ಸ್ಟೇಟಸ್ ಕತೆಗಳು (ಭಾಗ ೧೧೧೧)- ಅವಳ ಪಾಠ
ಕೆಲವೊಂದು ಪಾಠಗಳನ್ನು ಎಲ್ಲರೂ ಹೇಳಿಕೊಡುತ್ತಾರೆ, ಆದರೆ ನಮ್ಮವರು ಹೇಳಿದಾಗ ಅದಕ್ಕೊಂದು ಹೆಚ್ಚಿನ ಮೌಲ್ಯ ಸಿಕ್ತದೆ. ಎಲ್ಲರೂ ಹೇಳುತ್ತಾನೆ ಇದ್ದರು ಆ ದಿನದ ಕೆಲಸವನ್ನ ಅವತ್ತೇ ಮುಗಿಸು, ಆಗ ಹೆಚ್ಚು ಹೆಚ್ಚು ಮುಂದೆ ಹೋಗುವುದಕ್ಕೆ ಸಾಧ್ಯ ಇರುತ್ತೆ ಯಾವುದನ್ನು ಮುಂದೆ ದೂಡಬೇಡ. ಅವರ ಮುಂದೆ ಒಪ್ಪಿಕೊಂಡು ಮತ್ತೆ ಅದೇ ಚಾಳಿ ಮುಂದುವರಿಸುತ್ತಿದ್ದವನು ನಾನು. ಆದರೆ ಇತ್ತೀಚಿಗೆ ನನ್ನವಳು ನನ್ನ ಸರಿ ತಪ್ಪುಗಳನ್ನು ಗಮನಿಸಿ ಆಗಾಗ ಒತ್ತಿ ಒತ್ತಿ ಹೇಳುವುದ್ದಕ್ಕೆ ಆರಂಭ ಮಾಡಿದ್ದಳು. ಇವತ್ತು ನನಗೊಂದು ಗಂಟೆಯ ಶಿಸ್ತಿನ ಅಳವಡಿಕೆಯ ಪಾಠವಾಯಿತು. ತರಗತಿಯಲ್ಲಿ ಪಾಠ ಮಾಡುವವನಿಗೆ ಜೀವನದ ಪಾಠವನ್ನು ಪಕ್ಕದಲ್ಲಿ ಕುಳಿತು ಹೇಳಿಕೊಡುವುದಕ್ಕೆ ಆರಂಭ ಮಾಡಿದಳು. ಅವಳ ವಿವರಣೆಯನ್ನು ಕೇಳಿ ನನಗೆ ಇದನ್ನ ಅನುಸರಿಸಲೇಬೇಕು ಅಂತ ಅನ್ನಿಸ್ತು. ಮುಂದೆ ದೂಡಿದ ಕಾರಣ ಹಲವು ಹೆಜ್ಜೆ ಹಿಂದೆ ಉಳಿದುಬಿಟ್ಟಿದ್ದೇನೆ. ಮಾಡಬೇಕಾದ ಕೆಲಸಗಳು ತಲೆ ಮೇಲೆ ತುಂಬಿಕೊಳ್ಳುತ್ತಿವೆ. ಇನ್ನು ಬದಲಾಗದೆ ಇದ್ದರೆ ಜೀವನದಲ್ಲಿ ಖಂಡಿತ ಮುಂದೆ ಹೋಗುವುದಕ್ಕೆ ಆಗುವುದಿಲ್ಲ ಅನ್ನೋದು ಖಾತ್ರಿ ಆಯ್ತು. ನನ್ನವಳೆ ನನ್ನ ಮೇಲೆ ನಂಬಿಕೆ ಕಳೆದುಕೊಳ್ಳುವುದಕ್ಕಿಂತ ಮೊದಲು ನಾನೇನು ಅಂತ ಸಾಬೀತು ಮಾಡಬೇಕು ಹಾಗಾಗಿ ತುಂಬ ಧೈರ್ಯದಿಂದ ದೃಢ ನಿರ್ಧಾರದಿಂದ ಇವತ್ತು ಪಾಠ ಕಲ್ತಿದ್ದೇನೆ. ನಾಳೆಯಿಂದ ಅಂದಿನ ಕೆಲಸವನ್ನು ಅಂದೇ ಮಾಡುತ್ತೇನೆ. ನಾಳೆಯಿಂದ ಅಲ್ಲ ಇಂದಿನಿಂದಲೇ ಆ ಕೆಲಸದ ಕಡೆಗೆ ಮುಂದುವರೆಯುತ್ತೇನೆ.
ಇದು ಅವನ ಯೋಚನೆ .ಹಾಗೆ ನಮಗೂ ಬದಲಾಗಬೇಕು ಅಂತಿದ್ರೆ ನಮ್ಮವರು ಯಾರಾದರೂ ಒಬ್ಬರು ಹೇಳಲೇಬೇಕು. ನಿಮಗೂ ಹಾಗೆ ಹೇಳುವವರನ್ನು ಹುಡುಕಿ ಅವರಿಂದ ಒಂದೆರಡು ಹಿತನುಡಿಗಳನ್ನ ಕೇಳಿ ಖಂಡಿತ ಬದಲಾಗಬಹುದು..
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ