ಸ್ಟೇಟಸ್ ಕತೆಗಳು (ಭಾಗ ೧೦೫೮)- ಯಾಕೆ?
ಹೇಗೆ ಒಪ್ಪಿಕೊಳ್ಳಬೇಕು. ಎರಡೂ ಸಮಾನವೆಂದು. ಆತ ಆಕೆಯನ್ನು ಹಿಂಸಿಸಿ ಅತ್ಯಾಚಾರ ಮಾಡಿಕೊಂದಿದ್ದಾನೆ, ಆಕೆಯು ಕೊನೆಯ ಕ್ಷಣದವರೆಗೂ ನರಳಿದ್ದಾಳೆ, ಅರಚಿದ್ದಾಳೆ, ಬೇಡಿದ್ದಾಳೆ ಆದರೆ ಆತನಿಗೆ ಕನಿಕರವಿಲ್ಲ. ಇನ್ನಷ್ಟು ವಿಜೃಂಭಿಸಿ ಕೊಂದಿದ್ದಾನೆ. ಈಗ ಆತನಿಗೆ ಶಿಕ್ಷೆಯಾಗಿದೆ. ಗಲ್ಲಿಗೇರಿಸಲಾಗುತ್ತದೆ. ಆತ ನರಳಿ ಸಾಯುತ್ತಾನೆ. ನನ್ನ ಪ್ರಶ್ನೆ ಏನೆಂದರೆ? ಆಕೆಯ ಮನಸ್ಸು ಶಿಕ್ಷೆ ಅನುಭವಿಸಿದೆ. ದೇಹದ ಪ್ರತೀ ಭಾಗಗಳು ಯಾತನೆಯನ್ನಪ್ಪಿಕೊಂಡಿದೆ. ಆದರೆ ಆತನಿಗೆ ಹೀಗೇ ಶಿಕ್ಷೆ ಯಾವಾಗ? ಯಾರಿಗೂ ತಿಳಿದಂತೆ ಆತನನ್ನ ಕೊಂದರೆ, ಅದು ಜನರಿಗೆ ತಲುಪೋದು ಯಾವಾಗ. ಅವಳು ಅನುಭವಿಸಿದ ತೆರನೇ ಆತನು ಶಿಕ್ಷೆ ಅನುಭವಿಸಲಿ, ಶಿಕ್ಷೆ ಭಯ ಹುಟ್ಟಿಸಬೇಕು. ಕಾಯುತ್ತಿದ್ದೇನೆ ಆ ದಿನಕ್ಕೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ