ಸ್ಟೇಟಸ್ ಕತೆಗಳು (ಭಾಗ ೧೦೫೩)- ಆಚರಣೆ

ಸ್ಟೇಟಸ್ ಕತೆಗಳು (ಭಾಗ ೧೦೫೩)- ಆಚರಣೆ

ಸಂಭ್ರಮ ತುಂಬಾ ಜೋರಾಗಿದೆ. ನಾಳೆ ಶಾಲೆಗಳಲ್ಲಿ ಸ್ವಾತಂತ್ರ್ಯದ ಹಬ್ಬ ಜೋರಾಗುತ್ತದೆ. ತಯಾರಿ ವಾರದಿಂದಲೇ ಆರಂಭವಾಗಿದೆ. ಹಾಗೆ ದಾರಿಯಲ್ಲಿ ಸಾಗುತ್ತಿದ್ದಾಗ ಮಕ್ಕಳು ಮೈದಾನ ಗುಡಿಸುತ್ತಿದ್ದಾರೆ, ತಳಿರು ತೋರಣ ಕಟ್ಟುತ್ತಿದ್ದಾರೆ,  ಇಡೀ ಶಾಲೆಯ ತುಂಬೆಲ್ಲಾ ಓಡಾಟ, ಹಾಡು, ನೃತ್ಯ, ವಾದ್ಯ ಎಲ್ಲವೂ ಮಕ್ಕಳೇ ಆಭ್ಯಾಸ. ಶಿಕ್ಷಕರು ಇನ್ಯಾವುದೋ ಕೆಲಸದಲ್ಲಿ ಮುಳುಗಿದ್ದಾರೆ. ದಾಟಿದ ಕೋಡಲೇ ಸರಕಾರಿ ಶಾಲೆಯ ಫಲಕ ಮಿನುಗಿದಂತಾಯಿತು  ಮುಂದುವರೆದವನಿಗೆ ದೊಡ್ಡದೊಂದು ಆಂಗ್ಲ ಮಾಧ್ಯಮ ಶಾಲೆಯ ಮಿನುಗುವ ಫಲಕದ ಬಳಿಯ ಮೈದಾನದಲ್ಲೂ ಸಂಭ್ರಮ ಜೋರಾಗಿದೆ. ಅಲ್ಲಿ ಎಲ್ಲಾ ಕೆಲಸಕ್ಕೂ ನುರಿತ ವ್ಯಕ್ತಿಗಳಿದ್ದಾರೆ. ಮಕ್ಕಳು ತರಗತಿಯಲ್ಲಿ ಪಾಠದಲ್ಲಿ ಮುಳುಗಿದ್ದಾರೆ, ಸ್ವಚ್ಚತೆ, ತೋರಣ, ಬಣ್ಣ, ಎಲ್ಲವೂ ಹೊರಗಿನ ಕೆಲಸದವರಿಂದ ಆಗುತ್ತಿದೆ ಎರಡೂ ಕಡೆಯೂ ಸ್ವತಂತ್ರ್ಯದ ಸಂಭ್ರಮವೇ ಆಚರಣೆಯ ವಿದಾನ ವಿಭಿನ್ನವಾಗಿದೆ. ಒಂದೆಡೆ ಒಳಗಿಳಿದರೆ ಇನ್ನೊಂದೆಡೆ ಹೊರಗಿನ ಪೋಷಾಕಾಗಿ ಉಳಿದು ಬಿಡುತ್ತದೆ ಸ್ವಾತಂತ್ರ್ಯ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ