ಸ್ಟೇಟಸ್ ಕತೆಗಳು (ಭಾಗ ೧೧೦೪)- ಕಟ್ಟಡ

ಸ್ಟೇಟಸ್ ಕತೆಗಳು (ಭಾಗ ೧೧೦೪)- ಕಟ್ಟಡ

ಜೀವವಿಲ್ಲದ ಕಟ್ಟಡವೊಂದು ತಲೆ ಎತ್ತಿ ನಿಂತಿದೆ. ಇನ್ನೂ ಜೀವ ತುಂಬುವವರನ್ನ ನಿರೀಕ್ಷಿಸುತ್ತಿದೆ. ಆ ಮಗುವಂತಹ ಕಟ್ಟಡವೊಂದು ಇನ್ನೂ ಜೀವವಿಲ್ಲದೆ ಎಲ್ಲಾ ಶಕ್ತಿಯನ್ನ ತನ್ನೊಳಗೆ ತುಂಬಿಕೊಂಡು ಆತ್ಮ ಶಕ್ತಿ ನೀಡುವವರನ್ನ ಕಾಯುತ್ತಿದೆ. ಬಣ್ಣಗಳನ್ನು ಜೊತೆಗೆ ತರಗತಿಯೊಳಗೆ ಆಗತ್ಯವಾದದ್ದನ್ನ ತುಂಬಿಕೊಂಡು ಕಾಯುತ್ತಿದೆ. ಜೀವತುಂಬುವ ಶಿಕ್ಷಕರು ಬದುಕು ನೀಡುವ ವಿದ್ಯಾರ್ಥಿಗಳು ಒಳಗೆ ಪಾದ ಬೆಳೆಸಬೇಕು. ಕಟ್ಟಡವು ಕಾಯುತ್ತಿದೆ. ತನ್ನೊಳಗೆ ತನ್ನೊಳಗೆ ವಿದ್ಯಾರ್ಥಿಗಳ ಓಡಾಟವೆಂಬ ರಕ್ತ ಸಂಚಾರ, ಚಟುವಟಿಕೆಗಳೆಂಬ ನರಮಂಡಲಗಳು ಎಲ್ಲವೂ ಜೊತೆ ಸೇರಿದಾಗ ಕಟ್ಟಡ ಉಸಿರಾಡುತ್ತದೆ. ಕಟ್ಟಡವೆಂಬ ಪುಟ್ಟ ಮಗು ಬೆಳೆಯಬೇಕು ಹೆಸರು ಮಾಡಬೇಕು, ಸಾಧಿಸಬೇಕು. ಕೆಲವು ಕಟ್ಟಡಗಳು ಒಳಗೆ ಮನುಷ್ಯರಿದ್ದರೂ ಉಸುರಾಡುವುದಿಲ್ಲ. ಉಸಿರು ನೀಡುವ ಜವಾಬ್ದಾರಿ  ಒಳಗೆ ಬದುಕುವವರದ್ದು. ಕಟ್ಟಡ ಕಾಯುತ್ತಿದೆ ಒಳಗೆ ಕಾಲಿರಿಸುವ ಹೆಜ್ಜೆಗಳನ್ನ, ತನ್ನ ಮುಂದಿನ ಹೆಜ್ಜೆಗಳನ್ನ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ