ಸ್ಟೇಟಸ್ ಕತೆಗಳು (ಭಾಗ ೧೦೫೦)- ಮಾಧ್ಯಮ

ಸ್ಟೇಟಸ್ ಕತೆಗಳು (ಭಾಗ ೧೦೫೦)- ಮಾಧ್ಯಮ

ಅಪ್ಪ ಎಷ್ಟು ಅಂತ ನೀನು ಓದಲಿಕ್ಕೆ ಹೇಳ್ತೀಯಾ ? ಅದನ್ನು ಬಿಟ್ಟು ಇನ್ನೊಂದಷ್ಟು ಬೇರೇನಾದರೂ ಹೇಳಿಕೊಡು. ನನಗೆ ಹಾಡಬೇಕು, ಕುಣೀಬೇಕು, ಅದನ್ನೆಲ್ಲ ಮಾಡಿ ನಾನು ಟಿವಿಗೆ ಹೋಗಬೇಕು ಅಲ್ಲಿ ಒಂದಷ್ಟು ಜನ ನನ್ನ ಗುರುತಿಸಬೇಕು.. ಅದು ನಿಜವಾದ ಸಾಧನೆ. ಅದು ಬಿಟ್ಟು ಅಂಕ ತೆಗೆದು ಒಳ್ಳೆ ಕೆಲಸ ಮಾಡಿ ಮಾಡುವುದಕ್ಕೆ ಏನಿದೆ ? ಕೆಲಸಕ್ಕೆ ಹೋಗಬೇಕು ಅಂತಿಲ್ಲ, ಮನೆಯಲ್ಲಿ ಕುಳಿತು ಹೆಚ್ಚು ಹಣ ಸಂಪಾದನೆ ಮಾಡುವ ಹೊಸ ಹೊಸ ವಿಧಾನ ಕೂಡ ಇದೆ. ಅದ್ಯಾವುದನ್ನು ಮಾಡೋದಕ್ಕೆ ಬಿಡುವುದಿಲ್ಲ, ಎಲ್ಲದಕ್ಕೂ ಬೈತೀಯಾ? ಹೀಗೆ ಯಾಕೆ ಮಾಡ್ತೀಯಾ ?ನಾವು ಸಾಧನೆ ಮಾಡೋದು ನಿನಗಿಷ್ಟ ಇಲ್ವಾ? ಮಕ್ಕಳ ಮಾತಿಗೆ ಏನೂ ಹೇಳದೆ ಅವರನ್ನ ಕೋಣೆಗೆ ಕಳುಹಿಸಿ ಹೊರಗೆ ಬಂದು ನಿಂತು ತನ್ನ ಗೆಳೆಯನ ಜೊತೆ ರಾಮರಾಯರು ಮಾತನಾಡುತ್ತಿದ್ದರು. ಅಲ್ಲ ಮಾರಾಯಾ? ಈಗಿನ ಮೊಬೈಲ್ ಗಳು ಬಂದ ನಂತರ ಮಕ್ಕಳ ಮನಸ್ಥಿತಿಗಳೇ ಬದಲಾಗಿ ಬಿಟ್ಟಿದೆ. ಸಾಧನೆ ಅಂದ್ರೆ ಯಾವುದು? ಹೆಸರು ಮಾಡೋದು ಅಂದ್ರೆ ಏನು ಅನ್ನೋದಕ್ಕೆ ಅರ್ಥನೇ ಇಲ್ಲವಾಗಿದೆ. ಹೇಳುವಷ್ಟು ಹೇಳಿದ್ದೇನೆ. ಮತ್ತೇನಾಗುತ್ತೋ ಗೊತ್ತಿಲ್ಲ. ಅವರ ಯೋಚನೆಯನ್ನು ಅವನಿಗೆ ದಾಟಿಸಿ ಒಂದಷ್ಟು ನೆಮ್ಮದಿ ಹೊಂದಿ ಮಕ್ಕಳೇನು ಮಾಡುತ್ತಿದ್ದಾರೆ ಎಂದು ನೋಡುವುದಕ್ಕೆ ಮನೆ ಒಳಗೆ ವಾಪಸು ನಡೆದೇ ಬಿಟ್ರು.  

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ