ಸ್ಟೇಟಸ್ ಕತೆಗಳು (ಭಾಗ ೧೦೬೫)- ಸಂಪಾದನೆ

ಸ್ಟೇಟಸ್ ಕತೆಗಳು (ಭಾಗ ೧೦೬೫)- ಸಂಪಾದನೆ

ಸಂಪಾದನೆ ಮಾತ್ರ ಕೊನೆಯವರೆಗೆ ನಮ್ಮನ್ನು ಕಾಯುತ್ತದೆ. ಹಣ ಸಂಪಾದನೆ ಕಡೆಗೆ ಜಾಸ್ತಿ ಮನಸ್ಸು ಮಾಡಿದ್ದವನಿಗೆ ಕಾಲ‌ ತುಂಬಾ ಚೆನ್ನಾಗಿ ಸಂದರ್ಭ ಸಹಿತ ಉತ್ತರವನ್ನ ನೀಡಿತ್ತು. ಶುಭಯೋಗವೊಂದು ಕೈಗೂಡಿದಾಗ ಕಾರ್ಯಕ್ರಮ ಸುಸೂತ್ರವಾಗಿ ಸಾಗಲು ಹಣದ ವ್ಯವಸ್ಥೆ ಆಗಲೇ ಬೇಕಿತ್ತು. ಅದಾದರೆ ಎಲ್ಲವೂ ಆಗಿಬಿಡುತ್ತೆ ಅಂದುಕೊಂಡಿದ್ದೆ. ಆದರೆ ಎಲ್ಲವನ್ನು ಸುಧಾರಿಸಿ ನಮ್ಮದೇ ಕಾರ್ಯಕ್ರಮ ಎಂಬಂತೆ ಜೊತೆ‌ ನಿಲ್ಲುವ‌ ಮನಸ್ಸುಗಳೆಲ್ಲವೂ ಗಟ್ಟಿಯಾಗಿ  ನಿಂತ ಕಾರಣ ಕಾರ್ಯಕ್ರಮದ ವರಸೆಯೇ ಅದ್ಭುತವಾಗಿತ್ತು. ಒಂದಿನಿತೂ ಸುಧಾರಿಸಿಕೊಳ್ಳದೇ ಏನೂ ಪ್ರತ್ಯುಪಕಾರ ಬಯಸದೇ ಹಲವು ದೂರ ದೂರ ಊರಿನ ಹೃದಯಗಳು ಜೊತೆಯಾಗಿ ನಿಂತು ಮನೆಯವರಾಗಿ, ಮನದವರಾಗಿ ಬಿಟ್ಟರು. ಈ ಸಂಪಾದನೆ ಎಲ್ಲಕ್ಕಿಂತ  ಮುಖ್ಯವಾಗಿತ್ತು. ಹಾಗಾಗಿ ಇವತ್ತು ತುಂಬಾ ಚೆನ್ನಾಗಿ ಅರ್ಥವಾಯಿತು. ನನ್ನ ಸಂಪಾದನೆ ಬಗ್ಗೆ ಹೆಮ್ಮೆಯೂ ನೆಮ್ಮದಿಯೂ ಮತ್ತು ಧೈರ್ಯ ಪ್ರಾಪ್ತಿಯಾಯಿತು. ನನಗರ್ಥವಾಗಿದೆ...ನಿಮ್ಮ ಸಂಪಾದನೆ ಬಗ್ಗೆ ಎಚ್ಚರವಿರಲಿ ಮತ್ತು ಅಗತ್ಯವಾಗಿರಲಿ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ