ಸ್ಟೇಟಸ್ ಕತೆಗಳು (ಭಾಗ ೧೦೭೭)- ಗಣೇಶ
ಅವನ ಉದ್ದೇಶ ಸಫಲವಾಗಿತ್ತು. ಹಾಗೆಯೇ ದೇವರ ಲೋಕದಲ್ಲಿ ಓಡಾಡುತ್ತಿದದವನು ವರ್ಷಕ್ಕೊಂದು ಸಲ ಜನ ಸಂಭ್ರಮದಿಂದ ಮೆರೆಸೋಕೆ ಅಂತ ಕರೆತ್ತಾರೆ. ಒಬ್ಬೊಬ್ಬರು ಒಂದೊಂದು ಉದ್ದೇಶವನ್ನಿಟ್ಟುಕೊಂಡು ಆತನನ್ನು ಕರೆಸುತ್ತಾರೆ, ಆರಾಧಿಸುತ್ತಾರೆ. ಆತನು ಒಬ್ಬೊಬ್ಬರ ಉದ್ದೇಶವನ್ನು ಒಂದೊಂದು ರೀತಿಯಲ್ಲಿ ಇಷ್ಟಾನು ಪಡುತ್ತಾನೆ. ಅದೊಂದು ಮನೆ. ಮನೆಯಲ್ಲಿ ಬೆಳೆದ ಎಲ್ಲ ಮಕ್ಕಳು ದೊಡ್ಡ ದೊಡ್ಡ ಉದ್ಯೋಗವನ್ನು ಪಡೆದು ಊರು ಬಿಟ್ಟಿದ್ದಾರೆ. ಅವರವರ ಊರುಗಳಲ್ಲಿ ಅವರವರು ಸ್ವಂತವಾದ ಮನೆಯನ್ನು ಕಟ್ಟಿಕೊಂಡು ಜೀವನ ಸಾಗಿಸ್ತಾ ಇದ್ದಾರೆ. ಆದರೆ ಅವರದೊಂದು ಪರಂಪರಾಗತವಾದ ನಿಯಮವಿದೆ. ಗಣೇಶನ್ನ ಮನೆಯಲ್ಲಿ ಕೂರಿಸಬೇಕು. ಆ ದಿನ ಯಾರು ತಪ್ಪಿಸಿಕೊಳ್ಳುವ ಹಾಗಿಲ್ಲ. ಆ ಕಾರಣಕ್ಕೆ ಅವರ ಜೀವನದ ಎಲ್ಲಾ ಗಣೇಶ ಚೌತಿಯು ಈ ಮೂಲ ಮನೆಯಲ್ಲಿ ನಡೆಯುತ್ತದೆ. ಅಲ್ಲಿ ಎಲ್ಲರೂ ಜೊತೆ ಸೇರ್ತಾರೆ, ಕುಣಿಯುತ್ತಾರೆ ಹಾಡುತ್ತಾರೆ ಭಜನೆ ಹೇಳುತ್ತಾರೆ ಕಷ್ಟ ಸುಖ ಹಂಚಿಕೊಳ್ಳುತ್ತಾರೆ ಮುಖತಃ ಮಾತನಾಡ್ತಾರೆ. ಸಂಬಂಧಗಳನ್ನ ಗಟ್ಟಿಗೊಳಿಸುತ್ತಾರೆ. ಅವರನ್ನು ಅರ್ಥೈಸಿಕೊಳ್ಳೋಕೆ, ಮುಂದೆ ಸಾಗುವುದಕ್ಕೆ ಬೆನ್ನೆಲುಬಾಗಿ ನಿಲ್ಲುವ ಶಕ್ತಿ ಸಿಗುವುದಕ್ಕೆ ಗಣೇಶನನ್ನು ಮುಂದಿಟ್ಟುಕೊಂಡು ಬದುಕಿದ್ದಾರೆ. ಗಣೇಶನೂ ಸಂಭ್ರಮದಿಂದ ಹರಸಿದ್ದಾನೆ. ಕೂಡ. ಆಚರಣೆಗಳ ಹಿಂದೆ ಗಟ್ಟಿಯಾದ ಉದ್ದೇಶವಿದ್ದರೆ ಭಗವಂತನೂ ಜೊತೆ ನಿಲ್ತಾನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ