ಸ್ಟೇಟಸ್ ಕತೆಗಳು (ಭಾಗ ೧೦೬೨)- ಕಾರ್ಯಕ್ರಮ

ಸ್ಟೇಟಸ್ ಕತೆಗಳು (ಭಾಗ ೧೦೬೨)- ಕಾರ್ಯಕ್ರಮ

ಸಂಭ್ರಮದ ಓಡಾಟ ಹೆಚ್ಚಾಗಿದೆ. ಎಲ್ಲವೂ ತಯಾರಿಗಳೇ, ಎಲ್ಲರಿಗೂ ಧಾವಂತ. ಇಲ್ಲಿ ಹಲವು ಕತೆಗಳು ಓಡಾಡುತ್ತವೆ. ಹಲವು ಮಾತುಗಳು ಒಳನುಗ್ಗಿ ತಮ್ಮ ಚಾತುರ್ಯ ತೋರಿ ಮಾಯವಾಗುತ್ತವೆ. ರಾಜಕೀಯ, ಊರ ಉಸಾಬರಿ, ಪ್ರೀತಿ, ಪ್ರೇಮ, ದೆವ್ವ ಭೂತ, ಕಾನೂನು, ಹೀಗೆ ಬರದ ಸುದ್ದಿಗಳಿಲ್ಲ. ಕೆಲವರಿಗೆ ಹೊಸತನವಾದರೆ, ಕೆಲವರದ್ದು ಅದೇ ಸರದಿ. ಒಟ್ಟಿನಲ್ಲಿ ಮಾತುಕತೆಗಳಿಲ್ಲದೇ ಕಾರ್ಯಕ್ರಮ ಮುಗಿಯುವುದೇ ಇಲ್ಲ. ಮನಸ್ಸುಗಳು ಜೊತೆಯಾಗಬೇಕು, ಎಲ್ಲವನ್ನು ಹಂಚಿಕೊಳ್ಳಬೇಕು. ಸಣ್ಣ ಮಕ್ಕಳಿಗೆ ಒಮ್ಮೆ ಎಲ್ಲರ ಪರಿಚಯವಾಗಭೇಕು. ಕುಟುಂಬದ ಪರಿಚಯ ಸಾಗಬೇಕು. ಬಾಂಧವ್ಯ ಬೆಳೆಯಬೇಕು. ಅಷ್ಟೇ ...ಎಲ್ಲವೂ ಮತ್ತೆ ಹೊಸತು ಕಟ್ಟಬೇಕು. ಹೊಸ ಕುಟುಂಬವೊಂದು ಮತ್ತೊಂದು ಕುಟುಂಬದ ಜೊತೆ ಒಟ್ಟು ಸೇರುವ ಶುಭ ಘಳಿಗೆಗೆ ಎಲ್ಲರೂ ಕಾಯುತ್ತಿದ್ದಾರೆ. ಎಲ್ಲವೂ ಹೊಸತಾಗಬೇಕು. ಮತ್ತೆ ಕಟ್ಟಿಕೊಳ್ಳಬೇಕು. ಹೀಗೆ ಕುಟುಂಬಗಳು ಜೊತೆ ಸೇರುವ ಕಾರ್ಯಕ್ರಮ ಹೆಚ್ಚಾಗಲೇ ಬೇಕು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ