ಸ್ಟೇಟಸ್ ಕತೆಗಳು (ಭಾಗ ೧೧೦೩)- ಉಡುಗೊರೆ
ಉಡುಗೊರೆಗಳ ರಾಶಿಗಳನ್ನು ನೋಡಿಕೊಂಡು ಹಾಗೆಯೇ ಸುಮ್ಮನೆ ಕುಳಿತುಕೊಂಡು ಶಾಮರಾಯರು ತನ್ನ ಗೆಳೆಯನ ಬಳಿ ಮಾತನಾಡುತ್ತಿದ್ದರು ಅಲ್ಲಯ್ಯ, ಈ ಉಡುಗೊರೆಗಳಿಂದ ಉಪಯೋಗವೇನು? ಯಾರೋ ಒಬ್ಬರು ಕೊಡಬೇಕು ಅನ್ನುವ ಕಾರಣಕ್ಕೆ ಕೊಡುವುದು ಉಡುಗೊರೆಯಲ್ಲ. ಆ ಉಡುಗೊರೆಯಿಂದ ತೆಗೆದುಕೊಳ್ಳುವವನ ಜೀವನದಲ್ಲಿ ಒಂದಷ್ಟು ಬದಲಾವಣೆಗಳಾಗಬೇಕು, ಆತನ ಬದುಕಿಗೆ ಅದು ದಾರಿ ದೀಪವಾಗಬೇಕು ಹೀಗೆ ಇನ್ನೊಬ್ಬರಿಗೆ ಉಪಯೋಗವಾಗುವುದನ್ನ ನೀಡಿದರೆ ಮಾತ್ರ ಉಡುಗೊರೆಗೂ ಅರ್ಥ, ಕೊಟ್ಟವನಿಗೊಂದು ನೆಮ್ಮದಿ. ಈ ನನ್ನ ಮನೆಗೆ ಬಂದ ಎಷ್ಟು ಉಡುಗೊರೆಗಳ ನಡುವೆ ಉಪಯೋಗವಾಗುವಂತದ್ದು ಕೆಲವಷ್ಟೇ ಕಣ್ಣ ಮುಂದೆ ಇದೆ. ನನ್ನಿಂದ ಸುದ್ದಿ ತಲುಪಿಸಲಾಗುವುದಿಲ್ಲ, ಇದನ್ನು ಇನ್ನೊಂದಷ್ಟು ಜನರಿಗೆ ಹೇಳೋ ಮಾರಾಯ ಉಡುಗೊರೆಗಳು ಉಪಯೋಗವಾಗಲಿ....ಅಂತಾ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ