ಸ್ಟೇಟಸ್ ಕತೆಗಳು (ಭಾಗ ೧೧೦೨)- ಗೃಹ ಪ್ರವೇಶ

ಸ್ಟೇಟಸ್ ಕತೆಗಳು (ಭಾಗ ೧೧೦೨)- ಗೃಹ ಪ್ರವೇಶ

ಗೃಹಪ್ರವೇಶದ ಪತ್ರಿಕೆಯನ್ನು ಹಿಡಿದು ರಮೇಶ ನಾಯಕರ ಮನೆಗೆ ಬಂದುಬಿಟ್ಟಿದ್ದ. ಆ ನಾಯಕರು ಎಲ್ಲಾ ಮನೆಗಳ ಎಲ್ಲಾ ಕಾರ್ಯಕ್ರಮಗಳಿಗೂ ಹೋಗಿ ತಾವು ತಿಳಿದಿರುವುದನ್ನ ಅವರಿಗೆ ಲೆಕ್ಕಕ್ಕಿಂತ ಹೆಚ್ಚು ಹೇಳಿ ಬರುವವರು. ಅವರ ಬಳಿ ಹೋಗಿ ಮಾತನಾಡೋದು ಅಂದ್ರೆ ಕೆಲವರಿಗೆ ಆಗ್ತಾ ಇರಲಿಲ್ಲ. ಅವರು ಹೇಳುವ ಎಲ್ಲ ವಿಚಾರಗಳು ಉಪಯೋಗವಾಗಿದ್ದರೂ ಸಹ ಕೇಳುವವರಿಗೆ ವ್ಯವಧಾನ ಇರಲಿಲ್ಲ. ಹಾಗಾಗಿ ಇವತ್ತು ರಮೇಶನ ಗ್ರಹ ಪ್ರವೇಶ ಪತ್ರಿಕೆಯನ್ನು ಅವರ ಕೈಯಲ್ಲಿ ಇಟ್ಟಿದ್ದ ಅವರು ಮಾತಿಗೆ ಶುರು ಹಚ್ಚಿದ್ದಾರೆ. "ನೋಡಪ್ಪ ಅದು ಗೃಹಪ್ರವೇಶವಲ್ಲ, ಮನೆಯವರು ಆ ಮನೆಯೊಳಗೆ ಪ್ರವೇಶವಾಗುತ್ತಾರೋ ಅಂದಿನಿಂದ ಮನೆಯಲ್ಲೇನೋ ಬದಲಾವಣೆ ಆಗುವುದಿಲ್ಲ. ಮನೆಯಲ್ಲಿ ಬದುಕುವ ಮನಸ್ಸುಗಳಲ್ಲಿ ಬದಲಾವಣೆ ಆಗುತ್ತೆ ಮತ್ತು ಆಗಲೇಬೇಕು ಕೂಡ. ಇಷ್ಟು ದಿನದವರೆಗೆ ಬದುಕಿದ್ದ ರೀತಿಗಳಲ್ಲಿ ಇನ್ನೊಂದಷ್ಟು ಹೊಸ ವಿಚಾರಗಳು ಒಳಗೊಳ್ಳಬೇಕು,  ಮನೆ ಕಟ್ಟಿದ್ದು ಕಲ್ಲುಗಳಿಂದ ಗೋಡೆಗಳಿಂದ ಸಿಮೆಂಟ್ ನಿಂದ ಆದರೆ ಇನ್ನು ಮನಸ್ಸು ಕಟ್ಟೋ ಕೆಲಸ ಇದೆಯಲ್ಲ ಅದು ದೊಡ್ಡದಾಗಬೇಕು . ಮನೆಯೊಳಗೆ ಬರುತ್ತಿದ್ದಂತಹ ಸಂಬಂಧಗಳು ಹೆಚ್ಚಾಗಬೇಕು. ಅದು ನಿಜವಾದ ಗ್ರಹಪ್ರವೇಶ . ಯಾವತ್ತೋ ಒಂದು ದಿನ ಸಂಭ್ರಮದಿಂದ ಒಂದಷ್ಟು ಜನರಿಗೆ ಊಟ ಬಡಿಸಿ ಕೈ ತೊಳೆದುಕೊಳ್ಳುವುದಲ್ಲ, ಇದನ್ನು ಅರ್ಥ ಮಾಡ್ಕೋ ಅಂತಂದವರು ಕುಡಿಯುವುದಕ್ಕೆ  ಬೆಲ್ಲ ನೀರು ಕೊಟ್ಟು ಉಪಚರಿಸಿ ಕಳುಹಿಸಿದರು. ಬೆಲ್ಲದಂತೆ ಮಾತುಗಳು‌ ಮನಸ್ಸೊಳಗೆ‌ ಕರಗಲಾರಂಬಿಸಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ