ಸ್ಟೇಟಸ್ ಕತೆಗಳು (ಭಾಗ ೧೦೮೫)- ಬೇಡುವಿಕೆ

ಸ್ಟೇಟಸ್ ಕತೆಗಳು (ಭಾಗ ೧೦೮೫)- ಬೇಡುವಿಕೆ

ಕಣ್ಣೀರು ಸುರಿಸಿಕೊಂಡು ಬೇಡುತ್ತಿದ್ದಾರೆ. ಎಲ್ಲರ ಮುಂದೆ ಕೈ ಚಾಚುತ್ತಿದ್ಧಾರೆ. ಅವರ ಕಣ್ಣುಗಳು ಬಯಸುತ್ತಿದೆ. ಇನ್ನಷ್ಟು ಸಹಾಯವನ್ನ. ನಿಲ್ಲುವುದ್ದಕ್ಕೆ ದೇಹ ಒಪ್ಪದಿದ್ದರೂ ಕುಳಿತರೆ ಎಲ್ಲಿ ಸಹಾಯ ಕಡಿಮೆಯಾಗಬಹುದು ಅನ್ನುವ ಕಾರಣಕ್ಕೆ ನಿಂತು ಬೇಡಿಕೆ ಸಲ್ಲಿಸುತ್ತಿದ್ದಾರೆ ದೇವರ ಮುಂದೆ. ಅವನನ್ನ ನೋಡುವುದ್ದಕ್ಕೆ ಬರುವವರು ನನ್ನನ್ನ ಕಂಡು ಕೈಲಾದ ಸಹಾಯ ಮಾಡುವರು ಎಂಬ ನಿರೀಕ್ಷೆಯಲ್ಲಿ. ಅವರ ಕಣ್ಣಲ್ಲಿ ಕಣ್ಣೀರು ಇಳಿಯುತ್ತಿದೆ. ಇಲ್ಲಿ ನಿಂತು ಬೇಡುವ ಪರಿಸ್ಥಿತಿ ನಿರ್ಮಾಣವಾದ್ದಕ್ಕೋ ಅಥವಾ ಮಕ್ಕಳ ಹೀನ ಮನಸ್ಸಿಗೋ ಯಾರೂ ಸಹಾಯ ಮಾಡದಿರುವ ಜನರ ಸ್ಥಿತಿಗೋ ಗೊತ್ತಿಲ್ಲ. ಒಟ್ಟಿನಲ್ಲಿ ಬೇಡುವಿಕೆ ನಿರಂತರವಾಗಿದೆ.... ಇಂತಹದೇ ಹಲವು ಬದುಕುಗಳು ಇನ್ನೂ ನಿರ್ದಿಷ್ಟ ಗುರಿಯಿಲ್ಲದೇ ಅಡ್ಡಾಡುತ್ತಿದ್ದಾವೆ.... ಆಡಿಸುವವನ ಕೈ ಚಳಕವೇ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ