ಸ್ಟೇಟಸ್ ಕತೆಗಳು (ಭಾಗ ೧೦೭೩)- ಹಕ್ಕಿ
ಆ ಎರಡು ಪುಟ್ಟ ಮರಿಗಳಿಗೆ ಬದುಕಿನ ವಾಸನೆ ಗೊತ್ತಿಲ್ಲ. ಯಾವುದೋ ಎರಡು ಹಕ್ಕಿಗಳಿಗೆ ಜನನವಾದ ಹಕ್ಕಿಗಳಿಗೆ ತಮ್ಮ ಗಮ್ಯ ತಿಳಿದಿಲ್ಲ. ಅವುಗಳಿಗೆ ಹಾರಿ ಗೊತ್ತಿಲ್ಲ, ಬೇಟೆಯಾಡುವುದಿಲ್ಲ, ಕಷ್ಟವನ್ನು ಎದುರಿಸಲು ತಿಳಿದಿಲ್ಲ. ಒಂದೇ ಕಡೆ ಕುಳಿತು ಅಲ್ಲೇ ಬದುಕನ್ನು ಸಂಭ್ರಮಿಸುತ್ತಿದ್ದಾರೆ. ಕಣ್ಣ ಮುಂದೆ ಕಾಣುತ್ತಿರುವುದೇ ಅವುಗಳ ಬದುಕಿನ ಅಂತಿಮ ಸತ್ಯ ಆಗಿ ಬಿಟ್ಟಿದೆ. ಆಗಾಗ ಚಿಲಿಪಿಲಿಗುಟ್ಟುತ್ತಾ ತನ್ನನ್ನು ಸಾಕುತ್ತಿರುವವರಿಗೆ ಮನರಂಜನೆ ಹೇಳುತ್ತಾ ಬರಿಯ ಪಂಜರದೊಳಕ್ಕೆ ಬಂದಿಯಾಗಿ ಬದುಕುತ್ತಿದೆ. ಪಂಜರ ತೆರೆದರೆ ಅದಕ್ಕೆ ಬದುಕುವ ದಾಳಿಯೇ ತಿಳಿದಿಲ್ಲ. ಅದು ಕಲಿತಿಲ್ಲ. ಅಷ್ಟೊಂದು ಪರಾವಲಂಬಿಯಾಗಿ ತನ್ನ ಬದುಕನ್ನು ಸಾಗಿಸುತ್ತದೆ. ಒಂದು ದಿನ ಅದೇ ಗೂಡಿನೊಳಗೆ ತನ್ನ ಸಾವನ್ನ ತಾನೇ ಎದುರು ನೋಡುತ್ತಿದೆ. ಹೊರಟು ಬದುಕುವ ಧೈರ್ಯವಿಲ್ಲ. ಲಕ್ಷ್ಣವೂ ಕಾಣಿಸುತ್ತಿಲ್ಲ. ಇದ್ದದ್ರಲ್ಲಿ ಸುಖ ಪಡುತ್ತಾ ಹೋಗುತ್ತಾ ಬಿಟ್ಟರೆ ನಾವು ಪಂಜರದೊಳಗೆ ಬಂದಿಯಾಗಿ ಬಿಡುತ್ತೇವೆ. ಹಾರಬೇಕು ಮುಗಿಲೆತ್ತರಕ್ಕೆ ಬೀಳಬೇಕು ಎಲ್ಲವನ್ನು ಎದುರಿಸಿ ಗಟ್ಟಿ ನಿಲ್ಲಬೇಕು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ