ಸ್ಟೇಟಸ್ ಕತೆಗಳು (ಭಾಗ ೧೦೯) - ದೂರುವುದು ಯಾರನ್ನ?

ಹಿಮಗಿರಿಯ ಮೇಲೆ ಧಿರಿಸು ದರಿಸಿ ಕಾಯುತ್ತಿರುವ ಸೈನಿಕ ಅವನು. ಮಂಜಿನ ಮಳೆಯೇ ದಿನವು ಹನಿಯುತ್ತಿರುವ ಜಾಗ. ರೆಪ್ಪೆಗಳ ಅಲಗಿನ ಮೇಲೆ ಬಿಳಿ ಮಂಜು ಕ್ಷಣ ಬಿಡದೆ ಸುರಿದರೂ ಆತ ರೆಪ್ಪೆ ಅಲುಗಿಸದೆ ಬಂದೂಕು ಹಿಡಿದು ದೇಶ ಕಾಯುತ್ತಿದ್ದಾನೆ. ರಜೆ ಘೋಷಣೆಯಾಯಿತು. ಮನೆಗೆ ಹೊರಟು. ಊರಿನ ನಡುವೆ ಸಾಗಿದಾಗ ಸ್ವಾಗತಿಸಿದರು. ಕುಶಲೋಪರಿ, ಮಾತುಕತೆ, ಊರಿನ ನಡುವೆ ಆತ್ಮೀಯರ ಜೊತೆ ಓಡಾಟ. ಅಲ್ಲೊಂದು ಮನೆಗೆ ಬೆಂಕಿ ಬಿದ್ದ ಸುದ್ದಿ ತಿಳಿದ ತಕ್ಷಣ ಅತ್ತ ಧಾವಿಸಿದ. ದೇಶ ಕಾಯೋನಿಗೆ ತನ್ನವರನ್ನು ಉಳಿಸಲು ವಿಶೇಷವಾಗಿ ಹೇಳಬೇಕಾಗಿಲ್ಲ ಬಿಡಿ. ಒಳಗೆ ಸಿಲುಕಿದ ಜೀವಗಳನ್ನು ಉಳಿಸಲು ಅಗ್ನಿಯೊಳಗೆ ದುಮುಕಿದ. ಜೀವಗಳನ್ನು ಜತನವಾಗಿ ಹೊರತಂದ. ಇನ್ನೊಂದು ಉಳಿದಿತ್ತು.
ಆಗಲಿ ಸೈನಿಕನ ದೇಹ ಅರ್ಧದಷ್ಟು ಸುಟ್ಟುಹೋಗಿತ್ತು. ಕಾರ್ಯ ನಿಲ್ಲಿಸಿಲ್ಲ. ಮತ್ತೆ ಒಳಗೆ ಸಾಗಿ ಬಡಿಯುತ್ತಿರೋ ಪುಟ್ಟ ಜೀವವನ್ನು ಹೊರತಂದು ಪ್ರಜ್ಞೆತಪ್ಪಿದ. ದೇಹ ಬೆಂದಿತ್ತು, ಗುರುತೆ ಮಾಯವಾಗಿತ್ತು. ಜೀವ ಕ್ಷೀಣಿಸುವ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ಸಾಗಿಸಿದರು. ಉಳಿಸುವ ಪ್ರಯತ್ನವಾದರೂ ಭಗವಂತ ಕರೆದುಕೊಂಡೇ ಬಿಟ್ಟ. ಈ ಸುದ್ದಿ ಸದ್ದಾಗಲೇ ಇಲ್ಲ. ಮಾಧ್ಯಮ ನಮಗೆ ತಿಳಿಸಲೇ ಇಲ್ಲ. ಚಿತ್ರನಟಿಯ ಕೆಲವು ಲಕ್ಷದ ಸುದ್ದಿಯಿತ್ತು, ಯಾವುದು ಚಲನಚಿತ್ರದ ಭರಾಟೆಗೆ ಇತ್ತು, ಈ ಸುದ್ದಿ ಅವನ ಮನೆಯವರಿಗೆ ಮಾತ್ರ ತಿಳಿದಿತ್ತು. ವಿಪರ್ಯಾಸ. ಹಿಮಗಿರಿ ಇವನ ಬರುವಿಕೆಗೆ ಕಾದಿದೆ ಆದರೆ ಅವನಿಲ್ಲ? ನಮ್ಮೊಳಗಿನ ನೆನಪಿನ ಹಾಗೆ …
-ಧೀರಜ್ ಬೆಳ್ಳಾರೆ
ಸಾಂದರ್ಭಿಕ ಚಿತ್ರ: ಇಂಟರ್ನೆಟ್ ಕೃಪೆ