ಸ್ಟೇಟಸ್ ಕತೆಗಳು (ಭಾಗ ೧೦೮೦)- ಊರು ಬಿಟ್ಟವರು
ಅವರೆಲ್ಲ ಊರು ಬಿಟ್ಟಿದ್ದಾರೆ. ಇತ್ತೀಚಿನವರೆಗೂ ನಮ್ಮ ನಡುವೆ ಇದ್ದವರು, ಇತ್ತೀಚಿಗೆ ಕಾಣದಾಗಿದ್ದಾರೆ. ರಾತ್ರಿ ಆದಷ್ಟು ಬೇಗ ಮಲಗಿ ಮುಂಜಾನೆ ಸೂರ್ಯ ಹುಟ್ಟುವುದಕ್ಕಿಂತ ಎಷ್ಟೋ ಮೊದಲೇ ಎದ್ದು ತಮ್ಮ ಕೆಲಸಗಳನ್ನು ಮಾಡುವವರು ಊರು ಬಿಟ್ಟಿದ್ದಾರೆ, ಕುಟುಂಬದ ಜೊತೆ ಬದುಕಿ ಎಲ್ಲರೂ ಸೇರಿ ಬದುಕುವ ಯೋಗ್ಯ ಮನಸ್ಸಿನವರು ಊರು ಬಿಟ್ಟಿದ್ದಾರೆ ,ಹಣಕ್ಕಿಂತ ಸಂಬಂಧಕ್ಕೆ ಹೆಚ್ಚು ಮೌಲ್ಯ ಕೊಡುತ್ತಿದ್ದವರು ಕೂಡ ಊರು ಬಿಟ್ಟಿದ್ದಾರೆ, ಸಾಮಾಜಿಕ ಮಾಧ್ಯಮಗಳಲ್ಲಿ ಮುಳುಗದೆ ಪಕ್ಕದವನ ಸಮಸ್ಯೆಗೆ ಸ್ಪಂದಿಸುವವರು ಕೂಡ ಊರು ಬಿಟ್ಟಿದ್ದಾರೆ, ವರ್ಷಕ್ಕೊಂದ್ಸಲ ಆಗಾಗ ಜೊತೆಗೆ ಸೇರಿ ಊರಿನ ಅಭಿವೃದ್ಧಿಗೆ ಯೋಚಿಸುವ ಮನಸ್ಸಿನವರು ಊರು ಬಿಟ್ಟಿದ್ದಾರೆ, ಇವರೆಲ್ಲರೂ ಊರು ಬಿಟ್ಟ ಮೇಲೆ ಊರಿಗೆ ತನ್ನೂರಲ್ಲಿ ಇರುವುದು ಬೇಡ ಅಂತ ಅನ್ನಿಸಿಬಿಟ್ಟಿದೆ. ಹಾಗಾಗಿ ಸಮಸ್ಯೆಗಳು ಆರಂಭವಾಗಿದೆ. ನಾವು ಊರು ಬಿಟ್ಟವರ ಸ್ಥಳವನ್ನು ತುಂಬುವುದಕ್ಕಾದರೆ ಊರು ನೆಮ್ಮದಿಯಲ್ಲಿರಬಹುದು. ನಾವು ನೆಮ್ಮದಿಯಲ್ಲಿ ಇರಬಹುದು, ಮುಂದೆ ನಮ್ಮನ್ನ ನಂಬಿ ಬರುವವರೆಲ್ಲರೂ ಕೂಡ ನೆಮ್ಮದಿಯಲ್ಲಿ ಇರಬಹುದು... ಏನಂತೀರಾ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ