ಸ್ಟೇಟಸ್ ಕತೆಗಳು (ಭಾಗ ೧೦೪೯)- ಎಚ್ಚರ

ಸ್ಟೇಟಸ್ ಕತೆಗಳು (ಭಾಗ ೧೦೪೯)- ಎಚ್ಚರ

ಅವನು ಆಗಾಗ ಸುಮ್ನೆ ನಗುತ್ತಾನೆ, ಕೆಲವೊಂದು ನಮ್ಮ ಹುಚ್ಚಾಟಗಳನ್ನ ಕಂಡು ತಲೆತಲೆ ಚಚ್ಚಿಕೊಂಡು ಮುಂದುವರಿತಾನೆ. ಆತ ದಾರಿ ನಡೆಯುತ್ತಾ ಬರುತ್ತಿರುವಾಗ ದೊಡ್ಡ ದೊಡ್ಡ ಫಲಕಗಳನ್ನು ಕಂಡ. ಇಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗ್ತದೆ, ಇವರು ಎಲ್ಲಿಂದಲೋ ವಿದ್ಯೆ ಪಡೆದುಕೊಂಡು ಬಂದು, ಅವರಿಂದಾಗುವ ಅದ್ಭುತ ಕೆಲಸಗಳನ್ನ ಪಟ್ಟಿ ಮಾಡಿ, ತರೆವಾರಿ ಜಾಹೀರಾತುಗಳನ್ನ ಹಾಕಿ ಎಲ್ಲರನ್ನ ಆಕರ್ಷಿಸುತ್ತಾರೆ. ಅವರ ಜೀವನವನ್ನ ಸಾಧಿಸಿಕೊಳ್ಳೋಕೆ ಆಗದೆ ಇನ್ಯಾರಿಗೂ ಕಥೆ ಹೇಳಿ ಇನ್ನೊಂದಷ್ಟು ಕಷ್ಟ ನೀಡುವವರು ಅಲ್ಲಲ್ಲಿ ಹೆಚ್ಚಾಗಿ ಬಿಟ್ಟಿದ್ದಾರೆ. ನಿನ್ನ ಕಣ್ಣ ಮುಂದೆ ನಿನ್ನ ಜೀವನಕ್ಕೆ ಎದುರಾಗುವ ಸಮಸ್ಯೆಗಳು ಸಾವಿರ ಇದ್ದರೂ ಕೂಡ ನಿನಗೆ ಅದನ್ನು ಪ್ರಶ್ನಿಸುವ ಸಣ್ಣ ಧೈರ್ಯವೂ ಇಲ್ಲವಾಗಿದೆ. ಎಲ್ಲವಕ್ಕೂ ಒಗ್ಗಿಕೊಂಡು ಮುಂದುವರಿಯುವ ಅಭ್ಯಾಸ ಆಗಿಬಿಟ್ಟಿದೆ. ನೀನೆ ಎದುರು ನಿಂತಿದ್ದಾಗ ನಿನ್ನ ಕೈಯಿಂದಲೇ ದುಡ್ಡು ಕಸಿದುಕೊಂಡು ಹೋಗಿ ಇನ್ನೊಬ್ಬನು ಸಂಭ್ರಮ ಪಡುತ್ತಿದ್ದಾನೆ, ಅದನ್ನು ಸುಮ್ಮನೇ ನಿಂತು ನೋಡುವ ವಿಚಿತ್ರ ಪರಿಸ್ಥಿತಿಗೆ ನೀನು ತಲುಪಿಬಿಟ್ಟಿದ್ಯ. ಅದು ಅಲ್ಲದೆ ಜಗತ್ತಲ್ಲಿ ಏನೇ ನಡೆದರೂ ನಿನ್ನದೇ ವಿಶೇಷವಾದ ಯೋಚನೆ, ಬದಲಾಗೋದ್ಯಾವಾಗ? ಯಾವಾಗ ? ನಿನ್ನ ವಯಸ್ಸು ದಾಟಿ ಬರ್ತಾ ಇದೆ ಇನ್ನಾದ್ರೂ ನೀನು ಬದಲಾಗು. ನೀನು ಇನ್ನು  ಬದಲಾಗದಿದ್ರೆ, ನನ್ನ ಹಾಗೆ ಸುಮ್ಮನೆ ಓಡಾಡಿ ಬಿಡು... ಅದು ನಿನಗೆ ಒಳ್ಳೆಯದು ,,ಖಾರದ ಮಾತುಗಳು ಮನಸ್ಸಿಗೆ ಬಿಸಿ ಮುಟ್ಟಿಸಿದವು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ