ಸ್ಟೇಟಸ್ ಕತೆಗಳು (ಭಾಗ ೧೦೬೯)- ಮಳೆ

ಸ್ಟೇಟಸ್ ಕತೆಗಳು (ಭಾಗ ೧೦೬೯)- ಮಳೆ

ಇತ್ತೀಚೆಗೆ ಮುಗಿಲು ಆಗಾಗ ಬೇಸರಿಸಿಕೊಳ್ಳುತ್ತಿದೆ ಕಾರಣ ಗೊತ್ತಿದೆಯಾ ನಿಮಗೆ. ನನಗೂ ನಿಖರವಾದ ಕಾರಣ ಗೊತ್ತಿಲ್ಲ. ಇತ್ತೀಚಿಗೆ ಸ್ಥಳವೆಲ್ಲಿ ಅಂತಾನೂ ಗೊತ್ತಿಲ್ಲದೆ ಆಗಾಗ ಬಂದು ಕಣ್ಞೀರು ಸುರಿಸಿ ಆದೇನನ್ನೋ ಹೇಳಿ ಮಾಯವಾಗುತ್ತದೆ. ಅದರ ಮಾತನ್ನ  ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ನನಗಂತೂ ಇಲ್ಲವೇ ಇಲ್ಲ. ಪ್ರತೀ ಊರಲ್ಲಿ ಬೇರೆಬೇರೆ ತರಹದ ನೋವಿನ‌ ಶಾಹಿರಿ ಬರೆಯುತ್ತಿದೆ. ಒಮ್ಮೆ‌ಬಿರುಸಾಗಿ ಇನ್ನೊಮ್ಮೆ‌ ನವಿರಾಗಿ ಮಗದೊಮ್ಮೆ ತುಂತುರಾಗಿ ಆಮೇಲೆ ಧಾರಾಕಾರ, ಚಿಟಿಪಿಟಿ ಹೀಗೆ ಬೇರೆ ಬೇರೆ ಕಾರಣಕ್ಕೆ ಮೋಡ ಕಣ್ಣೀರು ಇಳಿಸುತ್ತಿದೆ. ಅದನ್ನ ಅರ್ಥ ಮಾಡಿಕೊಂಡು ಸಮಾಧಾನ ಮಾಡಿದರೆ ಮೋಡದ ದುಃಖ ಕಡಿಮೆಯಾಗಿ ಮೋಡ.ಹಗುರಾಗಬಹುದು. ಆಗಸ ತಿಳಿಯಾಗಬಹುದು. ತಾರೆಗಳು ಇಣುಕಿ ಮರೆಯಗಬಹುದು. ಯಾರಿಗಾದರೂ ಸಾಮರ್ಥ್ಯ ಇದ್ದರೆ ಸಂಪರ್ಕಿಸಿ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ