ಸ್ಟೇಟಸ್ ಕತೆಗಳು (ಭಾಗ ೧೦೫೬)- ಕಾರಣ

ಸ್ಟೇಟಸ್ ಕತೆಗಳು (ಭಾಗ ೧೦೫೬)- ಕಾರಣ

ಆ ಮನೆಯ ಅಂಗಳದಲ್ಲಿ ನಾಯಿ ಒಂದು ಆಗಾಗ ಓಡಾಡುತ್ತಿರುತ್ತದೆ. ಆದರೆ ಅದು ಆ ಮನೆಯವರು ಸಾಕಿದ ನಾಯಿಯಲ್ಲ. ಪಕ್ಕದ ಮನೆಯ ನಾಯಿ. ಅವರ ಮನೆಗಿಂತ ಈ ಮನೆಯಲ್ಲಿ ತನ್ನ ಇರುವನ್ನು ಹೆಚ್ಚಿಸಿಕೊಳ್ಳುತ್ತಾ ಇದೆ. ಈಗ ವಿಷಯ ಏನು ಅಂತ ಅಂದ್ರೆ ಆ ಮನೆಯಲ್ಲಿ ಈಗ ಬದುಕ್ತಾ ಇರುವವರು ನಾಯಿಗೆ ಏನನ್ನು ನೀಡುತ್ತಿಲ್ಲ. ಆದರೆ ಆ ನಾಯಿಗೆ ಕೆಲವೊಂದು ಸಮಯ ಮೊದಲೇ ಗೊತ್ತಾಗುತ್ತೋ ಅಥವಾ ಏನಾದರೂ ಸೂಚನೆ ಸಿಗುತ್ತೋ ಅಂತ ಗೊತ್ತಿಲ್ಲ ಆ ನಾಯಿಗೆ ತಿನ್ನುವುದಕ್ಕೆ ಸಹಾಯ ಮಾಡು ಒಬ್ಬ ವ್ಯಕ್ತಿ ಆಗಾಗ ಮನೆಗೆ ಬಂದು ಹೋಗ್ತಾ ಇರ್ತಾನೆ. ಅವನು ಬರುವಾಗ ಅದು ಎಲ್ಲಿದ್ದರೂ ಓಡಿ ಬಂದು ಅವನ ಮುಂದೆ ಹಿಂದೆ ಓಡಾಡಿ ಅವನ ಮನಸನ್ನು ಒಲಿಸಿ ಬೇಕಾದಷ್ಟನ್ನ ತಿಂದು ಮತ್ತೆ ಓಡಿ ಹೋಗುತ್ತೆ .ಮತ್ತೆ ಎಲ್ಲೂ ಕಾಣಿಸಿಕೊಳ್ಳುವುದೇ ಇಲ್ಲ. ನಾಯಿಗೆ ಈ ಸೂಚನೆಯನ್ನು ನೀಡುತ್ತಾ ಇರುವವರು ಯಾರು? ಉಳಿದ ಯಾರ ಮುಂದೆಯೂ ಓಡಾಡದೆ ಇದು ಆಹಾರ ಹಾಕುವವನನ್ನು ಮಾತ್ರ ಮತ್ತೆ ಮತ್ತೆ ಪುಸಲಾಯಿಸುವುದು ಯಾಕೆ?  ಉಳಿದ ಅಷ್ಟು ದಿನ ಬೇರೆ ಬೇರೆ ಕಡೆ ಆಹಾರ ಹುಡುಕಿ, ಆಹಾರ ಹಾಕುವ ವ್ಯಕ್ತಿ ಮನೆಗೆ ಬರುವುದಕ್ಕಿಂತ ಮೊದಲೇ ಆತನಿಗೆ ಕಾಯುತ್ತಿರುವ ಸಣ್ಣ ಸೂಚನೆ ಅದಕ್ಕೆ ಸಿಗುವುದು ಹೇಗೆ? ನನಗೆ ಇವತ್ತಿನವರೆಗೂ ಕಾರಣ ಗೊತ್ತಾಗ್ತಾ ಇಲ್ಲ. ಕೊನೆಗೆ ನಾನೇ ಒಂದು ನಿರ್ಣಯಕ್ಕೆ ಬಂದುಬಿಟ್ಟೆ. ಭಗವಂತ ಅದಕ್ಕೆ ಹೊಟ್ಟೆ ತುಂಬುವುದಕ್ಕಂತಲೇ ಆಹಾರ ಹಾಕುವವನನ್ನ ಆಗಾಗ ಈ ಮನೆಗೆ ಬರುವಂತೆ ಮಾಡುತ್ತಿದ್ದಾನೋ ಏನೋ ಅಂತ. ಗೊತ್ತಿಲ್ಲ ಯಾಕೆಂದರೆ ಅದು ಭಗವಂತನ ಸೃಷ್ಟಿಯಲ್ಲಿ ಒಂದು ತಾನೆ ನೀವೇನಂತೀರಿ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ