ಸ್ಟೇಟಸ್ ಕತೆಗಳು (ಭಾಗ ೧೧೧೫)- ಮಿಕ್ಸಿ ಜಾರು
ಊಟಕ್ಕೆ ಸಾಂಬಾರು ಬೇಕಿತ್ತು. ಅದಕ್ಕೆ ಅದರ ತಯಾರಿಯ ಕೆಲಸವೂ ಆಗಬೇಕಿತ್ತು, ಮೆಣಸು ತೆಂಗಿನ ಕಾಯಿ ಹೀಗೆ ಎಲ್ಲ ವಸ್ತುಗಳನ್ನ ಅರೆದು ಕೊಡುವುದಕ್ಕೆ ಮಿಕ್ಸಿಯನ್ನು ಬಳಸಿಕೊಂಡಿದ್ದೆ. ಒಬ್ಬನಿಗೆ ಊಟ ತಯಾರಾಗಬೇಕಾದ ಕಾರಣ ತುಂಬಾ ಹೆಚ್ಚೇನು ಪದಾರ್ಥ ಇಲ್ಲವೆಂದುಕೊಂಡು ಸಣ್ಣದಾದ ಜಾರನ್ನು ಬಳಸಿದೆ. ಅದು ನನಗೆ ಜೀವನ ಪಾಠವನ್ನೇ ಹೇಳಿಕೊಡುವುದಕ್ಕೆ ಆರಂಭ ಮಾಡುತ್ತಿದೆ.
" ನನ್ನ ಬಳಕೆ ಹುಡಿ ಮಾಡುವುದೇ ಹೊರತು, ಸಾಂಬಾರಿನ ಹಾಗೆ ನೀರನ್ನು ತುಂಬಿಸಿ ಮೆದು ಮಾಡುವುದಲ್ಲ. " ಮಾತು ಕೇಳದ ನಾನು ಅದನ್ನೇ ಮಾಡಿದ ಕಾರಣ ಎಲ್ಲಾ ಕಡೆಗೂ ಚೆಲ್ಲಿ ಅಸ್ತವ್ಯಸ್ತವಾಯಿತು, ಮತ್ತೆ ಮಾತು ಮುಂದುವರೆಯಿತು...
"ನಿನಗೆ ಮೊದಲೇ ಹೇಳಿದ್ದೇನೆ ಯಾರನ್ನು ಯಾವ ಕೆಲಸಕ್ಕೆ ಬಳಸಿಕೊಳ್ಳಬೇಕೋ ಅದಕ್ಕೆ ಬಳಸಿಕೊಳ್ಳಬೇಕು, ಅದರ ಹೊರತಾಗಿ ಸಾಧ್ಯವಿಲ್ಲದವರ ಬಳಿ ಅಸಾಧ್ಯವಾದುದನ್ನ ಹೇಳಿದರೆ ಹೀಗಾಗುತ್ತದೆ. ನಿನ್ನ ಸಮಯವೂ ವ್ಯರ್ಥ ಕೆಲಸವು ಹಾಳು, ನಿಗದಿತ ಕೆಲಸಕ್ಕಿಂತ ಹೆಚ್ಚು ಶ್ರಮಪಡಬೇಕಾದ ಅಗತ್ಯ ನಿರ್ಮಾಣವಾಗುತ್ತೆ"
ಆ ಮಿಕ್ಸಿಯ ಜಾರು ಮಾಡಿದ ಪಾಠ ನನ್ನ ಜೀವನದ ಮುಂದಿನ ಹಾದಿಯಲ್ಲಿ ಅವರವರ ಸಾಮರ್ಥ್ಯಕ್ಕೆ ತಕ್ಕುದಾದ ಕೆಲಸವನ್ನು ನೀಡಿದ್ದರೆ ಕೆಲಸದ ಜೊತೆಗೆ ಗೆಲುವು ಸುಲಭವಾಗಿ ದಕ್ಕತ್ತದೆ ಅನ್ನೋದು ಅರ್ಥವಾಯಿತು. ಜಾರು ಮೌನವಾಯಿತು.. ಮನಸ್ಸು ಚುರುಕಾಯಿತು
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ