ಸ್ಟೇಟಸ್ ಕತೆಗಳು (ಭಾಗ ೧೦೯೮)- ಮನಸ್ಸು

ಸ್ಟೇಟಸ್ ಕತೆಗಳು (ಭಾಗ ೧೦೯೮)- ಮನಸ್ಸು

ಅವನ ಮನಸ್ಸು ಒಂಥರಾ ಗೊಂದಲದ ಗೂಡು. ಅವನಿಗೆ ಅವನ ದೇಹಕ್ಕಾಗುವ ಯಾವುದಾದರೂ ಒಂದು ಸಮಸ್ಯೆಗೆ ಆತ ಸೇವಿಸಿದ ಆಹಾರವೇ ಕಾರಣ ಅಂತ ಅಂದುಕೊಳ್ಳುತ್ತಾನೆ, ಆತನ ದಿನಚರಿಯೋ ಆತನ ದೇಹದ ವೈರುಧ್ಯಗಳೋ, ಸುತ್ತಮುತ್ತಲಿನ ಸಮಸ್ಯೆಯನ್ನ ಸರಿಯಾಗಿ ಗಮನಿಸಿಕೊಳ್ಳದೆ ಎಲ್ಲದಕ್ಕೂ ತಾನು ಸೇವಿಸುವ ಆಹಾರವನ್ನು ದೂರುತ್ತಿರುತ್ತಾನೆ. ಇತ್ತೀಚಿಗೆ ಯಾವುದೋ ಒಂದು ತರಕಾರಿಯಲ್ಲಿ ಊಟ ಮಾಡಿದ ನಂತರ ದೇಹದಲ್ಲಿ ತುರಿಕೆ ಆರಂಭವಾಯಿತು. ಅಂದಿನಿಂದ ಆ ತರಕಾರಿ ಅಂದ್ರೆ ತನ್ನ ದೇಹಕ್ಕೆ ಅಲರ್ಜಿ ಅಂತಂದುಕೊಂಡೆ ಇಂದಿನವರೆಗೂ ಬದುಕಿದ್ದ ಆದರೆ ಇತ್ತೀಚಿಗೆ ಕೆಲವೊಂದು ದಿನ ಆತನಿಗರಿವಿಲ್ಲದೆ ಆ ತರಕಾರಿ ಆತನ ದೇಹವನ್ನು ಸೇರಿತು ಯಾವುದೇ ರೀತಿಯ ಕೆಟ್ಟ ಪರಿಣಾಮವನ್ನು ಉಂಟುಮಾಡಲೇ ಇಲ್ಲ. ಹಾಗೆ ಮುಂದುವರಿತ ಹೋದ ಹಾಗೆ ಆತನಿಗೆ ಅರ್ಥವಾದದ್ದು ಪ್ರತಿಯೊಂದು ಸಮಸ್ಯೆಯು ನಮ್ಮ ಮನಸ್ಸಿನಲ್ಲಿ ಹುಟ್ಟಿ ಅಲ್ಲೇ ಬೆಳೆಯುತ್ತದೆ. ಮೊದಲು ಅಲ್ಲಿ ಅದಕ್ಕೆ ಮದ್ದು ನೀಡಿದಾಗ ದೇಹವು ಸೌಖ್ಯ ಗೋಳುತ್ತದೆ. ಮನಸ್ಸಿನ ಒಳಗಿನ ಗಾಯಗಳಿಗೆ ಕಾಯಿಲೆಗಳಿಗೆ ಮದ್ದು ಕೊಡುವವರು ಸದ್ಯಕ್ಕೆ ತುಂಬಾ ತುರ್ತಾಗಿ ಬೇಕಾಗಿದ್ದಾರೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ