭ ಇರುವ ಕಡೆ ವಾಲ್ತಾ ಹೋಗ್ತಿಯ. ನನ್ನನ್ನು ಗಮನಿಸುವುದಿಲ್ಲ ನಾನು ಚಂದ ಇದ್ರೆ ನನ್ನ ಚಂದದ ಭಾವಚಿತ್ರವನ್ನು ತೆಗೆದು ಎಲ್ಲಾ ಕಡೆ ಹರಡುತ್ತೀಯಾ? ನನ್ನಲ್ಲಿ ಅಸಹ್ಯ ಇದ್ದರೂ ಕೂಡ ಮತ್ತೆ ಅದನ್ನು ಇನ್ನೊಂದಷ್ಟು ಜನರಿಗೆ ಹಂಚುತ್ತೀಯ ನಿನಗೆ ಉಪಯೋಗ ಆಗುವಾಗ ನನ್ನನ್ನು ಬಳಸಿಕೊಳ್ಳುತ್ತಾ ಇದ್ದೀಯ. ವಿನಃ ನನ್ನ ಉಪಯೋಗಕ್ಕೆ ನೀನಲ್ಲ . ಇದು ನೀನು ಮಾಡಿರುವ ತಪ್ಪಿಗೆ ನೀನೆ ಅನುಭವಿಸುತ್ತಿರುವ ಶಿಕ್ಷೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ