ಸ್ಟೇಟಸ್ ಕತೆಗಳು (ಭಾಗ ೧೦೮೧)- ಯಾಕೆ?
ಸ್ಪರ್ಧೆಗಳಲ್ಲಿ ಬಹುಮಾನ ವಿತರಣೆ ನಡಿತಾ ಇತ್ತು. ದೊಡ್ಡ ಮಕ್ಕಳ ಸ್ಪರ್ಧೆಯ ಬಹುಮಾನ ವಿತರಣೆ ಮಾಡುವಾಗ ಪ್ರಥಮ ಬಹುಮಾನ ತೆಗೆದುಕೊಂಡ ವಿದ್ಯಾರ್ಥಿಗೆ ಜೋರು ಚಪ್ಪಾಳೆ, ದ್ವಿತೀಯ ಪಡೆದುಕೊಂಡ ವಿದ್ಯಾರ್ಥಿ ಒಂದಷ್ಟು ಮುಖ ಸಪ್ಪೆ ಮಾಡಿಕೊಂಡರೆ, ಅವರ ಶಾಲೆಯ ಶಿಕ್ಷಕರು, ಗೆಳೆಯರು ಕೂಡ ಅದೇ ಭಾವವನ್ನು ಹೊಂದಿದ್ದರು. ಪ್ರಶಸ್ತಿ ಸಿಗದೇ ಇರುವವರಂತೂ ನೋವಿನಿಂದ ವಾಪಸ್ಸು ಮನೆಗೆ ಹೊರಟಿದ್ದರು. ಸಣ್ಣ ಮಕ್ಕಳ ಸ್ಪರ್ಧೆ ಕಾರ್ಯಕ್ರಮ ಅದೇ ವೇದಿಕೆಯಲ್ಲಿ ಜರುಗಿತ್ತು. ಅಲ್ಲಿ ಪ್ರಥಮ, ದ್ವಿತೀಯ, ತೃತೀಯ ಯಾವುದೇ ಬಹುಮಾನ ಸಿಕ್ಕರೂ ಮಕ್ಕಳ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಬಹುಮಾನ ಸಿಗದವರು ಕೂಡ ಚಪ್ಪಾಳೆ ತಟ್ಟಿ ಎಲ್ಲರನ್ನೂ ಪ್ರೋತ್ಸಾಹಿಸಿದರು. ಆ ಮಕ್ಕಳಿಗೆ ಬಹುಮಾನ ಪಡೆದು ಏನನ್ನೋ ಸಾಧಿಸಿದ್ದೇವೆ ಎನ್ನುವ ಅಹಂಕಾರ ಬೇಕಾಗಿರಲಿಲ್ಲ. ಬೇರೆಯವರಿಗೆ ಬಹುಮಾನ ಸಿಗುವಾಗಲೂ ಸಂಭ್ರಮದಿಂದ ಚಪ್ಪಾಳೆ ತಟ್ಟಿದ್ರು. ತಾವು ವೇದಿಕೆಗೆ ಏರುವಾಗ ಅಷ್ಟೇ ಸ್ಥಿತಪ್ರಜ್ಞರಾಗಿದ್ದರು. ದೊಡ್ಡವರಾಗಿರುವಾಗ ಇರಬೇಕಾದ ಗುಣಗಳು ಸಣ್ಣವರಾಗಿರುವ ಇದ್ದು ಇಂದು ಮಾಯವಾಗಿ ಬಿಟ್ಟಿರುವುದನ್ನು ಕಂಡು ನನಗೊಂತರ ಅಸಹ್ಯ ಅನ್ನಿಸಿತು. ನಾವು ದೊಡ್ಡವರಾಗ್ತಾ ಕಲಿಯುತ್ತಾ ಪಡೆದುಕೊಳ್ಳುತ್ತಾ ಹೋಗ್ತಾ ಇರೋದೇನ್ನ ಅನ್ನುವ ಪ್ರಶ್ನೆ ಹಾಗೆ ಉಳಿದುಬಿಟ್ಟಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ