ಸ್ಟೇಟಸ್ ಕತೆಗಳು (ಭಾಗ ೧೧೦೮)- ವಸ್ತು ಸ್ಥಿತಿ

ಸ್ಟೇಟಸ್ ಕತೆಗಳು (ಭಾಗ ೧೧೦೮)- ವಸ್ತು ಸ್ಥಿತಿ

ಅವನು ಆಗಾಗ ನೋವಿಗೆ ಜಾರುತ್ತಾನೆ. ಆ ನೋವಿನ ಯಾತನೆ ಅವನೊಬ್ಬನಿಗಷ್ಟೇ ಗೊತ್ತು ನೀವು ಕೇಳೋದಿದ್ರೆ ನಿಮಗೂ ಅವನ ನೋವಿನ ಪರಿಸ್ಥಿತಿ ಅರ್ಥ ಆಗುತ್ತೆ. ಆತನ ಹುದ್ದೆ ದೊಡ್ಡದು ಸಂಬಳದ ಮುಂದಿರುವ ಸೊನ್ನೆಗಳು ದೊಡ್ಡದು. ಹಾಗಾಗಿ ಹೆಚ್ಚಿನವರ ಬಾಯಲ್ಲಿ ಆತ ದೊಡ್ಡ ಸಂಬಳದ ಶ್ರೀಮಂತನಾಗಿದ್ದಾನೆ. ಆದರೆ ತಿಂಗಳ ಆರಂಭದಲ್ಲಿ ಸಿಕ್ಕ ಸಂಬಳ ಅದು ಆತನ ಜವಾಬ್ದಾರಿಗಳ ಕಡೆಗೆ ಸಾಗಿ ಸಾಗಿ ಕೊನೆಗೆ ಆತನಿಗೆ ತನ್ನ ದೈನಂದಿನ ಖರ್ಚಿಗು ಬಿಡಿಗಾಸು  ಉಳಿಯದ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತೆ. ಆದರೆ ಸುತ್ತಮುತ್ತಲಿದ್ದವರು ಸಹಾಯ ಕೇಳಿದಾಗ ಏನು ನೀಡಲಾಗದೆ ಮೌನ ತಾಳುತ್ತಾನೆ. ಆ ಕಾರಣಕ್ಕಾಗಿ ಆತನ ಸುತ್ತಮುತ್ತ ಆತನಿಗೆ ಜಿಪುಣ ಎಂಬ ಹೆಸರು ಕೂಡ ಸಿಕ್ಕಿಬಿದ್ದಿದೆ. ತನ್ನನ್ನು ನಂಬಿದವರನ್ನು ಕೂಡ ಸಂತೋಷಪಡಿಸಲಾರದ ಪರಿಸ್ಥಿತಿ ಅವನದು. ಜವಾಬ್ದಾರಿಯ ಹೆಗಲನ್ನೇರಿಸಿ ಏರಿಸಿ ಹೆಗಲು ನೋವಾಗಿ ಆ ನೋವು ಪಾದದವರೆಗೂ ತಲುಪಿದೆ. ಆದರೂ ನಗು ತುಂಬಿಕೊಂಡು ಬದುಕ್ತಾ ಇದ್ದಾನೆ. ಇದನ್ನು ನಿಮಗೆ ದಾಟಿಸುವುದ್ಧಕ್ಕೆ ಕಾರಣವೂ ಇದೆ, ನಿಮ್ಮ ಮುಂದೆ ಇಂಥವರು ನೂರು ಜನ ಓಡಾಡ್ತಾ ಇರುತ್ತಾರೆ. ಅವರ ಪರಿಸ್ಥಿತಿಯ ವಿವೇಚಿಸಿ ವ್ಯವಹರಿಸಿದರೆ ಅವರಿಗೆ ಒಂದಷ್ಟು ನೆಮ್ಮದಿ ಸಿಗಬಹುದು... ಏನಂತೀರಾ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ