ಸ್ಟೇಟಸ್ ಕತೆಗಳು (ಭಾಗ ೧೦೫೧)- ಹಕ್ಕಿ

ಸ್ಟೇಟಸ್ ಕತೆಗಳು (ಭಾಗ ೧೦೫೧)- ಹಕ್ಕಿ

ಮಾತುಕತೆಗೆ ತುಂಬಾ ಹುಡುಕ್ತಾ ಇದ್ದೆ ಆ ಹಕ್ಕಿ ನನಗೆ ಇವತ್ತು ಸಿಗಲೇಬೇಕಿತ್ತು. ಅದರ ಬಳಿ ಮಾತನಾಡಬೇಕಿತ್ತು. ಅದು ಇವತ್ತು ಮಾಡಿದ ಕೆಲಸವನ್ನ ನೀವು ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಎತ್ತರದಿಂದ ಹಾರಿ ಬರ್ತಾ ಇದ್ದ ಒಂದು ಹಕ್ಕಿ ಆಯತಪ್ಪಿ ಕೆಳಗೆ ಬಿದ್ದು ಬಿಟ್ಟಿತು. ಯಾರು ಅದನ್ನ ಉಪಚರಿಸುವವರಿರಲಿಲ್ಲ. ಈ ಸಣ್ಣ ಹಕ್ಕಿ ಎಲ್ಲಿಂದಲೋ ಹಾರಿ ಬಂದು ಆ ಹಕ್ಕಿಯನ್ನ ಮತ್ತೆ ಏಳಿಸುವುದಕ್ಕೆ ಪ್ರಯತ್ನಪಡುತ್ತಾನೆ ಇತ್ತು. ವಿವಿಧ ರೀತಿಯ ಪ್ರಯತ್ನಗಳ ನಂತರ ಆ ಹಕ್ಕಿಗೆ ಮತ್ತೆ ಚೇತರಿಕೆ ಬಂದು ಹಾರುವುದಕ್ಕೆ ಪ್ರಯತ್ನಪಟ್ಟು ಎರಡು ಸೇರಿ ಜೊತೆಯಾಗಿ ಹಾರಿಹೋಯಿತು. ಈಗ ಹಕ್ಕಿಯನ್ನು ನಾನು ಅದರ ಈ ಸಾಹಸ ಕಾರ್ಯವನ್ನ ಕೊಂಡಾಡಬೇಕಲ್ಲ. ಹಾಗಾಗಿ ಹುಡುಕುತ್ತಾ ಹೊರಟೆ. ಸಿಕ್ಕ ತಕ್ಷಣ ಅದರ ಮುಂದೆ ಮೈಕನ್ನ ಹಿಡಿದು ಮಾತನಾಡುವುದಕ್ಕೆ ಹೇಳಿದೆ ಹಕ್ಕಿ ಮಾತನ್ನಾಡುವುದ್ದಕ್ಕರ ಪ್ರಾರಂಭ ಮಾಡ್ತು ಅಲ್ಲ ನಾನಿದನ್ನ ಪ್ರಚಾರ ಆಗೋದ್ದಕ್ಕೆ ಮಾಡಿದ್ದಲ್ಲ. ಅದಲ್ಲದೆ ನಮ್ಮಲ್ಲಿ ಯಾರೇ ಇದ್ದರೂ ಕೂಡ ಇದೇ ಕೆಲಸ ಮಾಡ್ತಾ ಇದ್ರು. ಯಾರಿಗಾದರೂ ತೊಂದರೆಯಾದರೆ ದೂರ ನಿಂತು ನೋಡೋದಕ್ಕೆ ನಾವು ಮನುಷ್ಯರಲ್ಲ. ಅದಲ್ಲದೆ ಮಾಡಿದ ಕೆಲಸವನ್ನ ನೂರು ಜನರಲ್ಲಿ ಹೇಳ್ತಾ ಓಡಾಡುವುದಕ್ಕೂ ಕೂಡ ನಾವು ಮನುಷ್ಯರಲ್ಲ. ಇದು ನಮ್ಮ ಒಳಗಿನಿಂದಲೇ ಹುಟ್ಟಿಕೊಂಡ ಗುಣ. ಸಹಾಯ ಮಾಡೋದು ಅದನ್ನು ಮರೆತು ಬಿಡ್ತೇವೆ. ಜವಾಬ್ದಾರಿ ನಮ್ಮದು. ಅದನ್ನ ನಾವು ನಂಬಿದ್ದೇವೆ. ನಿಮ್ಮ ಹಾಗೆ ಸ್ವಾರ್ಥಿಗಳಲ್ಲ. ಹಕ್ಕಿಯ ಮುಂದೆ ಯಾಕೆ ನಿಂತಿದ್ದೇನೋ ಅನಿಸಿತು. ತಲೆ ತಗ್ಗಿಸಿ ಅಲ್ಲಿಂದ ಹೊರಟುಬಿಟ್ಟೆ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ