ಸ್ಟೇಟಸ್ ಕತೆಗಳು (ಭಾಗ ೧೦೮೯)- ನಾನು
ನಾನು ಅನ್ನುವವನು ನಮ್ಮ ಜೊತೆಗೆ ನೆರಳಿನಂತೆ ಸದಾ ಇರ್ತಾನೆ. ಅವನು ಕೈ ಹಿಡಿದು ನಮ್ಮ ಪಕ್ಕದಲ್ಲಿ ನಡೆಯುತ್ತಾ ಇರಬೇಕು. ಯಾವತ್ತಾದರೂ ನಮ್ಮ ಹೆಗಲೇರಿ ಬದುಕೋಕೆ ಆರಂಭ ಮಾಡಿದರೆ ಅವನ ಭಾರಕ್ಕೆ ನಾವು ಮುಳುಗುವುದ್ದಕ್ಕೆ ಆರಂಭ ಮಾಡ್ತೇವೆ. ಅವನೋ ಕಾಯ್ತಾ ಇರ್ತಾನೆ ಯಾರನ್ನ ಮುಳುಗಿಸಲೀ ಎಂದು.ಕೆಲವರು ನಾನೂ ಅನ್ನೊದ್ದನ್ನ ತೊರೆದೇ ಬದುಕೋಕೆ ಆರಂಭ ಮಾಡಿದ್ದಾರೆ ಅವರ ಸುತ್ತ ನಾನು ತುಂಬಾ ಸಲ ಸುತ್ತಿದ್ದಾನೆ, ಅವರನ್ನ ಒಳಗೊಳ್ಳುವುದ್ದಕ್ಕೆ ನೋಡಿದ್ದಾನೆ. ಅವರ ನಿಶ್ಚಲವಾಗಿದ್ದಕ್ಕೆ ಅಲ್ಲಿಂದ ಹೊರಟು ಇನ್ನಿತರರ ಕಡೆಗೆ ಗಮನ ಹರಿಸಿದ್ದಾನೆ. ಅವನು ಯಾವಾಗಲೂ ನಮ್ಮ ಪಕ್ಕದಲ್ಲಿ ನಡೆಯುತ್ತಿರಬೇಕು. ಅವನ ಜೊತೆಗಿದ್ದರೆ ನಮಗದು ಆನೆ ಬಲ. ಹೆಗಲೇರಿ ನಿಂತು ನಮ್ಮನ್ನ ನಡೆಸಿದರೆ ನಾವು ವಿನಾಶದ ಕಡೆಗೆ ಸಗ್ತಾ ಇದ್ದೇವೆ ಅಂತ ಅರ್ಥ. ಹಗಾಗಿ ಎಚ್ಚರ ನಾನು ಅನ್ನುವವನಿಗೆ ನಿರ್ದಿಷ್ಟ ರೂಪವಿಲ್ಲ, ನೀವು ನೋಡುವ ಕನ್ನಡಿಯೊಳಗಡೆ, ಮಾಡುವ ಕೆಲಸದೊಳಗಡೆ, ಮಾತಿನ ಸ್ವರದೊಳಗಡೆ ಅವಿತು ಕುಳಿತಿರ್ತಾನೆ. ನನ್ನ ಜೊತೆಗೂ ಬದುಕಿದ್ದಾನೆ ಆಗಾಗ ಹೆಗಲೇರುವುದ್ದಕ್ಕೆ ಪ್ರಯತ್ನ ಪಟ್ಟಾಗ ನಾನು ಇಳಿಸಿದ್ದೇನೆ. ನಿಮ್ಮ ಬಳಿಯೂ ಬಂದು ಏರಬಹುದು ಎಚ್ಚರ ಕಾಲ ಸರಿ ಇಲ್ಲಾ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ